spot_img
spot_img

ಪುರಸಭೆಯಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಪ್ಲಾಟಗಳ ಮಾರಾಟ ಪ್ರಕರಣ ದಾಖಲು

Must Read

spot_img

ಸಿಂದಗಿ: ಪಟ್ಟಣದ ಡಾ. ರೇವಣಸಿದ್ದ ವಾರದ ಅವರ ಮಾಲೀಕತ್ವದ ಸರ್ವೇ ನಂಬರ 13772 ರಲ್ಲಿ ಬರುವ 4 ಎಕರೆ ಜಮೀನನ್ನು ಬಿನ್ ಶೇತ್ಗಿ ಮಾಡಿ ಖುಲ್ಲಾ ವಾರದ ನಿವೇಶನಗಳನ್ನು ಮಾಡಿದ್ದ 83 ಪ್ಲಾಟ್‍ಗಳಲ್ಲಿ 19 ಪ್ಲಾಟಗಳನ್ನು ಮಾಲೀಕರ ಗಮನಕ್ಕೆ ತರದೆ ಪುರಸಭೆ ಮುಖ್ಯಾದಿಕಾರಿ ಸೇರಿದಂತೆ 20 ಜನರು ಸೇರಿ ಖೊಟ್ಟಿ ದಾಖಲೆ ಸೃಷ್ಟಿಸಿ ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಿ ಮಾರಾಟ ಮಾಡಿದ್ದಾರೆ ಎಂದು ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಡಾ. ಶಶಿಕಲಾ ರೇವಣಸಿದ್ದ ವಾರದ ಅವರ ದೂರಿನನ್ವಯ ಸರ್ವೇ ನಂಬರ 13772 ರಲ್ಲಿ ಯೋಜನಾ ಪ್ರಾಧಿಕಾರದ ಅನುಮೋದನೆ ಪಡೆದು ಒಟ್ಟು 85 ಪ್ಲಾಟಗಳನ್ನು ಮಾಡಿ ಪುರಸಭೆಯ ಶುಲ್ಕ ಭರಿಸಲಾಗಿದೆ ಡಾ. ರೇವಣಸಿದ್ದ ವಾರದ ತೀರಿ ಹೋದ ನಂತರ ನೋಟರಿ ಮುಖಾಂತರ ಯಾವುದೇ ವಹಿವಾಟು ಮಾಡಿರುವದಿಲ್ಲ. ಆದಾಗ್ಯೂ ದಿನಾಂಕ; 27.12.2021 ರಂದು ಡಾ: ಸಿದ್ರಾಮಪ್ಪಾ ತಂದೆ ರೇವಣಸಿದ್ದಪ್ಪಾ ವಾರದ ರವರು ಉಳಿದ 24 ಪ್ಲಾಟಗಳ ತೆರಿಗೆ ಪಾವತಿಸಲು ಪುರಸಭೆ ಕಛೇರಿಗೆ ಹೋದಾಗ ಬೇರೆಯವರ ಹೆಸರಿಗೆ ಪರಭಾರೆ ಯಾದ ಬಗ್ಗೆ ತಿಳಿದು ಬಂದಿದ್ದರನ್ವಯ ಸುನೀಲ ತಂದೆ ಸುರೇಶ ಕನ್ನಡಿ, ಅಕ್ಟರ ತಂದೆ ಕಾಸೀಮಸಾಬ ಮೋಮಿನ, ಇದಾಯತ್‍ಲಿ ತಂದೆ ಇಸಾಕ ಇಟಗಿ, ಬಾಬುಸಾಬ ತಂದೆ ರಜಾಕಸಾಬ ದರ್ಗಾ, ಅಬ್ದುಲಹಮೀದ ತಂದೆ ಬಾಬುಲಾಲ ಬೇಪಾರಿ, ಶಾರದಾ ಭೀಮಪ್ಪಾ ಇವರ ಹೆಸರಿನಲ್ಲಿ ಸೇರ್ಪಡೆಯಾಗಿದ್ದು ಕಂಡುಬಂದಿದೆ ಅಲ್ಲದೆ ಇವರು ಕೂಡಾ ಬೇರೆಯವರಿಗೆ ಮಾರಾಟ ಮಾಡಲು ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮುದುಗೋಳಕರ, ಆರ್.