- Advertisement -
ಮೂಡಲಗಿ: ರಂಗ ಪಂಚಮಿಯ ನಿಮಿತ್ತ ಮೂಡಲಗಿ ನಗರದಲ್ಲಿ ಸಂಭ್ರಮ ಸಡಗರಗಳಿಂದ ಪರಸ್ಪರ ಬಣ್ಣ ಹಚ್ಚಿ ಹೋಳಿ ಹಬ್ಬ ಆಚರಿಸಲಾಯಿತು.
- Advertisement -
ಇಡೀ ನಗರ ವಿವಿಧ ಬಣ್ಣಗಳಿಂದ ಶೃಂಗಾರಗೊಂಡಂತಿತ್ತು. ಕಲ್ಮೇಶ್ವರ ಸರ್ಕಲ್, ಗಾಂಧಿ ಚೌಕದಲ್ಲಿ ಬಣ್ಣದ ಸಿಂಚನಗಳನ್ನು ರೂಪಿಸಿ ಅವುಗಳ ಕೆಳಗೆ ನೃತ್ಯ ಮಾಡುತ್ತ ಬಣ್ಣದಲ್ಲಿ ತೊಯ್ಯಿಸಿಕೊಳ್ಳುತ್ತ ಯುವಸಮೂಹ ಸಂಭ್ರಮಿಸಿತು.
- Advertisement -
ಡಾಲ್ಬಿಯಲ್ಲಿ ಹಾಡು ಹಚ್ಚಿ ಸಂಭ್ರಮದಿಂದ ಹೆಜ್ಜೆ ಹಾಕುತ್ತ ಕಾಮದೇವನನ್ನು ನೆನೆಯುತ್ತ ಯುವಕ ಯುವತಿಯರು ಹಾಗೂ ಮಕ್ಕಳೆನ್ನದೆ ಮುದುಕರೆನ್ನದೆ ಎಲ್ಲರೂ ಭಾಗವಹಿಸಿ ಪರಸ್ಪರ ಬಣ್ಣ ಎರಚಾಡಿದರು. ನಗರದ ಎಲ್ಲಾ ಕಡೆ ಶಾಂತಿಯುತವಾಗಿ ಧರ್ಮಾತೀತವಾಗಿ ಬಣ್ಣ ಆಡಿದ್ದು ವಿಶೇಷವಾಗಿತ್ತು.
ಇಂದಿನ ಬಣ್ಣದಾಟದಲ್ಲಿ ನಗರದ ಪತ್ರಕರ್ತರೂ ಭಾಗಿಯಾಗಿ ಬಣ್ಣ ಆಡಿದರು. ಈರಪ್ಪ ಢವಳೇಶ್ವರ, ಮಂಜುನಾಥ ರೇಳೇಕರ, ಶಿವಾನಂದ ಮುಧೋಳ, ಸುಭಾಸ ಗೊಡ್ಯಾಗೋಳ ಸೇರಿದಂತೆ ಅನೇಕರಿದ್ದರು.