spot_img
spot_img

ಬಹುಮುಖ ಪ್ರತಿಭೆಯ ಡಾ. ಶಶಿಕಾಂತ ಪಟ್ಟಣ

Must Read

- Advertisement -

ಡಾ. ಶಶಿಕಾಂತ ಪಟ್ಟಣ ತಿಳಿವಳಿಕೆ ತಜ್ಞರು. ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರು. ವಚನ ಅಧ್ಯಯನ ವೇದಿಕೆ ,ಅಕ್ಕನ ಅರಿವು, ಬಸವಾದಿ ಶರಣರ ಚಿಂತನ ಕೂಟ ಮುಂತಾದ ಸಂಸ್ಥೆಗಳಲ್ಲಿ ಸಕ್ರಿಯರು.

ಡಾ ಶಶಿಕಾಂತ ಪಟ್ಟಣ ಅವರು ಔಷಧೀಯ ವಿಜ್ಞಾನದ ಒಬ್ಬ  ಶ್ರೇಷ್ಠ ವಿಜ್ಞಾನಿ, ಸಂಶೋಧಕ, ವೈಚಾರಿಕ   ಚಿಂತಕ , ಕವಿ ವಿಮರ್ಶಕ ಪ್ರಗತಿಪರ ಸಾಹಿತಿಗಳು.  ಬುದ್ಧ ಬಸವ ಅಂಬೇಡಕರ ಲೋಹಿಯಾ ಜಯಪ್ರಕಾಶನಾರಾಯಣ ಅವರ ತತ್ವಗಳನ್ನು ಮೈಗೂಡಿಸಿಕೊಂಡು ಸಾಮಾಜಿಕ ಪರಿವರ್ತನೆಯ ಕನಸು ಕಾಣುವ  ಇವರು ಬೆಳಗಾವಿ ಜಿಲ್ಲೆಯ ರಾಮದುರ್ಗದ  ಸ್ವಾತಂತ್ರ ಹೋರಾಟದ ಮನೆತನದಲ್ಲಿ ಜನಿಸಿದವರು.
ಪ್ರಾಥಮಿಕ ಶಿಕ್ಷಣವನ್ನು ರಾಮದುರ್ಗ ಮತ್ತೆ ಮುಂದೆ ಸೈನಿಕ ಶಾಲೆ ವಿಜಯಪುರ, ಪಿಯುಸಿ ಕರ್ನಾಟಕ ಕಾಲೇಜು ಧಾರವಾಡ ಹೀಗೆ ಅಧ್ಯಯನಕ್ಕಾಗಿ ಬೇರೆ ಬೇರೆ ಊರುಗಳನ್ನು ಅಲೆಯುತ್ತ
ಮುಂದೆ ಬೆಳಗಾವಿಯ ಜೆ ಎನ್ ಮೆಡಿಕಲ್ ಕಾಲೇಜಿನಲ್ಲಿ ಔಷಧೀಯ ವಿಜ್ಞಾನ ಮಹಾವಿದ್ಯಾಲಯದಿಂದ ತಮ್ಮ ಬಿ ಫಾರ್ಮ ಮತ್ತು ಎಂ ಫಾರ್ಮ ಮುಗಿಸಿ ಅಲ್ಲಿಯೇ ಅಧ್ಯಾಪಕರಾಗಿ ಸೇವೆ ಆರಂಭಿಸಿದರು.

