ಮೂಡಲಗಿ – ಸಡಗರ ಸಂಭ್ರಮಗಳಿಂದ ಎಲ್ಲರೂ ಸೇರಿ ಮೂಡಲಗಿ ತಾಲೂಕಾ ಸಾಹಿತ್ಯ ಸಮ್ಮೇಳನವನ್ನು ಆಚರಿಸೋಣ ಸಮ್ಮೇಳನದ ಯಶಸ್ಸಿಗಾಗಿ ಪ್ರತಿಯೊಬ್ಬರೂ ಕೈಜೋಡಿಸಿ ಎಂದು ತಾಲೂಕಾ ಕಸಾಪ ಅಧ್ಯಕ್ಷ ಡಾ.ಸಂಜಯ ಸಿಂಧಿಹಟ್ಟಿ ಹೇಳಿದರು.
ದಿ.೧೮ ರಂದು ತಾಲೂಕಿನ ಶಿವಾಪೂರ ಗ್ರಾಮದಲ್ಲಿ ನಡೆಯಲಿರುವ ಮೂಡಲಗಿ ತಾಲೂಕಾ ೨ ನೇ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಸಾಹಿತಿ ರೇ. ಭಾಸ್ಕರ ಸಣ್ಣಕ್ಕಿಯವರನ್ನಾಗಿ ಅಯ್ಕೆ ಮಾಡಲಾಗಿದ್ದು ಅವರಿಗೆ ಇಂದೇ ಆಹ್ವಾನ ನೀಡಲಾಗುವುದು. ಶಿವಾಪೂರದ ಶ್ರೀ ಅಡವಿ ಸಿದ್ದೇಶ್ವರ ಮಠದಲ್ಲಿ ಸಮ್ಮೇಳನ ಅದ್ದೂರಿಯಾಗಿ ನಡೆಯಲಿದೆ.
ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳು, ಜಾನಪದ ಕಾರ್ಯಕ್ರಮಗಳು, ಕಲಾಪ್ರದರ್ಶನಗಳು ನಡೆಯಲಿವೆ. ವಿವಿಧ ಕಲಾವಿದರು ಸಾಹಿತಿಗಳಿಗೆ ಸತ್ಕಾರ ನೆರವೇರಲಿದೆ ಎಂದು ಸಂಕ್ಷಿಪ್ತವಾಗಿ ಸಮ್ಮೇಳನದ ವಿವರಗಳನ್ನು ನೀಡಿದರು.
ತಾಲೂಕಾ ಕಸಾಪ ದ ನಿಕಟ ಪೂರ್ವ ತಾಲೂಕಾ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ಮಾತನಾಡಿದರು.
ವೇದಿಕೆಯ ಮೇಲೆ ಶ್ರೀಮತಿ ಶಾಂತಾ ಜಿಣಗಿ, ವೆಂಕಟೇಶ ಹಂಚಿನಾಳ, ಡಾ. ಮಹಾದೇವ ಪೋತದಾರ,ಎ ಎಚ್ ವಂಟಗೋಡಿ ಉಪಸ್ಥಿತರಿದ್ದರು.
ಬಿ ಆರ್ ತರಕಾರ ಸ್ವಾಗತಿಸಿ ನಿರೂಪಿಸಿದರು