spot_img
spot_img

ಮೂಡಲಗಿಗೆ ಆಗಮಿಸಿದ ಕಿತ್ತೂರ ಜ್ಯೋತಿ ; ಅದ್ದೂರಿ ಸ್ವಾಗತ

Must Read

spot_img
        ಮೂಡಲಗಿ:  ಕಿತ್ತೂರು ಉತ್ಸವದ ಸಂಭ್ರಮದ “ವೀರ ಜ್ಯೋತಿ” (ತೇರು)ಗೆ ನಗರದ ವೀರರಾಣಿ ಕಿತ್ತೂರ ಚೆನ್ನಮ್ಮ ವೃತ್ತದಲ್ಲಿ ತಾಲೂಕಾಡಳಿತ ಮತ್ತು ಪಟ್ಟಣದ ಎಲ್ಲ ಸಮಾಜ ಬಾಂಧವರು ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡರು.
  1824-ಅಕ್ಟೋಬರ್, 23ರಂದು ಬ್ರಿಟಿಷರ ವಿರುದ್ಧ ಕಿತ್ತೂರ ರಾಣಿ ಚೆನ್ನಮ್ಮ ಹೋರಾಡಿ ಜಯಗಳಿಸಿದ ನೆನಪಿಗಾಗಿ ಪ್ರತಿ ವರ್ಷವೂ ಅಕ್ಟೋಬರ್,23 ರಿಂದ ಮೂರು ದಿನಗಳ ಕಾಲ ಅದ್ಧೂರಿಯಾಗಿ ಕಿತ್ತೂರು ಉತ್ಸವ ನಡೆಯುತ್ತದೆ.
  ಕಿತ್ತೂರಿನ  200 ನೆಯ ವಿಜಯೋತ್ಸವದ ವರ್ಷಾಚರಣೆಯ ಸಂಭ್ರಮವನ್ನು ಸಾರುತ್ತ  “ವೀರ ಜ್ಯೋತಿ” ಬಹುತೇಕ ನಾಡಿನ  ತುಂಬೆಲ್ಲ ಸಂಚರಿಸಿ ಶನಿವಾರ ಮೂಡಲಗಿ ಪಟ್ಟಣಕ್ಕೆ ಆಗಮಿಸಿತು.
     ತಾಲೂಕಾ ಪಂಚಮಸಾಲಿ ಅಧ್ಯಕ್ಷ ಬಸವರಾಜ ಪಾಟೀಲ, ನಗರ ಘಟಕದ ಅಧ್ಯಕ್ಷ ಬಸವರಾಜ ರಂಗಾಪೂರ, ಮುಖಂಡರು ಎಸ್.ಆರ್.ಸೋನವಾಲಕರ, ಕೇದಾರಿ ಭಷ್ಮೆ, ಮಹಾದೇವ ಶೆಕ್ಕಿ, ಚೇತನ ನಿಶಾನಿಮಠ, ಆರ್.ವಿ.ಯರಗಟ್ಟಿ, ತಹಶಿಲ್ದಾರ ಶಿವಾನಂದ ಬಬಲಿ, ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಚಿದಾನಂದ ಮುಗಳಖೋಡ ಇನ್ನು ಅನೇಕರು ಕಿತ್ತೂರ ಜ್ಯೋತಿ ರಥವನ್ನು ಅದ್ಧೂರಿಯಾಗಿ ಸ್ವಾಗತಿಸಿ, ಬೀಳ್ಕೊಟ್ಟರು.
- Advertisement -
- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group