ಔಷಧ ವಿಜ್ಞಾನದ ಮೇಲೆ ತಮ್ಮ ಪಿ ಎಚ್ ಡಿ ಪದವಿಯನ್ನು ಬೆಂಗಳೂರಿನ ರಾಜೀವ ಗಾಂಧೀ  ಆರೋಗ್ಯ ವಿಶ್ವ ವಿದ್ಯಾಲಯದಿಂದ ಪಡೆದರು . ಕೆ ಎಲ್ ಈ ಸಂಸ್ಥೆಯಲ್ಲಿ ಸುಮಾರು ಇಪ್ಪತ್ತು ವರುಷಗಳ ವರೆಗೆ ಕಾರ್ಯ ನಿರ್ವಹಿಸಿ ಮುಂದೆ ಮಹಾರಾಷ್ಟ್ರದ ಪುಣೆಯ ಫಾರ್ಮಸಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸುಮಾರು ಹನ್ನೆರಡು ವರುಷಗಳಿಂದ  ಸೇವೆ ಸಲ್ಲಿಸುತ್ತಾ ಜೊತೆಗೆ ಕನ್ನಡ ಸಾಹಿತ್ಯ ಸೇವೆಯನ್ನು ಅಪಾರ ಪ್ರಾಮಾಣದಲ್ಲಿ ಮಾಡಿದ್ದು ಶ್ಲಾಘನೀಯವಾದ ಸಂಗತಿ.  ಗಡಿನಾಡು ಬೆಳಗಾವಿಯಿಂದ ಮಹಾರಾಷ್ಟ್ರದ ಸಂಸ್ಕೃತಿ ನಗರ ಪುಣೆಯಲ್ಲಿ ತಮ್ಮ ವೃತ್ತಿ ಮತ್ತು ಪ್ರವೃತ್ತಿಗಳನ್ನು ಸಮತೋಲನಗೊಳಿಸಿ ಜನಾನುರಾಗಿ ಸಾಹಿತಿ ಎನಿಸಿದ್ದಾರೆ. ಅನೇಕ ಸಂಶೋಧನಾ ಕೃತಿಗಳು ವಚನ ಸಾಹಿತ್ಯದಲ್ಲಿ ವಿಪುಲ ಕಾರ್ಯ ನಿರ್ವಹಿಸಿದ್ದಾರೆ.   ಆಂಗ್ಲ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಮುಂದೆ ತಾಂತ್ರಿಕ ವೈದ್ಯಕೀಯ ಶಿಕ್ಷಣ ಇವುಗಳ ಜೊತೆ ಜೊತೆಗೆ ಕನ್ನಡ ಸಾಹಿತ್ಯದ ಮೇಲೆ ಅಪಾರವಾದ ಪಾಂಡಿತ್ಯವನ್ನು ಹೊಂದಿರುವ ಡಾ ಶಶಿಕಾಂತ ಪಟ್ಟಣ ಅವರು ವಚನ ಸಾಹಿತ್ಯ,   ಸೃಜನ ಶೀಲ ಕನ್ನಡ  ಕಾವ್ಯ ಪರಂಪರೆಯನ್ನು ಜೀವಂತವಾಗಿಟ್ಟುಕೊಂಡು ಉತ್ತಮ ಸಾಹಿತ್ಯ ಕೃಷಿ ಮಾಡುತ್ತಿರುವುದು ನಮ್ಮೆಲ್ಲರ ಮಧ್ಯ ಒಬ್ಬ ದಿಟ್ಟ ಸಂಶೋಧಕ ಸಾಹಿತಿ ಕವಿಯಲ್ಲದೆ ನಮ್ಮನ್ನು ಪ್ರೋತ್ಸಾಹಿಸುವ ಸ್ನೇಹ ಜೀವಿ. ಅಕ್ಕನ ಅರಿವು ಬಸವಾದಿ ಶರಣರ ವಿಚಾರವೇದಿಕೆ ಮತ್ತು ವಚನ ಅಧ್ಯಯನಗಳ ಮೂಲಕ ಬಸವ ತತ್ವವನ್ನು ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ ಪ್ರಚಾರ ಮತ್ತು ಪ್ರಸಾರ ಮಾಡುವ ಅವರ ಸಂಘಟನಾ ಕೌಶಲ್ಯ ಅಪ್ರತಿಮ ಮತ್ತು ಆದರಣೀಯವಾಗಿದೆ.

