- Advertisement -
ಮೂಡಲಗಿ – ೭೫ ವಸಂತಗಳನ್ನು ಕಂಡು ಅಮೃತ ಮಹೋತ್ಸವ ಆಚರಿಸಿಕೊಂಡ ಮೂಡಲಗಿಯ ಕೃಷಿ ಪತ್ತಿನ ಸಹಕಾರಿ ಸಂಘದ ಸ್ಮರಣ ಸಂಚಿಕೆಯಲ್ಲಿ ಮೂಡಲ ಐಸಿರಿ ಎಂಬ ಕವನ ಬರೆದಿದ್ದ ಮೂಡಲಗಿ ಸರಕಾರಿ ಕಾಲೇಜಿನ ಪ್ರೊ. ಶಿವಕುಮಾರ ಅವರನ್ನು ಸತ್ಕರಿಸಲಾಯಿತು.
ಸರಳ ಸಮಾರಂಭದಲ್ಲಿ ಸೊಸಾಯಿಟಿಯ ಅಧ್ಯಕ್ಷ ಸಂದೀಪ ಸೋನವಾಲಕರ ಹಾಗೂ ಪತ್ರಕರ್ತ ಬಾಲಶೇಖರ ಬಂದಿಯವರು ಶಿವಕುಮಾರ ಅವರಿಗೆ ಸ್ಮರಣ ಸಂಚಿಕೆ ನೀಡಿ ಶಾಲು ಹೊದಿಸಿ ಸತ್ಕಾರ ಮಾಡಿದರು.
ಈ ಸಂದರ್ಭದಲ್ಲಿ ಸೊಸಾಯಿಟಿಯ ನಿರ್ದೇಶಕರು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು