ಮುಡಿಏರದ ಗುಡಿಸೇರದ ಕಾಡುಮಲ್ಲಿಗೆ
(ಕಾಡುಮಲ್ಲಿಗೆಯ ಅಳಲು)
ಮೆಲ್ಲಗೆ ಮಲ್ಲಿಗೆಯೊಂದು
ಕಾನನದಿ ಅರಳಿರಲು
ದುಂಬಿಯೊಂದು ಬಂದು
ಮಕರಂದ ಹೀರಿತು
ಮಧು ಹೀರಲು ಕೇಳಲಿಲ್ಲ
ಮಲ್ಲಿಗೆಯ ಒಪ್ಪಿಗೆಯ
ಬೇಲಿಯ ತುಂಬೆಲ್ಲ
ದುಂಬಿಗಳದೇ ಝೇಂಕಾರ
ಯಾರೂ ಬೆಳಸಲಿಲ್ಲ
ನೀರುಣಿಸಿ ಪೋಷಿಸಲಿಲ್ಲ
ಪ್ರಕೃತಿ ಸಹಜತೆಯಲಿ ಬೆಳೆಯಿತು
ದಿನಕರಣ ಪ್ರಭೆಗೆ ಅರಳಿತು
ಬೇಲಿಯ ಹೂವೆಂದು
ಕಂಡವರು ಕೀಳುವರು
ವಾರಸುದಾರರಿಲ್ಲವೆಂದು
ಮೂಸಿ ಬಿಸಾಡುವರು
ಶ್ರೀಮತಿ ಜ್ಯೋತಿ ಕೋಟಗಿ, ಬಿ ಆರ್ ಪಿ ಕಿತ್ತೂರ