spot_img
spot_img

ಸಂಗೀತ ಮತ್ತು ನಗು ಮನುಷ್ಯನ ಆಯುಷ್ಯ ಹೆಚ್ಚಿಸುತ್ತವೆ

Must Read

spot_img
- Advertisement -

ಸಿಂದಗಿ: ಸಂಗೀತ ಮತ್ತು ನಗು ಮನುಷ್ಯನ ಆಯುಷ್ಯವನ್ನು ಹೆಚ್ಚಿಸುವ ಶಕ್ತಿ ಹೊಂದಿದೆ ಅದಕ್ಕೆ ಮಠ ಮಾನ್ಯಗಳಲ್ಲಿ ನಡೆಯುವ ಆಧ್ಯಾತ್ಮಿಕ ಕಾರ್ಯದ ಜೊತೆಗೆ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಭಕ್ತರ ನೋವು ನಲಿವಿನಲ್ಲಿ ಬಾಗಿಯಾಗುತ್ತಿರುವ ಕಾರ್ಯ ಶ್ಲಾಘನೀಯ ಎಂದು ಮನ್ನಾಪುರ ಗ್ರಾಮದ ವರನಿಧಿ ಆಸ್ಪತ್ರೆಯ ವೈದ್ಯ ಡಾ. ರಾಹುಲ ಯಂಪೂರೆ ಹೇಳಿದರು.

ಪಟ್ಟಣದ ಬಸ್‌ಡಿಪೋ ಹತ್ತಿರದಲ್ಲಿರುವ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ ಆವರಣದಲ್ಲಿ ಬುದವಾರ ಸಂಜೆ ಹಮ್ಮಿಕೊಂಡ ೨ನೇ ಶಿವಾನುಭವ ಸಂಗೀತಗೋಷ್ಟಿಯನ್ನು ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರು ಮನೆ ಕಟ್ಟುವ ಮುನ್ನವೇ ಹಚ್ಚಿ ಮನುಷ್ಯನಿಗೆ ನೈಸರ್ಗಿಕವಾದ ಸಂಗೀತದಂಥ ಮನಸ್ಸಿಗೆ ಮುದ ನೀಡುವ ಹಾಗೂ ಆಕ್ಸಿಜನ್ ನೀಡುವ ಗಿಡ-ಮರಗಳನ್ನು ಬೆಳೆಸಿ ನಿಸರ್ಗವನ್ನು ಬೆಳೆಸಿ ಜನ್ಮ ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.

ಸಾನ್ನಿಧ್ಯ ವಹಿಸಿದ ಆದಿಶೇಷ ಶ್ರೀಮಠದ ನಾಗರತ್ನ ರಾಜಯೋಗಿ ವೀರರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಸಂಗೀತದಲ್ಲಿ ಬಹುರೋಗಗಳನ್ನು ಕಳೆಯುವವ ಶಕ್ತಿ ಅಡಗಿದೆ ಅದಕ್ಕೆ ಸಂಗೀತಕ್ಕೆ ಶಿವನು ಕೂಡಾ ನಾದಮಯವಾಗಿರುವ ಪ್ರತೀತಿ ಇದೆ. ಶಿವರಾತ್ರಿ ಅಮಾವಾಸ್ಯೆ ಗೆ ಶಿವರಾತ್ರಿ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶಹೊಂದಿದ್ದು ಅಂದು ಶ್ರೀಮಠದಲ್ಲಿ ಕೋಟಿ ಬಿಲ್ವಾರ್ಚನೆ ಮಾಡುವ ಸಂಕಲ್ಪ ಮಾಡಲಾಗಿದ್ದಲ್ಲದೆ ಹಲವು ಗ್ರಾಮಗಳ ಕಲಾ ತಂಡಗಳ ಮೇಳಗಳು ಸಂಗೀತ ಹಮ್ಮಿಕೊಳ್ಳಲಾಗುವುದು ಎಂದು ಅಭಿಮತ ವ್ಯಕ್ತ ಪಡಿಸಿದರು.

- Advertisement -

ಈ ಸಂದರ್ಭದಲ್ಲಿ ಹೆಸ್ಕಾಂಗೆ ಸುದಾರಣಾ ಸಮಿತಿಗೆ ನಾಮನಿರ್ದೇಶನ ಸದಸ್ಯರಾಗಿ ಆಯ್ಕೆಯಾದ ಶರಣಮ್ಮ ನಾಯಕ, ಡಾ ರಾಹುಲ ಯಂಪುರೆ, ವಕೀಲರಾದ ಗುರುಪಾದ ಮಾರ್ಸನಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಂಕಲಗಿ ಗ್ರಾಮದ ಬಸವರಾಜ ಬಂಕಲಗಿ, ಶಂಕ್ರಮ್ಮ, ಬಾಗಮ್ಮ, ಆದರ್ಶ ವಿದ್ಯಾಲಯದ ಶಿಕ್ಷಕಿ ಪೂಜಾ ಹಿರೇಮಠ, ಹಿಕ್ಕನಗುತ್ತಿ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶೈನಾಬಿ ಮಸಳಿ, ಬಸವರಾಜ ಯಲಸಂಗಿ ತಬಲಾಜಿ, ಗಂಗಾಧರ ವಿಶ್ವಕರ್ಮ, ಪ್ರತೀಕ್ಷಾ ದೋಣುರಮಠ, ಸಂಗೀತ ಸೇವೆ ಸಲ್ಲಿಸಿದರು.

ಶಿಕ್ಷಕ ಬಸವರಾಜ ಸೋಂಪುರ, ಅಂಬಿಕಾ ಪಾಟೀಲ, ಅನುಸೂಯ ಪರಗೊಂಡ, ಮಮತಾಜ ಖೇಡ, ಜಯಶ್ರೀ ಹದನೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ರಾಮಣ್ಣ ಮೋರಟಗಿ ಸ್ವಾಗತಿಸಿದರು. ಸಿದ್ದಲಿಂಗಯ್ಯ ಹಿರೇಮಠ ನಿರೂಪಿಸಿದರು. ಮಂಗಲ ಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

- Advertisement -
- Advertisement -

Latest News

ಮಹಿಳೆಯರು ಒಳ್ಳೆಯ ಗೃಹಿಣಿಯಾಗುವುದರ ಜೊತೆಗೆ ಸಾಹಿತಿಗಳಾಗಿಯೂ ಹೊರಹೊಮ್ಮುತ್ತಿದ್ದಾರೆ – ಶಾಸಕ ವಿಶ್ವಾಸ ವೈದ್ಯ

ಸವದತ್ತಿ : ಈಗಿನ ಮಹಿಳೆಯರು ಮನಸ್ಸು ಮಾಡಿದರೆ ಏನೆಲ್ಲವನ್ನು ಸಾಧಿಸಬಹುದು ಈಗಿನ ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಮುಂದೆ ಇದ್ದಾರೆ ಅದರಂತೆ ಸಾಹಿತ್ಯದಲ್ಲಿಯೂ ಕೂಡ ಅವರು ಮುಂದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group