spot_img
spot_img

ಕಾಯಕಜೀವಿ ಪತ್ರಿಕಾ ವಿತರಕರಿಗೊಂದು ಸಲಾಂ – ಡಾ.ಶಾಂತವೀರ ಮನಗೂಳಿ

Must Read

spot_img
- Advertisement -

ಸಿಂದಗಿ: ಕರೋನಾ ಸಂಕಷ್ಟದ ನಡುವೆಯೂ ಚಳಿ, ಗಾಳಿ, ಮಳೆ ಯಾವುದನ್ನೇ ಲೆಕ್ಕಿಸದೆ ನಿತ್ಯ ಸೂರ್ಯ ಹುಟ್ಟುವ ಮುನ್ನ ಪತ್ರಿಕೆ ಓದುಗರ ಮನೆ ಮನೆಗಳಿಗೆ ಪತ್ರಿಕೆ ಹಂಚುವ ಕಾರ್ಯ ಮಾಡುತ್ತಿರುವ ಪತ್ರಿಕಾ ವಿತರಕರ ಕಾರ್ಯ ನಿಜಕ್ಕೂ ದೊಡ್ಡದು ಕಾಯಕ ಜೀವಿಗಳಾಗಿರುವ ಅವರಿಗೊಂದು ಸಲಾಂ ಎಂದು ಪುರಸಭೆಯ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಹೇಳಿದರು.

ಪಟ್ಟಣದ ಬಸವ ಮಂಟಪದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡ ವಿಶ್ವ ಪತ್ರಿಕಾ ವಿತರಕರ ದಿನಾಚರಣೆಯ ನಿಮಿತ್ತ ಪತ್ರಿಕಾ ವಿತರಕರಿಗೆ ವೈಯಕ್ತಿಕವಾಗಿ ಸನ್ಮಾನಿಸಿ ಗೌರವ ಧನವನ್ನು ನೀಡಿ ಮಾನವೀಯತೆ ಮೆರೆದರು.

ಇಂದಿನ ಕಾಲದಲ್ಲಿ ಪತ್ರಿಕೆ ನಡೆಸುವುದು ಎಷ್ಟು ಕಷ್ಟವೋ ವಿತರಿಸುವ ಕಾರ್ಯ ಅಷ್ಟೇ ಕಷ್ಟವಾಗಿದೆ. ಅದನ್ನು ನಿತ್ಯ ಪಾಲಿಸುತ್ತಿರುವುದು ಒಂದು ಸೇವೆಯಾಗಿದೆ. ಸರ್ಕಾರಗಳು ಪತ್ರಿಕಾ ವಿತರಕರ ಬಗ್ಗೆ ನಿರ್ಲಕ್ಷ ಧೋರಣೆ ತೋರದೆ ಅವರ ಕುಟುಂಬಕ್ಕೆ ಸಹಾಯ ಹಸ್ತ ನೀಡಲು ಮುಂದಾಗಬೇಕು. ಪತ್ರಿಕಾ ವಿತರಕರು ನಿಜವಾದ ಕರೋನಾ ವಾರಿಯರ್ಸಗಳು ಪತ್ರಿಕೆಗಳಿಂದ ಕರೋನಾ ಹರಡುತ್ತದೆ ಎಂಬ ಉಹಾಪೋಹ ಹಬ್ಬಿದಾಗಲು ಅಂಜದೆ ಅಳುಕದೆ ನಿತ್ಯ ಪತ್ರಿಕಾ ವಿತರಿಸುವ ಕಾಯಕದಲ್ಲಿ ಭಾಗಿಯಾದವರು. ಲಾಕಡೌನ್ ಸಂಧರ್ಭದಲ್ಲಿ ಸರ್ಕಾರ ಅನೇಕ ದುಡಿಯುವ ವರ್ಗಗಳು ಕೆಲಸ ಕಳೆದುಕೊಂಡಾಗ ಅವರಿಗೆ ಸಹಾಯಧನ ನೀಡಲು ಮುಂದಾಗಿತ್ತು ಆದರೆ ಪತ್ರಿಕಾ ವಿತರಿಕರಿಗೆ ಆ ಭಾಗ್ಯ ಸಿಗದೆ ಇರುವುದು ವಿಪರ್ಯಾಸ ಎಂದರು.

