spot_img
spot_img

ಮೂಡಲಗಿ ತಾಲೂಕ ೨ ನೇ ಸಾಹಿತ್ಯ ಸಮ್ಮೇಳನ

Must Read

ಮೂಡಲಗಿ: ಮೂಡಲಗಿ ತಾಲೂಕಾ ೨ ನೇ ಸಾಹಿತ್ಯ ಸಮ್ಮೇಳನವು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ದಿ. ೧೮ ರಂದು ಶಿವಾಪೂರ ಗ್ರಾಮದ ಪಾರಿಜಾತ ಪಿತಾಮಹ ಕುಲಗೋಡ ತಮ್ಮಣ್ಣ ವೇದಿಕೆಯಲ್ಲಿ ನಡೆಯಲಿದೆ.

ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಹಿರಿಯ ಸಾಹಿತಿ ರೇ. ಭಾಸ್ಕರ ಸಣ್ಣಕ್ಕಿ ವಹಿಸಿಕೊಳ್ಳಲಿದ್ದಾರೆ.

ಸಾನ್ನಿಧ್ಯವನ್ನು ಮೂಡಲಗಿ ಶಿವಬೋಧರಂಗ ಸಂಸ್ಥಾನ ಪೀಠದ ಪೀಠಾಧಿಪತಿಗಳಾದ ಶ್ರೀ ದತ್ತಾತ್ರಯ ಬೋಧ ಹಾಗೂ ಶ್ರೀ ಶೀಧರ ಬೋಧ ಸ್ವಾಮೀಜಿಗಳಿ ವಹಿಸಲಿದ್ದಾರೆ.

ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ದಿ. ಶಂಕರಗೌಡ ಪಾಟೀಲ ಸಭಾಮಂಟಪ, ಶ್ರೀ ಅಡವಿ ಸಿದ್ದೇಶ್ವರ ದಾಸೋಹ ಮಂಟಪ, ಲಾವಣಿಕಾರ ಸುಣಧೋಳಿ ಸಿದ್ಧರಾಮ ಮಹಾದ್ವಾರ, ಜನಪದ ಕವಿ ಡಾ. ನಿಂಗಣ್ಣ ಸಣ್ಣಕ್ಕಿ ಮಹಾದ್ವಾರ, ಭಜನಾ ಕಲಾವಿದ ಬಸಯ್ಯ ಮಠಪತಿ ಮಹಾದ್ವಾರ ಹಾಗೂ ಭಜನಾ ಕಲಾವಿದ ರಾಮಚಂದ್ರಪ್ಪ ಮುಕ್ಕಣ್ಣವರ ಮಹಾದ್ವಾರ ಗಳನ್ನು ನಿರ್ಮಿಸಲಾಗಿದೆ.

ದಿ. ೧೮ ರಂದು ಬೆಳಿಗ್ಗೆ ೮ ಕ್ಕೆ ಧ್ವಜಾರೋಹಣ, ೯ ಕ್ಕೆ ಶ್ರೀ ಭುವನೇಶ್ವರಿ ಪೂಜೆ ಹಾಗೂ ಮೆರವಣಿಗೆ ಮಡೆಯಲಿದ್ದು ಗ್ರಾ ಪಂ ಅಧ್ಯಕ್ಷ ಬಸವರಾಜ ಸಾಯನ್ನವರ ಪೂಜೆ ನೆರವೇರಿಸಿ, ತಹಶೀಲ್ದಾರ ಡಿ ಜಿ ಮಹಾತ್ ಮೆರವಣಿಗೆಗೆ ಚಾಲನೆ ನೀಡುವರು.

ಬೆಳಿಗ್ಗೆ ೧೦ ಗಂಟೆಗೆ ಉದ್ಘಾಟನಾ ಸಮಾರಂಭ . ಉದ್ಘಾಟನೆಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ನೆರವೇರಿಸುವರು, ಅಧ್ಯಕ್ಷತೆಯನ್ನು ಮಲ್ಲನಗೌಡಾ ಶಂಕರಗೌಡಾ ಪಾಟೀಲ ವಹಿಸುವರು. ಚಿಂತನ ಗೋಷ್ಠಿ ಮಧ್ಯಾಹ್ನ ೨ ಗಂಟೆಗೆ, ಕವಿಗೋಷ್ಠಿ ೩ ಗಂಟೆಗೆ ನಡೆಯಲಿವೆ.

ಸಾಯಂಕಾಲ ೪ಕ್ಕೆ ಸಾಧಕರ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು ಅಧ್ಯಕ್ಷತೆಯನ್ನು ಪ್ರೊ.ಎಸ್ ಎಮ್ ಕಮದಾಳ ವಹಿಸಲಿದ್ದಾರೆ. 

೫ ಗಂಟೆಗೆ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು  ಸಾಹಿತಿ ಡಾ. ಮಹಾದೇವ ಜಿಡ್ಡಿಮನಿ ವಹಿಸುವರು ನಂತರ ಸಮ್ಮೇಳನದ ಸರ್ವಾಧ್ಯಕ್ಷ ರೇ. ಭಾಸ್ಕರ ಸಣ್ಣಕ್ಕಿ ತಮ್ಮ ನುಡಿಗಳನ್ನಾಡಲಿದ್ದಾರೆ.

   ಸಂಜೆ ೭ ಗಂಟೆಗೆ ನಡೆಯುವ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖಾನಟ್ಟಿಯ ಕಲಾವಿದ ಮುತ್ತಮ್ಮ ಸವದಿ ವಹಿಸುವರು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಲಾ ತಂಡಗಳು ಆರೂಢ ಜ್ಯೋತಿ ಸುಗಮ ಸಂಗೀತ ಕಲಾ ತಂಡ ಮುನ್ಯಾಳ, ಶ್ರೀ ಅಡವಿ ಸಿದ್ದೇಶ್ವರ ಭಜನಾ ಮಂಡಳಿ ಶಿವಾಪೂರ (ಹ) ಶ್ರೀ ದುರ್ಗಾದೇವಿ ಭಜನಾ ಮಂಡಳಿ ಶಿವಾಪೂರ ಹಾಗೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂಬುದಾಗಿ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಪ್ರಧಾನ ಕಾರ್ಯದರ್ಶಿ ಡಾ. ಸಂಜಯ ಶಿಂಧಿಹಟ್ಟಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕೌಜಲಗಿ ಹೊಸ ತಾಲೂಕು ರಚನೆಗೆ ಸಂಪೂರ್ಣ ಬೆಂಬಲ- ಶಾಸಕ ಬಾಲಚಂದ್ರ ಜಾರಕಿಹೊಳಿ

ಎಲ್ಲರೂ ಸೇರಿ ಒಗ್ಗಟ್ಟಾಗಿ ಕೌಜಲಗಿಯನ್ನು ತಾಲೂಕು ಕೇಂದ್ರವನ್ನಾಗಿಸಲು ಪ್ರಯತ್ನಿಸೋಣ ಕೌಜಲಗಿ(ತಾ.ಗೋಕಾಕ): ಕೌಜಲಗಿ ಹೊಸ ತಾಲೂಕು ರಚನೆಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಅರಭಾವಿ ಶಾಸಕ, ಕೆಎಮ್‍ಎಫ್...
- Advertisement -

More Articles Like This

- Advertisement -
close
error: Content is protected !!