- Advertisement -

ಡಾ ಶಶಿಕಾಂತ ಪಟ್ಟಣ ಇವರ ವಚನ ಚಿಂತನೆ ಅರ್ಥೈಸುವ ರೀತಿ ಮನೋಜ್ಞವಾಗಿದೆ. ಕನ್ನಡ ಭಾಷೆಯ ಮೇಲೆ ಪ್ರಭುತ್ವ, ವಚನಗಳನ್ನು ಸಾಂದರ್ಭಿಕವಾಗಿ ವಿಶ್ಲೇಷಿಸುವ ಕೌಶಲ್ಯತೆಯನ್ನು ಮೆಚ್ಚುವಂತದ್ದು.
ವೃತ್ತಿ ಪ್ರವೃತ್ತಿ ಬೇರೆ ಬೇರೆಯಾದರು ಶರಣರ ಚಿಂತನೆಗಳನ್ನು ಆಶಯಗಳನ್ನು ವೈಚಾರಿಕವಾಗಿ  ಸಾದರಪಡಿಸುವಲ್ಲಿ ಅವರ ಸಿದ್ಧ ಮತ್ತು ಶುದ್ಧ ಹಸ್ತರೆಂದೇ ಹೇಳಬಹುದು. ಇವರು ಈಗಾಗಲೇ ಹದಿನೈದು ಕವನ ಸಂಕಲನಗಳನ್ನು ಪ್ರಕಟಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಉತ್ತಮ ಮೆಚ್ಚುಗೆಯ ಬೆಳವಣಿಗೆ.  ಇವರ ನೇರ ದಿಟ್ಟ ನಿರಂತರ ಬಂಡಾಯ ಧೋರಣೆಯ ಜೊತೆಗೆ ಮಾನವ ಮೌಲ್ಯಗಳ ಮನುಷ್ಯ ಸಂಬಂಧ ಹಕ್ಕುಗಳು ಸ್ನೇಹ ಪ್ರೀತಿ ಇವುಗಳ ಬಗ್ಗೆ ತಮ್ಮ  ತಮ್ಮ ಕವನಗಳಲ್ಲಿ ವ್ಯಕ್ತ ಪಡಿಸಿದ್ದಾರೆ. ಇವರ ಕವನಗಳಲ್ಲಿ ಗಾಂಧಿ ಬುದ್ಧ ಬಸವ ಇವರ ಪ್ರಭಾವ ದಟ್ಟವಾಗಿ ಕಂಡು ಬರುತ್ತದೆ.  ಸ್ನೇಹ, ಪ್ರೀತಿ, ಪ್ರೇಮ ಬಂಡಾಯದ ವಿಷಯಗಲ್ಲಿ ಇವರ ಮೊನಚಾದ ಟೀಕೆ   ವಿಡಂಬನೆಯೂ ಎಲ್ಲರನ್ನೂ ಆಕರ್ಷಿಸುವ ಅತಿ ವಿರಳ ಗುಣ. 

