spot_img
spot_img

ಮೂಡಲಗಿ ತಾಲೂಕಾ ಬೃಹತ್ ಹಡಪದ ಸಮಾವೇಶ ದಿ. ೧೩ ರಂದು

Must Read

- Advertisement -

ಮೂಡಲಗಿ: ಹಡಪದ ಅಪ್ಪಣ್ಣನವರ ದೇವಸ್ಥಾನದಲ್ಲಿ ಶರಣ ಸಂಸ್ಕೃತಿ ಉತ್ಸವದ ದಶಮಾನೋತ್ಸವದ ಮೂಡಲಗಿ ತಾಲೂಕಾ ಹಡಪದ ಸಮಾಜದ ಬೃಹತ್ ಸಮಾವೇಶ ದಿ. ೧೩ ರಂದು ನಗರದ ಈರಣ್ಣ ನಗರದಲ್ಲಿ ನಡೆಯಲಿದೆ ಎಂದು ಮೂಡಲಗಿ ತಾಲೂಕಾ ಹಡಪದ ಸಮಾಜದ ಖಜಾಂಚಿ ಸಾತಗೌಡಾ ನಾವಿ ಹೇಳಿದರು.

ಶನಿವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಡಪದ ಸಮಾಜ ಏಳಿಗೆಗಾಗಿ ಹಲವು ಬೇಡಿಕೆಗಳನ್ನು ಈ ಸಂದರ್ಭದಲ್ಲಿ ಮಂಡಿಸಲಾಗುವುದು ಎಂದು ಹೇಳಿ, ಸಮಾಜವು ಆರ್ಥಿಕವಾಗಿ ಹಿಂದುಳಿದಿದ್ದು

  1. ತಾಲೂಕಿನಲ್ಲಿ ಬರುವ ಎಲ್ಲಾ ಹಳ್ಳಿಗಳಲ್ಲಿ ಸೇವೆ ಮಾಡಲು ತಮ್ಮ ಸಮಾಜಕ್ಕೆ ಜಾಗ ಮತ್ತು ೫ ಲಕ್ಷ ರೂ. ಅನುದಾನ ನೀಡಬೇಕು.
  2. ಅಪ್ಪಣ್ಣನವರ ದೇವಸ್ಥಾನಕ್ಕೆ ೫೦ ಲಕ್ಷ ರೂ. ನೀಡಬೇಕು.
  3. ಯಾದವಾಡದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಮುದಾಯ ಭವನಕ್ಕೆ ಹೆಚ್ಚಿನ ಹಣ ಸಹಾಯ ಮಾಡಬೇಕು.
  4. ಉತ್ತರ ಪ್ರದೇಶ ಹಾಗೂ  ಬಿಹಾರದ ನಾವಿಗಳಿಂದ ಸ್ಥಳಿಯರ ರಕ್ಷಣೆ ಮಾಡಬೇಕು ಎಂಬ ಬೇಡಿಕೆಗಳನ್ನು ಮಂಡಿಸಲಾಗುವುದು ಎಂದರು.

ಅಥಣಿ ತಾಲೂಕಾ ಅಧ್ಯಕ್ಷ ಶಿವಾನಂದ ಹುನ್ನೂರ ಮಾತನಾಡಿ, ಈ ಕಾರ್ಯಕ್ರಮಕ್ಕೆ ಸಕಲರೂ ಆಗಮಿಸಿ ಯಶಸ್ವಿಗೊಳಿಸಬೇಕು. ಸಮಾಜ ಚಿಕ್ಕದಿದ್ದರೂ ದೊಡ್ಡದಾಗಿ ಕಾಣಿಸಬೇಕಾಗಿದೆ. ಹೆಣ್ಣು ಮಕ್ಕಳು, ಚಿಕ್ಕ ಮಕ್ಕಳಾದಿಯಾಗಿ ಎಲ್ಲರೂ ಸಮಾವೇಶಕ್ಕೆ ಆಗಮಿಸಬೇಕು ಎಂದರು.

- Advertisement -

ಶಿವಬಸು ಸುಣಧೋಳಿ, ನಗರ ಘಟಕದ ಅಧ್ಯಕ್ಷ  ಹಾಗೂ ಮೂಡಲಗಿ ತಾಲೂಕಾ ಅಧ್ಯಕ್ಷ ಶಿವಬೋಧ ಉದಗಟ್ಟಿ ಮಾತನಾಡಿ ಬೃಹತ್ ಸಮಾವೇಶದ ರೂಪುರೇಷೆ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬೆಳಗಾವಿಯ ಪ್ರಧಾನ ಕಾರ್ಯದರ್ಶಿ ನಾಗಪ್ಪ ಹಡಪದ, ಶ್ರೀಕಾಂತ ನಾವಿ, ಕೃಷ್ಣಾ ನಾವಿ, ಮಹಾಂತೇಶ ಹಡಪದ ಹಾಗೂ ಉಮೇಶ ಹಡಪದ ಉಪಸ್ಥಿತರಿದ್ದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group