Homeಸುದ್ದಿಗಳುಸಂಗೀತ ಎನ್ನುವುದು ತಪಸ್ಸಿನ ಅಧ್ಯಯನ - ಉಪಾಸನಾ ಮೋಹನ್

ಸಂಗೀತ ಎನ್ನುವುದು ತಪಸ್ಸಿನ ಅಧ್ಯಯನ – ಉಪಾಸನಾ ಮೋಹನ್

ಸಿಂದಗಿ; ಭಾವಗೀತೆ ಪ್ರಪಂಚದ ದಿಡ್ಡಿ ಬಾಗಿಲು ತೆರೆದು ಮಾಧುರ್ಯ ಎಲ್ಲೆಲ್ಲೂ ಜೇನಿನಂತೆ ಹರಿಯುತ್ತಿದೆ. ಸಂಗೀತ ಎನ್ನುವುದು ಕಲಿಕೆಯಲ್ಲ ಅದೊಂದು ತಪಸ್ಸಿನ ಶ್ರಮದ ಅಧ್ಯಯನ ಎಂದು ಖ್ಯಾತ ಸುಗಮ ಸಂಗೀತ ನಿರ್ದೇಶಕ ಉಪಾಸನಾ ಮೋಹನ ಹೇಳಿದರು.

ಪಟ್ಟಣದ ರಾಗರಂಜನಿ ಸಂಗೀತ ಅಕಾಡೆಮಿಯಲ್ಲಿ ರವಿವಾರ ಜರುಗಿದ ವಾಯ್ಸ್‍ಆಫ್ ಸಿಂದಗಿ ಸೀಜನ್ 2 ರ 7 ಸುತ್ತಿನ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಆಗಮಿಸಿ ಮಾತನಾಡಿ, ಭಾವಗೀತೆ ಅಥವಾ ಸುಗಮ ಸಂಗೀತ ಪ್ರಕಾರ ನಾನಾ ರೂಪಗಳಲ್ಲಿ ನಾನಾ ಹೆಸರುಗಳಲ್ಲಿ ಕನ್ನಡದಲ್ಲಿ ಯಾವತ್ತಿನಿಂದಲೂ ಇದೆ. ಆದರೆ ಅದಕ್ಕೆ ಹೆಚ್ಚು ಪ್ರಚಾರ ಸಿಗದೆ ಜನಮನದ ಗೀತ ಮಾಧುರ್ಯವಾಗಿರಲಿಲ್ಲ. ಈಗ ಆ ಸ್ಥಿತಿ ಬದಲಾವಣೆಯಾಗಿದೆ. ಈ ಹೊತ್ತು ಸುಗಮ ಸಂಗೀತ ಯಾರಬೇಕಾದರು ಹಾಡಬಹುದು ಎಂಬಂತಾಗಿದೆ. ಟಿವ್ಹಿ ಮಾಧ್ಯಮಗಳು ನಡೆಸಿಕೊಡುವ ಸುಗಮ ಸಂಗೀತ ಸ್ಪರ್ಧೆ ಮತ್ತು ಗಾನ ಮಂಟಪಗಳು ಇನ್ನಷ್ಟು ಇಂಪುಕೊಡುತ್ತಿವೆ. ಇದರಿಂದ ಕನ್ನಡ ಕವಿಗಳಿಗೆ ಉತ್ತೇಜನ ಜೊತೆಗೆ ಅವಕಾಶ ದೊರಕಿದಂತಾಗಿದೆ. ಮುಂಬರುವ ದಿನಗಳಲ್ಲಿ ಸಿಂದಗಿಯಲ್ಲಿ ಭಾವಗೀತೆಗಳಿಗೆ ಸಂಭಂದಿಸಿದಂತೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು. ನಗರ ಪ್ರದೇಶದಲ್ಲಿ ರಾಗರಂಜನಿ ಸಂಗೀತ ಸಂಸ್ಥೆ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಕಾರ್ಯಕ್ರಮದಿಂದ ಅನೇಕ ಪ್ರತಿಭೆಗಳಿಗೆ ಅವಕಾಶ ಸಿಕ್ಕಂತಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ ಮಾಜಿ ಪುರಸಭೆಯ ಸದಸ್ಯ ರಾಜಶೇಖರ ಕೂಚಬಾಳ ಮಾತನಾಡಿ, ವಾಯ್ಸ್ ಆಫ್ ಸಿಂದಗಿ ಸಿಜನ್-2 ಕಾರ್ಯಕ್ರಮವನ್ನು ಅತ್ಯಂತ ಅರ್ಥ ಪೂರ್ಣವಾಗಿ ಆಯೋಜನೆ ಮಾಡುವದಕ್ಕೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಸ್ಪರ್ಧಾಳುಗಳು ಉತ್ತಮ ತರಬೇತಿ ಪಡೆದು ಮುಂದಿನ ಹಂತಕ್ಕೆ ಸಾಗಬೇಕು ಎಂದು ಸಲಹೆ ನೀಡಿದರು.

ವೇದಿಕೆ ಮೇಲೆ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಆಕಾಶವಾಣಿಯ ಲತಾ ಜಾಗಿರದಾರ, ಶಿಕ್ಷಕ ಎಸ್.ಬಿ.ಚೌಧರಿ, ಡಾ.ಶರಣಬಸವ ಜೋಗೂರ, ಮುತ್ತು ಪಟ್ಟಣಶೆಟ್ಟಿ, ಸಿದ್ದಲಿಂಗ ಕಿಣಗಿ, ಡಾ.ಪ್ರಕಾಶ ರಾಗರಂಜನಿ, ಮಾಳು ಹೊಸೂರ, ಡಿ.ಬುಳ್ಳಪ್ಪ, ಅಶೋಕ ಬಿರಾದಾರ ಸೇರಿದಂತೆ ಸ್ಫರ್ಧಾಳುಗಳು ಇದ್ದರು.

RELATED ARTICLES

Most Popular

error: Content is protected !!
Join WhatsApp Group