spot_img
spot_img

ಗ್ರಾಮೀಣ ಜನರಿಗೆ ಉಪಯುಕ್ತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು – ಈರಣ್ಣ ಕಡಾಡಿ

Must Read

ಮೂಡಲಗಿ – ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲ ಅನುಕೂಲಗಳೂ ಇರುವ ಆಸ್ಪತ್ರೆಗಳ ನಿರ್ಮಾಣವಾಗುತ್ತಿರುವುದು ಶ್ಲಾಘನೀಯ. ನೂತನ ಆರೋಗ್ಯ ಆಧಾರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸದುಪಯೋಗ ಸಮಾಜದ ಎಲ್ಲರಿಗೂ ಆಗಬೇಕು ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಮೂಡಲಗಿಯಲ್ಲಿ ಅಲ್ಲಮಪ್ರಭು ಫೌಂಡೇಶನ್ ವತಿಯಿಂದ ನಾಗಲಿಂಗ ನಗರ ಗುರ್ಲಾಪೂರ ರಸ್ತೆಯಲ್ಲಿ ನೂತನವಾಗಿ ಕಟ್ಟಿಸಲಾಗಿರುವ ಆರೋಗ್ಯ ಆಧಾರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಆರೋಗ್ಯ ಸೇವೆಗಳು ದೊರಕಬೇಕು. ಈ ನಿಟ್ಟಿನಲ್ಲಿ ಅಲ್ಲಮಪ್ರಭು ಫೌಂಡೇಶನ್ ಒಳ್ಳೆಯ ಕೆಲಸ ಮಾಡಿದೆ ಎಂದು ಅವರು ನುಡಿದರು.

ನೂತನ ಬೃಹತ್ ಕಟ್ಟಡದಲ್ಲಿ ಚಿಕ್ಕ ಮಕ್ಕಳ ತಜ್ಞರಾದ ಡಾ.ಮಹಾಂತೇಶ ಕಡಾಡಿ, ಡಾ.ಬಸವರಾಜ ಫುಲಾರಿ, ಹೃದಯ ಹಾಗೂ ಮಧುಮೇಹ ತಜ್ಞರಾದ ಡಾ.ಸಂಗಮೇಶ ಮಮದಾಪೂರ, ಎಲುವು ಕೀಲು ತಜ್ಣರಾದ ಡಾ.ಸಂದೀಪ ಶಿರಹಟ್ಟಿ ಹಾಗೂ ಸ್ತ್ರೀ ರೋ ಮತ್ತು ಪ್ರಸೂತಿ ತಜ್ಞರಾದ ಡಾ. ಶ್ರೀಮತಿ ಮಯೂರಿ ಕಡಾಡಿಯವರು ಈ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲಿದ್ದು, ಅನುದುನವೂ ರೋಗಿಗಳಿಗೆ ಎಲ್ಲ ರೀತಿಯ ಸೇವಾ ಸೌಲಭ್ಯಗಳನ್ನು ಆಸ್ಪತ್ರೆ ಒದಗಿಸಲಿದೆ ಎಂಬುದಾಗಿ ಮ್ಯಾನೇಜರ್ ಮಾರುತಿ ಶಾಬನ್ನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಮೂಡಲಗಿ ಶಿವಬೋಧರಂಗ ಸಂಸ್ಥಾನ ಪೀಠದ ಶ್ರೀ ಅಮೃತ ಬೋಧ ಸ್ವಾಮೀಜಿ ಹಾಗೂ ಶ್ರೀ ರೇವಣಸಿದ್ದೇಶ್ವರ ವಿರಕ್ತಮಠ ಬೆಂಡವಾಡದ ಶ್ರೀ ಗುರುಸಿದ್ಧ ಮಹಾಸ್ವಾಮೀಜಿ ವಹಿಸಿದ್ದರು.

ಸಮಾರಂಭದಲ್ಲಿ ಎಸ್ ಆರ್ ಸೋನವಾಲಕರ, ಡಾ. ಬಿ ಎಮ್ ಫಾಲಭಾಂವಿ, ಕೆ ಟಿ ಗಾಣಿಗೇರ, ಎಸ್ ಜಿ ಢವಳೇಶ್ವರ ಇನ್ನಿತರರು ಪಾಲ್ಗೊಂಡಿದ್ದರು.

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!