ಡಾ. ಶಶಿಕಾಂತ ಪಟ್ಟಣ ಅವರ ಪ್ರಕಟಿತ ಕೃತಿಗಳು

1 ) ದೇವಲೋಕದ ಬಟ್ಟೆ -(ಶರಣ ವಿಚಾರ ಚಿಂತನಗಳು ) -2014
2 ) ಶರಣರ ದಾಂಪತ್ಯ ಧರ್ಮ ( ಸಂಪಾದನೆ ) 2017
3 ) ಭೂಮಿ ಉಳಿಸಿ ಇತರ ಲೇಖನಗಳು -2018
4 ) ಬಯಲ ರೂಪ ಮಾಡಿ ಬಯಲಾದ ಬಸವಣ್ಣ -2018
5 ) ಕಾಣಬಾರದ ಲಿಂಗ -2019
6) ವಚನ ಸಿರಿ ಭಾಗ 1 -( ಸಂಪಾದನೆ ) -2019
7 ) ಕನಸುಗಳೇ ಹೀಗೆ (ಕವನ ಸಂಕಲನ)2019
8 )ನೀನು ಮೌನವಾಗುವ ಮುನ್ನ (ಕವನ ಸಂಕಲನ)2019
9 ) ಗಾಂಧಿಗೊಂದು ಪತ್ರ (ಕವನ ಸಂಕಲನ)-2021
10) ಸಿಹಿಯಾಯಿತು ಕಡಲು (ಕವನ ಸಂಕಲನ)-2021
11 ) ಮಾತಿನಿಂದ ಮೌನಕ್ಕೆ (ಕವನ ಸಂಕಲನ)-2021
12)ಕಾಡಬೇಡ ಕರೋನಾ -2021
13)  ಮತ್ತೆ ಮರಳಿ ಬನ್ನಿ (ಕವನ ಸಂಕಲನ)-2022
14)   ಭ್ರೂಣ ಬರೆದ ಕವಿತೆ (ಕವನ ಸಂಕಲನ)-2022
15) ಸೂರ್ಯನೇಕೆ ಮುಳುಗಿದ ? (ಕವನ ಸಂಕಲನ)-2022
16) ಎತ್ತ ಹೋದರು ಶರಣರು -2021
17) ಮಾಟಕೂಟವೆಂಬ ತೆಪ್ಪವ ಮಾಡಿ -2022
18)  ವಿಳಾಸವದನು ಬಸವಣ್ಣ -2022
19 ) ವಚನ   ಸಿರಿ ಭಾಗ 1-2022
20) ವಚನ   ಸಿರಿ  ಭಾಗ 2-2022
21 ) ಬಸವ ಧರ್ಮ ಹೇಗೆ ಹೊಸ ಧರ್ಮ -2022
22) ಲಿಂಗಾಯತ ಮಾನವ ಹಕ್ಕುಗಳ ಚಳುವಳಿ -2022
23) ಬೇಲಿ ಮೇಲಿನ ಹೂಗಳು    ಕವನ ಸಂಕಲನ -2022
24)  ಪ್ರೇಮಪಾರಿವಾಳ ಕವನ ಸಂಕಲನ -2022
25)  ಅರಿವಿನ ದೀವಿಗೆ ಅಲ್ಲಮ -2022
26) ಭಕ್ತಿ ಎಂಬ  ಪೃಥ್ವಿಯ ಮೇಲೆ -2022
27) ಕನ್ನಡವ ಕಟ್ಟಿದರು ಕಲ್ಯಾಣ ಶರಣರು -2022
28 ) ಅಪ್ಪನ ಹೆಗಲು ಕವನ ಸಂಕಲನ  2023
29) ಸದ್ದಿಲ್ಲದೇ ಎದ್ದು ಹೋದೆ ಕವನ ಸಂಕಲನ 2023
30) ಅನುಭವ ಕಲಶ ಅಮೃತವರುಷ (ಸಂಪಾದನೆ) 2023
31) ಅನುಭವ ಸಿರಿ (ಸಂಪಾದನೆ)  2023
32) ವಚನ   ಸಿರಿ  ಭಾಗ 3 ಸಂಪಾದನೆ 2023
33) ವಚನಗಳಲ್ಲಿ ಗುರು ಲಿಂಗ ಜಂಗಮ 2023
34)  ಗುಬ್ಬಿ ಹೇಳಿದ ಕಥೆ  – ಕವನ ಸಂಕಲನ 2023
35 ) ಹೊಯ್ದವರೆನ್ನ ಹೊರದವರೆಂಬೆ -2023
36)ಅನುಭವ ಸಿರಿ ಸಂಪಾದನೆ 2023
37)  ಬಸವ ಭಕ್ತಿಯ ಬೀಜ -2023
38)  ಕಿಚ್ಚಿನಲ್ಲಿ ಕೈ ಹಾಕಿ ಹೆಕ್ಕಿದರು ವಚನಗಳ 2023
39)  ನುಡಿದರೆ ಮುತ್ತಿನ ಹಾರದಂತಿರಬೇಕು 2023
40 )ಇಂಕಿಲಾಬ್ ಘೋಷಣೆ 2023
41) ನಮ್ಮೂರ ಸುದ್ಧಿ ಕವನ ಸಂಕಲನ 2024
42) ನಾಯಿಗೆ ನಾರಿವಾಣ ಒಕ್ಕುವುದೇ (ಸಂಪಾದನೆ) 2024
43)  ಸ್ವರ ಸಾಮ್ರಾಟ ರಂಗ ಚೇತನ -2024
44)  ಕನ್ನಡದ ಕಬ್ಬಿಗರು (ಸಂಪಾದನೆ) 2024
45)  ಗೋರಿಗಳು ಮಾತಾಡುತ್ತವೆ ಕವನ ಸಂಕಲನ 2024
46)  ಸಾವಿಲ್ಲದ ಶರಣರು 2024
47) ನನ್ನ ಕನಸಿನ ಭಾರತ   ಕವನ ಸಂಕಲನ 2024
48) ರಾಷ್ಟ್ರ ನಿರ್ಮಾಣದಲ್ಲಿ ಲಿಂಗಾಯತ ಶಿವಯೋಗ ಸಾಧಕರ  ಕೊಡುಗೆ 2024
49) ಯುಗ ಪ್ರವರ್ತಕರು 2024
50) ನೂರೊಂದು ವಚನಗಳು ಸ್ವರಚಿತ ವಚನಗಳು 2024
51)  ರಾಷ್ಟ್ರ ನಿರ್ಮಾಣದಲ್ಲಿ ಲಿಂಗಾಯತ ಮಠಗಳ ಕೊಡುಗೆ 2024
52) ತಾಯಿದ್ದರೆ ತವರೆಚ್ಚು -ಸಂಪಾದನೆ 2024
53 ದಿನಕ್ಕೊಬ್ಬ ಶರಣ ಅಚ್ಚಿನಲ್ಲಿ 2024