ಓ. ಚಂದ್ರಕಾಂತ ಕಾಂಬಳೆ, ದಾಖಲೆಗಳ ಬರಹಗಾರ ಸಲೀಮ ಅತ್ತಾರ, ದಾಖಲೆಗಳ ಬರಹಗಾರ ಶಿವಾನಂದ ಗಂಜ್ಯಾಳ, ದಾಖಲೆಗಳ ಬರಹಗಾರರ ಸಹಾಯಕ ಯಲ್ಲಪ್ಪ ಅಡವಿ, ಸುನೀಲ ತಂದೆ ಸುರೇಶ ಕನ್ನಡಿ, ಅಜರುದ್ದೀನ ತಂದೆ ನಬೀಲಾಲ ಭಾಗವಾನ, ನಜಮೀನ ಗಂಡ ಬಾಬುಸಾಬ ಮುಗಳಿ, ಅಮೀನಸಾಬ ತಂದೆ ರಾಜೇಸಾಬ ಕರಜಗಿ, ಅಕ್ಷರ ತಂದೆ ಕಾಸೀಮಸಾಬ ಮೋಮಿನ, ಮಹ್ಮದ ಆರೀಫ ತಂದೆ ಅಹ್ಮದಸಾಬ ತಿಕೋಟಕರ, ಹಿದಾಯತ್‍ಅಲಿ ತಂದೆ ಇಸಾಕ ಇಟಗಿ, ಸಲೀಮ ತಂದೆ ಸಮೀರ ಅಥಣಿ, ಬಾಬುಸಾಬ ತಂದೆ ರಜಾಕಸಾಬ ದರ್ಗಾ, ಹುಸೇನಬಾ ತಂದೆ ದಸ್ತಗೀರಸಾಬ ಮೋಕಾಶಿ, ಅಬ್ದುಲಹಮೀದ ತಂದೆ ಬಾಬುಲಾಲ ಬೇಪಾರಿ, ಅಬ್ರಾರ ತಂದೆ ನಜೀರಅಹ್ಮದ ಕುಡಸಿ, ಸುನೀಲ ತಂದೆ ಶಂಕರಲಿಂಗ ನಿಂಬರಗಿ, ಶಾರದಾ ಭೀಮಪ್ಪಾ, ನೊಟರಿ ವಕೀಲ ಕೆ.ಎನ್.ಇನಾಮದಾರ ಆರೋಪಿತರೆಲ್ಲರು ಮಿಲಾಪೆಯಾಗಿ ನನ್ನ ಮಾಲಕತ್ವದ ಸಿಂದಗಿ ಪಟ್ಟಣದಲ್ಲಿರುವ ಆಸ್ತಿ ನಂಬರ 837/2 ನೇದ್ದರಲ್ಲಿರುವ ಪ್ಲಾಟ್ ಗಳನ್ನು ಏತ್ತಿ ಹಾಕಿ ಮಾರಾಟ ಮಾಡುವ ಉದ್ದೇಶದಿಂದ ನನ್ನ ಪತಿಯ ಹೆಸರಿನಲ್ಲಿ ಆರೋಪಿ ಅ.ನಂ. 10, 12, 14. ನೇದವರು ನನ್ನ ಪತಿಯ ಗೈರ ಹಾಜರಾತಿಯಲ್ಲಿ ನೋಟರಿ ತಯಾರಿಸಿ ನನ್ನ ಪತಿಯ ಖೊಟ್ಟಿ ಸಹಿ ಮಾಡಿ ಪುರಸಭೆಯ ಸಿಬ್ಬಂದಿ ಜನರೊಂದಿಗೆ ಮಿಲಾಪೆಯಾಗಿ ಸಿಂದಗಿ ಪಟ್ಟಣದ ಪುರಸಭೆಯ ಆಸ್ತಿ ರಜಿಸ್ಟರ ಕೆ.ಎಮ್.ಎಫ್.-24 ದಲ್ಲಿ ಹೆಸರುಗಳನ್ನು ಸೇರಿಸಿ, ಉತಾರೆ ಪಡೆದುಕೊಂಡು ನನ್ನ ಮಾಲೀಕತ್ವದ ಪ್ಲಾಟ್ಗಳನ್ನು ಪಟ್ಟಣದ ಉಪ-ನೊಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ಮಾರಾಟ ಮಾಡಿರುತ್ತಾರೆ ಎಂದು ಪಿರ್ಯಾದಿಯಲ್ಲಿ ನಮೂದಿಸಲಾಗಿದೆ ಎಂದು ತಿಳಿದುಬಂದಿದೆ.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!