spot_img
spot_img

ಶರಣರ ವಚನಗಳಲ್ಲಿ ಸಂಗೀತ ಪರಿಕಲ್ಪನೆ

Must Read

- Advertisement -

ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಪ್ರೊ. ಶಾರದಮ್ಮ ಪಾಟೀ, ಬದಾಮಿ ಇವರ ಶ್ರಾವಣ ಮಾಸದ ವಿಶೇಷ ದತ್ತಿ ಉಪನ್ಯಾಸದ ಮೂರನೇ ದಿನ ಗೂಗಲ್ ಮೀಟ್ ನಡೆಯತು

ಶರಣೆ ಜಯಶ್ರೀ ಆಲೂರ ಅವರ ವಚನಪ್ರಾರ್ಥನೆಯೊಂದಿಗೆ ಗೂಗಲ್ ಮೀಟ್ ಕಾರ್ಯಕ್ರಮ ಶುರುವಾಯಿತು.ಡಾ. ಆಶಾ ಗುಡಿ ಅವರು ಸ್ವಾಗತ, ಪ್ರಾಸ್ತಾವನೆ ಮತ್ತು ಉಪನ್ಯಾಸಕರ ಪರಿಚಯದ ನುಡಿಗಳನ್ನಾಡಿದರು.

ಉಪನ್ಯಾಸಕರಾದ ಶರಣ ವಿಜಯಕುಮಾರ ತೇಲಿ ಸರ್ ಅವರು ಶರಣರ ವಚನಗಳಲ್ಲಿ ಸಂಗೀತದ ಪರಿಭಾಷೆಯನ್ನು ಅತ್ಯಂತ ಸಮರ್ಪಕವಾಗಿ ತಿಳಿಸಿಕೊಟ್ಟರು. ಸಂಗೀತ ಎಂದರೇನು ಎಂದು ತಿಳಿಸಿ ಹೇಳುತ್ತಾ,ವೇದಗಳ ಕಾಲದಲ್ಲಿ ಸಂಗೀತ ಹೇಗೆ ಹುಟ್ಟಿತು, ಕ್ರಿ. ಶ. ಪೂರ್ವದಲ್ಲಿನ
ನಾಟ್ಯಶಾಸ್ತ್ರಗ್ರಂಥ, ಆರನೆಯ ಶತಮಾನದ ನಾರದನ ಸಂಗೀತ ಮಕರಂದ, ಒಂಬತ್ತನೆಯ ಶತಮಾನದ ಬೃಹದ್ದೇಶಿ ರಾಗದ ಉಲ್ಲೇಖ, ನಂತರ ಬಂದ ರಾಗ ರಾಗಿಣಿಗಳ ಪರಿಕಲ್ಪನೆ ಹೇಗೆ ಹೇಗೆ ತನ್ನದೇ ಆದ ಪ್ರಭುತ್ವ ಪಡೆಯಿತು.. ಹೀಗೆ ಹೇಳುತ್ತಾ ಹೇಳುತ್ತಾ ಶರಣರಕಾಲಕ್ಕೆ ಬಂದು ನಿಂತರು.

- Advertisement -

ಇಪ್ಪತ್ತೈದಕ್ಕೂ ಹೆಚ್ಚು ಶರಣರು ಸಂಗೀತ ವಾದ್ಯಗಳನ್ನು ನುಡಿಸುವಲ್ಲಿ ಪರಿಣಿತಿ ಹೊಂದಿದ್ದರು ಎನ್ನುವುದನ್ನು ಉಲ್ಲೇಖಿಸಿದರು.ಅನುಭವ ಮಂಟಪದಲ್ಲಿ ಕಲೆಯ ವೈಭವ ಹೇಗಿತ್ತು,ವಿವಿಧ ಆಯಾಮಗಳನ್ನು ಅಭ್ಯಸಿಸಿ ತಮ್ಮ ವಚನದ ಮೂಲಕ ಶರಣರು ಹೇಗೆ ಸಂಗೀತವನ್ನು ವ್ಯಕ್ತಪಡಿಸಿದರು, ಎನ್ನುವದನ್ನು ಹೇಳುತ್ತಾ ಬಸವಣ್ಣನವರು, ಅಲ್ಲಮಪ್ರಭು, ಮೋಳಿಗೆಯ ಮಾರಯ್ಯ , ಗಜೇಶ ಮಸಣಯ್ಯ, ಸಕಲೇಶ ಮಾದರಸ, ಉರಿಲಿಂಗ ಪೆದ್ದಿ, ಅಕ್ಕಮಹಾದೇವಿಯಾದಿಯಾಗಿ ಹೇಗೆ ಸಂಗೀತದ ಮೇಲೆ ವಚನ ರಚಿಸಿದ್ದಾರೆ ಎನ್ನುವುದನ್ನು ಪ್ರತಿಯೊಂದು ವಚನಗಳ ಉದಾಹರಣೆಯೊಂದಿಗೆ ಹೇಳುತ್ತಾ ಹೋದರು. ಶರಣ ಸಂಸ್ಕೃತಿಯ ಮಂಗಳಕರ ವಾದ್ಯಗಳು, ಜನಾಂಗೀಯ ಸಂಗೀತ ವಾದ್ಯಗಳ ಬಗ್ಗೆಯೂ ಬೆಳಕನ್ನು ಚೆಲ್ಲಿದರು.