- Advertisement -

ದೊರೆತ ಸನ್ಮಾನ ಮತ್ತು ಪ್ರಶಸ್ತಿಗಳು

ಅಂತಾರಾಷ್ಟ್ರೀಯ ಔಷಧ ವಿಜ್ಞಾನ ಲೇಖಕ ಪ್ರಶಸ್ತಿ ಭಾರತೀಯ ಔಷಧ ತಯಾರಿಕಾ ಅಸೋಸಿಯೇಷನ್ ಮುಂಬೈ ಇವರಿಂದ 2009
ಅಪ್ಪ ಪ್ರಶಸ್ತಿ – ಪ್ರೊ ವಿಜಯಲಕ್ಷ್ಮಿ ಪುಟ್ಟಿ ಅವರು ನೀಡಿದ ಲಿಂಗೈಕ್ಯ ಮಲ್ಲಪ್ಪ ತಿರ್ಲಾಪೂರ ಸ್ಮರಣಾರ್ಥ 2021
ಬಸವ ಶ್ರೀ ಪ್ರಶಸ್ತಿ – ಬಸವ ಕೇಂದ್ರ ಹರಮ ಘಟ್ಟ ಶಿವಮೊಗ್ಗ 2022
ಬಸವ  ಜ್ಯೋತಿ ಪ್ರಶಸ್ತಿ- ಬಸವ ಜ್ಯೋತಿ ಮಹಿಳಾ ಮಂಡಳ ರಾಣೇಬೆನ್ನೂರು  2022
ಗಾಂಧಿಗೊಂದು ಪತ್ರ-ಕವನ ಸಂಕಲನಕ್ಕೆ ಡಾ ಡಿ ಎಸ ಕರ್ಕಿ ಸಾಹಿತ್ಯ ಪ್ರಶಸ್ತಿ ಡಾ ಡಿ ಎಸ ಕರ್ಕಿ ಸಾಹಿತ್ಯಪ್ರತಿಷ್ಠಾನ   ಬೆಳಗಾವಿ  2022
ಡಾ ಎಂ ಎಂ ಕಲಬುರ್ಗಿ ಸಮಗ್ರ ಸಾಹಿತ್ಯ ಪ್ರಶಸ್ತಿ -2023 ಜನೆವರಿ
ಕಲ್ಬುರ್ಗಿ ಫೌಂಡೇಶನ್ ಸಿಂದಗಿ ವಿಜಯಪುರ
ಬಸವ ಶಾಂತಿ ಪ್ರಶಸ್ತಿ – ಬಸವ ಶಾಂತಿ ಮಿಷನ್ ಟ್ರಸ್ಟ್ ಧಾರವಾಡ  3 ಡಿಸೆಂಬರ್2023
ಬಸವ ಭೀಮಶ್ರೀ ಪ್ರಶಸ್ತಿ – ವೀರ ಕನ್ನಡಿಗರ ಸೇನೆ ಕಲಬುರ್ಗಿ 16 ಡಿಸೆಂಬರ್  2023
ಬಸವ ಪ್ರಶಸ್ತಿ- ಅಖಿಲ ಕರ್ನಾಟಕ ಬಸವ ಬಳಗ ಹುಬ್ಬಳ್ಳಿ 2024 ಮೇ 10
ಶರಣ ದಂಪತಿಗಳು – ಬಸವ ತತ್ವ ಸಮಿತಿ ಸೋಲಾಪುರ 12 ಮೇ 2024
ಅಕ್ಕನ ಅರಿವಿನ ಮತ್ತು ವಚನ ಅಧ್ಯಯನ ವೇದಿಕೆ ಚಟುವಟಿಕೆಗಳು
ಕಲಬುರ್ಗಿ ಫೌಂಡೇಶನ್ ಸಿಂದಗಿ ಅವರು ಕೊಡಮಾಡುವ ಡಾ ಎಂ ಎಂ ಕಲಬುರ್ಗಿ ವಚನ ಸಿರಿ ಮತ್ತು ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಜನವರಿ  2023
ಪ್ರೊ ಶಾರದಾ ಪಾಟೀಲ (ಮೇಟಿ) ಇವರ ಅಭಿನಂದನಾ ಸಮಾರಂಭ ಅನುಭವ ಕಳಶ ಅಮೃತ ವರ್ಷ ಅಭಿನಂದನಾ ಬಿಡುಗಡೆ ಮೇ 2023
ಡಾ ಟಿ ಬಿ ಅಳ್ಳೋಳ್ಳಿ ಅವರ ಕನ್ನಡ ವಚನಗಳ ಇಂಗ್ಲಿಷ್ ಭಾಷಾಂತರ ಲೋಕಾರ್ಪಣೆ
ಬಾಗಲಕೋಟೆ ತೋಟಗಾರಿಕಾ ವಿಶ್ವ ವಿದ್ಯಾಲಯ ಜುಲೈ 2023
ಬಸವ ಶಾಂತಿ ಪ್ರಶಸ್ತಿ -ಧಾರವಾಡ ಡಿಸೆಂಬರ್ 2023

