spot_img
spot_img

ಯಾವುದೇ ತಾರತಮ್ಯವಿಲ್ಲದೆ ಸಂಗೀತ ಸರಸ್ವತಿ ಬೆಳೆಸುತ್ತಾಳೆ – ಸೂರ್ಯಕಾಂತ

Must Read

- Advertisement -

ಸಿಂದಗಿ: ಸಂಗೀತ ಸರಸ್ವತಿ ಒಲಿಯಬೇಕಾದರೆ ಯಾವುದೇ ತಾರತಮ್ಯವಿಲ್ಲದೆ ಆರಿಸಿ ಬೆಳೆಸುತ್ತಾಳೆ ಎನ್ನುವುದಕ್ಕೆ ನಾನೇ ನಿಜವಾದ ಸಾಕ್ಷಿ. ನನಗೆ ಮಾತು ತೊದಲುತ್ತೆ ಆದರೆ ಜಾನಪದ ಇತರೆ ಹಾಡುಗಳನ್ನು ಸುಂದರವಾಗಿ ಹಾಡುತ್ತೇನೆ ಎಂದು ಝೀ ಕನ್ನಡ ವಾಹಿನಿಯ ಎದೆ ತುಂಬಿ ಕಾರ್ಯಕ್ರಮದ ಖ್ಯಾತ ಗಾಯಕ ಕಲಬುರಗಿ ಜಿಲ್ಲೆಯ ಗಡಿಲಿಂಗದಳ್ಳಿ ಗ್ರಾಮದ ಸೂರ್ಯಕಾಂತ ಹೇಳಿದರು.

ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ವೈದ್ಯ ಕವಿ ಕಲಾವಿದ ಡಾ. ರಾಮಲಿಂಗಪ್ಪ ಭೀ ಅಗಸರ ತೋಟದಲ್ಲಿರುವ ಆರೋಗ್ಯ ಧಾಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಝೀ ಕನ್ನಡ ವಾಹಿನಿಯ ಎದೆ ತುಂಬಿ ಹಾಡುವೆನು ಕಾರ್ಯಕ್ರಮಕ್ಕೆ ನೀನು ಸೆಲೆಕ್ಟ ಆಗಿದೀ ಅಂತ 20 ಸಾರಿ ನನಗೆ ಫೋನ್ ಕರೆ ಮಾಡಿದರು. ನಾನು ನಂಬ್ಲೆ ಇಲ್ಲ. ನನ್ನ ಮುಂದೆ ಹಲವು ಜನರು ಟೀಕೆ ಮಾಡುತ್ತಿದ್ದರು ನಿನಗೆ ಮಾತನಾಡಲು ಬರಲ್ಲಾ ಎಂದು ಆ ಮಾತು ಆಡಿ ನಗುತ್ತಿದ್ದವರು ಇವತ್ತು ನನ್ನ ಹಾಡಿಗೆ ನಮ್ಮ ನಾಡಿನ ಜನರು ತಲೆದೂಗುತ್ತಿದ್ದಾರೆ. ಹಳ್ಳಿ ಪ್ರತಿಭೆಗೆ ಸಂಗೀತ ಲೋಕವೇ ಸಲಾಂ ಹೇಳುತ್ತದೆ ನಾನು ಮೂಕನಾಗಬೇಕು ಜಗದೊಳು ಹಾಡಿಗೆ ಜನರು ಭಕ್ತಿ ಭಾವದಿಂದ ಇಂದು ನನ್ನನ್ನೂ ಅಪ್ಪಿಕೊಂಡು ಸನ್ಮಾನ- ಸತ್ಕಾರ ಮಾಡುತ್ತಾರೆ ಎಂದು ಭಾವುಕರಾಗಿ ಅಗಸರ ಸರ್ ಇಂದು ಆತ್ಮೀಯವಾಗಿ ಮನೆಗೆ ಕರೆಸಿ ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಿದ್ದಕ್ಕೆ ಧನ್ಯವಾದಗಳು ಎಂದರು.

ಈ ಸಂದರ್ಭದಲ್ಲಿ ಶಿಕ್ಷಕ ಸಾಹಿತಿ ಬಸವರಾಜ ಅಗಸರ, ಸಾಹಿತಿ ಕವಿ ಕಲಾವಿದ ಸಿದ್ದರಾಮ ಬ್ಯಾಕೋಡ ತಾಯಿ ಗುರುಬಾಯಿ ರಾ ಅಗಸರ, ಪ್ರೀತಿ ಸಗರ, ದಂತ ವೈದ್ಯ ವಿದ್ಯಾರ್ಥಿ ಮುತ್ತು ಸಗರ. ವಿನಯಕುಮಾರ ಸಗರ ಭಾಗವಹಿಸಿದ್ದರು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group