ಮೂಡಲಗಿ – ರಾಜ್ಯ ಸರಕಾರ ಹಾಗೂ ನೋಂದಣಿ ಮಹಾಪರಿವೀಕ್ಷರ ಆದೇಶದಂತೆ ರಾಜ್ಯದ ಪ್ರತಿಯೊಂದು ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿನ ಉಪ ನೋಂದಣಿ ಕಛೇರಿಗಳು ಸರದಿಯ ಆಧಾರದ ಮೇಲೆ ೨ನೇ ಶನಿವಾರ, ೪ನೇ ಶನಿವಾರ ಮತ್ತು ಭಾನುವಾರ ರಜಾ ದಿನದಂದು ಕರ್ತವ್ಯ ನಿರ್ವಹಿಸುವ ಒಂದು ಉಪನೋಂದಣಿ ಕಛೇರಿಗೆ ಮಂಗಳವಾರ ರಜಾ ದಿನವೆಂದು ಆದೇಶಿಸಿದ್ದು, ಈ ಆದೇಶದಂತೆ ಜೂ.೧ ಭಾನುವಾರದಂದು ಬೆಳಗಾವಿ ಜಿಲ್ಲೆಯ ಮೂಡಲಗಿ ಉಪ ನೋಂದಣಿ ಕಛೇರಿ ಕರ್ತವ್ಯ ನಿರ್ವಹಿಸಲಿದೆ.
ಸಾರ್ವಜನಿಕರು ಇದರ ಉಪಯೋಗ ಪಡೆದುಕೋಳ್ಳಬೇಕು ಎಂದು ಜಿಲ್ಲಾ ನೋಂದಣಿ ಅಧಿಕಾರಿ ಮಹಾಂತೇಶ ಪಟಾತರ ಹಾಗೂ ಮೂಡಲಗಿ ಉಪ ನೋಂದಣಿ ಅಧಿಕಾರಿ ಹರಿಯಪ್ಪ ಓ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.