ಅನುಭವ ಸಿರಿ ಡಾ ಸರಸ್ವತಿ ಪಾಟೀಲ ಇವರ ಅಭಿನಂದನಾ ಕೃತಿ ಬಿಡುಗಡೆ ಜನೆವರಿ 2024

ಕಲಬುರ್ಗಿ ಫೌಂಡೇಶನ್ ಸಿಂದಗಿ ಅವರು ಕೊಡಮಾಡುವ ಡಾ ಎಂ ಎಂ ಕಲಬುರ್ಗಿ ವಚನ ಸಿರಿ ಮತ್ತು ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾರ್ಚ್  2024
ಕಳೆದ ಐದು ವರ್ಷ ಕನ್ನಡ ಮರಾಠಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರತಿ ಶನಿವಾರ ಮತ್ತು ರವಿವಾರ ಗೂಗಲ್ ಉಪನ್ಯಾಸ
256 ಕ್ಕೂ ಅಧಿಕ ಉಪನ್ಯಾಸ
ವಚನ ಅಧ್ಯಯನ ಸಾಹಿತ್ಯ ಶುದ್ಧಿಕರಣ
ಇಂತಹ ಪ್ರತಿಭಾವಂತ ಡಾ  ಶಶಿಕಾಂತ ಪಟ್ಟಣ ಅವರ ವೃತ್ತಿ ಮತ್ತು ಪ್ರವೃತ್ತಿ ಎರಡರಲ್ಲೂ ಹೆಚ್ಚಿನ ಪ್ರಗತಿಯಾಗಲಿ ಎಂದು ನಮ್ಮೆಲ್ಲರ ಶುಭ ಹಾರೈಕೆಗಳು.

ಡಾ.ಸರಸ್ವತಿ ಪಾಟೀಲ
ವಿಶ್ರಾಂತ ಪ್ರಾಧ್ಯಾಪಕರು ಗುಲಬರ್ಗಾ ವಿಶ್ವ ವಿದ್ಯಾಲಯ

- Advertisement -

1 COMMENT

  1. ಅಪ್ಪ ಬಸವಣ್ಣ ನಿಮ್ಮನ್ನೂ ಸಹ ವಚನಗಳ ಪ್ರಚಾರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ ಅನ್ನಿಸುತ್ತದೆ ಅಣ್ಣ ಅವರೆ.

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕರಾದ ಮೆಟ್ಯಾಲಮಠ ರವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

ಬೆಳಗಾವಿ:-ತಾಲೂಕಿನ ಹಿಂಡಲಗಾ ವಿಜಯನಗರ ದ ಸರಕಾರಿ ಪ್ರಾಥಮಿಕ ಮರಾಠಿ ಶಾಲೆಯ ಕ್ರಿಯಾಶೀಲ ಕನ್ನಡ ಶಿಕ್ಷಕರಾದ ರುದ್ರಯ್ಯ ಈರಯ್ಯ ಮೆಟ್ಯಾಲಮಠ ರವರಿಗೆ ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group