- Advertisement -

ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಆನಂದ ಶಾಬಾದಿ, ವರದಿಗಾರ ಸಿದ್ದಲಿಂಗ ಕಿಣಗಿ ಮಾತನಾಡಿ, ವಿಶ್ವ ಪತ್ರಿಕಾ ವಿತರಕರ ದಿನವನ್ನು ಪತ್ರಿಕಾ ವಿತರಕರಿಗೆ ಗೌರವಿಸುವ ಮೂಲಕ ಆಚರಿಸಿದ್ದು ಸಂತಸ ತಂದಿದೆ. ವಿತರಕರ ಅನೇಕ ಸಮಸ್ಯೆಗಳನ್ನು ಮನಗಂಡು ಪುರಸಭೆಯ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಅವರು ವಿತರಕರಿಗೆ ಸಹಾಯ ಹಸ್ತ ನೀಡುತ್ತಿರುವುದು ಶ್ಲಾಘನೀಯ ಕಾರ್ಯ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪರವಾಗಿ ಅವರಿಗೆ ಅಭಿನಂದಿಸಿದರು.

ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮುಧೋಳಕರ, ಸದಸ್ಯರಾದ ರಾಜಣ್ಣಿ ನಾರಾಯಣಕರ, ಭೀಮು ಕಲಾಲ, ಹಾಗೂ ಬಸವರಾಜ ಸಜ್ಜನ, ಶರಣಪ್ಪ ಸುಲ್ಪಿ, ಜೆಇ ಅಜರ ನಾಟೀಕಾರ, ದಯಾನಂದ ಇವಣಿ, ಮಲ್ಲು ಮೂಲಿ, ಮಹಾದೇವಪ್ಪ ಗಾಯಕವಾಡ, ಆರ್.ಆರ್,ಪಾಟೀಲ, ಶಿವಕುಮಾರ ಶಿವಶಿಂಪಿ, ಶಿವು ಬಡಿಗೇರ, ಶಿವು ಕಲಬುರ್ಗಿ, ವರದಿಗಾರ ರಮೇಶ ಪೂಜಾರಿ, ಸಿದ್ದಲಿಂಗ ಕಿಣಗಿ, ಎಮ್.ಎ.ಖತೀಬ, ಆಸ್ಪಾಕ ಕರ್ಜಗಿ ಸೇರಿದಂತೆ ವೇದಿಕೆ ಮೇಲಿದ್ದರು.

ಈ ಸಂದರ್ಭದಲ್ಲಿ ವಿತರಕರಾದ ವಿಜಯಕುಮಾರ ಪತ್ತಾರ, ನಿಂಗಣ್ಣ ಜಕ್ಕನಗೌಡರ, ನಿಂಗಣ್ಣ ಯಾಳಗಿ, ಗಂಗಾಧರ ಮಡಿಕೇಶ್ವರ, ಮುತ್ತು ಪೂಜಾರಿ, ಜಗದೀಶ ಹವಳಗಿ, ದಾನೇಶ ದೇಸಾಯಿ, ಶರಣು ಕಿಣಗಿ, ಅವಧೂತ ಕುಲಕರ್ಣಿ, ಶಿವಲಿಂಗ ಹೂಗಾರ, ಬಸವರಾಜ ಹೂಗಾರ ಅವರನ್ನು ಗೌರವಿಸಲಾಯಿತು.


- Advertisement -

ವರದಿ: ಪಂಡಿತ್ ಯಂಪೂರೆ,ಸಿಂದಗಿ

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group