ಸಂಗೀತದ ಜೊತೆಜೊತೆಗೆ ಕೂಡಿಕೊಂಡ ಯೋಗಶಾಸ್ತ್ರ, ಧ್ವನಿ, ತಾಳ, ಲಯ,ಛಂದಸ್ಸು, ಗೇಯತೆ, ಧಾತು, ಸ್ವರ, ಆಲಾಪ,ಆರೋಹ ಅವರೋಹ,ಅಕ್ಷರಜ್ಞಾನ, ಉಚ್ಚಾರಣೆ, ವೈಖರಿ ವಾಣಿ, ನಾದ, ಶಬ್ದ, ಧೃತಿ, ಲಿಪಿ,ವರ್ಣಮಾಲೆ, ಹೀಗೆ ಸಂಗೀತ, ಕನ್ನಡ, ಯೋಗ, ಅಧ್ಯಾತ್ಮ ಹೇಗೆ ಒಂದಕ್ಕೊಂದು ಪೂರಕವಾಗಿವೆ ಎನ್ನುವುದನ್ನು ಎಳೆ ಎಳೆಯಾಗಿ   ವಿಶ್ಲೇಷಿಸಿದರು.

ಮಲ್ಲಿಕಾರ್ಜುನ ಮನ್ಸೂರ, ಸಿದ್ಧರಾಮ ಜಂಬಲದಿನ್ನಿಮತ್ತು ಬಸವರಾಜ ರಾಜಗುರು ಅವರು ಹೇಗೆ ವಚನಗಾಯನಕ್ಕೆ ತಮ್ಮ ಕೊಡುಗೆಯನ್ನು ನೀಡಿದರು ಎಂಬುದನ್ನು ಹೇಳುತ್ತಾ ತಮ್ಮ ಸಂಗೀತದ ಸಾರ್ಥಕತೆಯನ್ನು ಮೂಡಿಸುವ ಒಂದೂವರೆ ಘಂಟೆಗಳ ಉಪನ್ಯಾಸವನ್ನು ಮುಗಿಸಿ, ಸಂವಾದದಲ್ಲಿ ಪಾಲ್ಗೊಂಡವರ ಪ್ರಶ್ನೆಗಳಿಗೆ ವಚನಗಳ ಮೂಲಕವೇ ಉತ್ತರ ಕೊಟ್ಟ ಒಬ್ಬ ಧೀಮಂತ ಸಂಗೀತಗಾರರು.

- Advertisement -

ಶರಣೆ ಸುಮಾ ಬೋಳರೆಡ್ಡಿ ಅವರು ಚಿಕ್ಕದಾದ ಚೊಕ್ಕದಾದ ಮಾರ್ಗದರ್ಶಕ ನುಡಿಗಳನ್ನು ಪ್ರಸ್ತುತಪಡಿಸಿದರು .ಡಾ. ಶಶಿಕಾಂತ ಪಟ್ಟಣ ಮಾತನಾಡಿ ಇಂದು ಎಲ್ಲರೂ ಹೇಗೆ ವಚನಗಳನ್ನು ತಿರುಚಿ ಪ್ರಕ್ಷಿಪ್ತಗೊಳಿಸುತ್ತಿದ್ದಾರೆ ಎನ್ನುವ ಕಳವಳವನ್ನು ವ್ಯಕ್ತಪಡಿಸಿದರು.ಎಲ್ಲರೂ ವಚನ ಸಂಪುಟಗಳನ್ನು ತೆಗೆದುಕೊಂಡು ಓದಿ ಎಂದು ಹೇಳುತ್ತಾ, ಕಲ್ಬುರ್ಗಿ ಅವರನ್ನು ನೆನೆಸಿಕೊಂಡರು.ಈಗ ವಚನಸಾಹಿತ್ಯದ ಉಳಿವಿನ ಪ್ರಶ್ನೆ ಎದುರಾಗಿದೆ, ಎಲ್ಲರೂ ಕೂಡಿ ಧ್ವನಿ ಎತ್ತೋಣ ಎನ್ನುವ ಮನೋಭಾವನೆಯನ್ನು ವ್ಯಕ್ತಪಡಿಸಿದರು.

ಕಡೆಯಲ್ಲಿ ಶರಣು ಸಮರ್ಪಣೆಯನ್ನು ಶರಣೆ ಬಸಮ್ಮ ಭರಮಶೆಟ್ಟಿ ಅವರು, ವಚನಮಂಗಳವನ್ನು ಶರಣೆ ವಿಜಯ ಮಹಾಂತಮ್ಮ ಅವರು ಮಾಡಿದರು. ಕಾರ್ಯಕ್ರಮ ನಿರ್ವಹಣೆಯನ್ನು ಶರಣೆ ಜಯಶ್ರೀ ಆಲೂರ ಅವರು ಅಚ್ಚುಕಟ್ಟಾಗಿ ನೆರವೇರಿಸಿದರು.

ಸುಧಾ ಪಾಟೀಲ
ವಿಶ್ವಸ್ಥರು                                                                ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ ಪುಣೆ

- Advertisement -
- Advertisement -

Latest News

ಮನ ಸೆಳೆದ ಶಾಂತಲಾ ಆರ್ಟ್ ಗ್ರೂಪ್ ಶೋ

ಕಲಾವಿದನು ಮೂಲತಃ ಸೌಂದರ್ಯ ಆರಾಧಕ ಹಾಗೂ ಸೌಂದರ್ಯವನ್ನು ಪ್ರೀತಿಸುವವನು. ಪ್ರಕೃತಿ ಸೌಂದರ್ಯಮಯ ಕಲೆ ಆನಂದಮಯ ಅನ್ನುವಂತೆ ಕಲಾವಿದನು ದೃಶ್ಯಗಳ ನಕಲನ್ನು ಮಾಡಲಾರ ಹಾಗೂ ತನ್ನೊಳಗಿನ ವಿಚಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group