spot_img
spot_img

ಮಹಮ್ಮದ್ ರಫೀ ರವರ ಸಂಗೀತ ಸಂಜೆ ಕಾರ್ಯಕ್ರಮ

Must Read

spot_img
- Advertisement -

ಮೈಸೂರಿನ ರಾಘವೇಂದ್ರ ರತ್ನಾಕರ್ ಅರ್ಪಿಸಿರುವ ಸಂಗೀತ ಸಾಮ್ರಾಟ್ ಮಹಮ್ಮದ್ ರಫೀ ಸಂಗೀತ ಸಂಜೆ ಕಾರ್ಯಕ್ರಮ ದಿನಾಂಕ:೦೧.೦೮-೨೦೨೪ ರ ಗುರುವಾರ ನಾದಬ್ರಹ್ಮ ಸಂಗೀತ ಸಭಾದಲ್ಲಿ ನೆರವೇರಿತು.

ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಿವೃತ್ತ ಪ್ರಾಧ್ಯಾಪಕರಾದ ಡಾ.ಶಿವರಾಜಪ್ಪ ರವರು ಮಾತನಾಡಿ ಮೈಸೂರು ಸಾಂಸ್ಕೃತಿಕ ಕ್ಷೇತ್ರದ ರಾಯಭಾರಿ. ಕಲೆಗಳನ್ನು ಪ್ರೋತ್ಸಾಹಿಸುವ ನೆಲೆಬೀಡು. ಇಲ್ಲಿ ಸಾಧು ಸಂತರಿಂದ ಹಿಡಿದು ರಾಜಮನೆತನದ ವರೆಗೆ ಸಂಗೀತವನ್ನು ಪ್ರೋತ್ಸಾಹಿಸಿ ಬೆಳೆಸಿದ್ದಿದೆ. ಅಂತಹ ವಿರಳರಲ್ಲಿ ರಾಘವೇಂದ್ರ ರತ್ನಾಕರ್ ರವರು ಸಂಗೀತವನ್ನೇ ಜೀವನವನ್ನಾಗಿಸಿಕೊಂಡು ಬದುಕಿದವರು. ಅದರಲ್ಲೂ ಮುಖ್ಯವಾಗಿ ಕನ್ನಡದ ಹಾಡುಗಳ ಜೊತೆಗೆ ಸಂಗೀತ ಸಾಮ್ರಾಟ್ ಮಹಮ್ಮದ್ ರಫೀ ರವರ ಹಾಡುಗಳನ್ನು ಯಥಾವತ್ತಾಗಿ ಹಾಡುಗಳನ್ನು ಹಾಡಿ ನಮಗೆ ಹಳೆಯ ಚಲನಚಿತ್ರದ ನೆನಪುಗಳನ್ನು ಮೆಲುಕು ಹಾಕಲು ಅವಕಾಶ ಮಾಡಿಕೊಟ್ಟಿರುವುದು ನಿಜಕ್ಕೂ ಅವಿಸ್ಮರಣೀಯ. ಯಾವುದೇ ಆಗಲಿ ಅದೃಷ್ಟವನ್ನು ನಂಬದೆ ಆತ್ಮಬಲವನ್ನು ನಂಬಿ ಬದುಕನ್ನು ರೂಪಿಸಿಕೊಂಡು ಜೀವನ ಸಾರ್ಥಕತೆಯನ್ನು ಕಂಡುಕೊಳ್ಳಬೇಕು ಅಂತಹ ಅಪರೂಪದ ಕಲಾವಿದ ಕುಟುಂಬ ರತ್ನಾಕರ್ ರವರ ಕುಟುಂಬ. ಇಂತಹ ಮಹನೀಯರಿಗೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಹೆಚ್ಚಿನ ಪ್ರೋತ್ಸಾಹ ಮತ್ತು ಸಹಕಾರದೊಂದಿಗೆ ಬದುಕಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕಲಾವಿದರಾದ ರಾಘವೇಂದ್ರ ರತ್ನಾಕರ್, ಡಾ.ಪ್ರೀತಂ ರಾಘವೇಂದ್ರ, ಶ್ರೇಷ್ಠ ಕೆ ರಾಘ್, ಕಲಾ ಪೋಷಕರಾದ ಟಿ.ಆರ್.ಹರೀಶ್ ಪ್ರಸಾದ್, ಎಂ.ಕೆ.ಪುರಾಣಿಕ್, ಉದ್ಯಮಿ ರವಿಗೌಡ, ಸಮಾಜ ಸೇವಕರಾದ ಕೆ.ರಘುರಾಮ್ ವಾಜಪೇಯಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಗೆರೆ ಗೋಪಾಲ್, ಕವಿಯತ್ರಿ ಡಾ.ಸೌಗಂಧಿಕ ವಿ ಜೋಯಿಸ್, ಎಂ.ನಂಜುಂಡಯ್ಯ, ಸೋಮಶೇಖರ್ ಆರಾಧ್ಯ ಉಪಸ್ಥಿತರಿದ್ದರು.

- Advertisement -

ಗಾಯಕ ಆರ್.ಸುಧಿಂದ್ರ ರವರ ನಿರೂಪಣೆಯಿಂದ ಪ್ರಾರಂಭವಾದ ಕಾರ್ಯಕ್ರಮ ಮಹಮ್ಮದ್ ರಫೀ ರವರ ಆಯ್ದ ಹಿಂದಿ ಚಿತ್ರಗೀತೆಗಳಾದ ಯೊಹೀ ತುಂ ಮುಜಸೆ ಬಾತ್ ಕರ್ತೀ ಹೋ, ಖುದಾಬೀ ಆಸುಮಾನ್‌ಸೆ, ಕುಮಾರಿ ಶ್ರೇಷ್ಠ ರವರಿಂದ ನಾದಮಯ ಹಾಡು, ಓ ಮೇರೆ ಶಾಹೆ ಕುಬಾನ್, ಅಕೀಲೆ ಹೇ ಚಲೀ ಆವೂ ಜಾಹಾ ಹೋ, ಹಾಯ್ ರೆ ಹಾಯ್, ನೀನೆಲ್ಲಿ ನಡೆವೆ ದೂರ, ತುಂ ಮುಝುಸೆ ಯಾ ಬುಲಾನ ಪಾವೋಗೆ, ಬದನ್ ಪೇ ಸಿತಾರೇ ಲೇ ಪತೇ ಹೂಯೆ, ಮೇರಾ ಮನೆ ತೇರಾ ಪ್ಯಾಸಾ, ಏ ಚಾಂದ್ ಸಾ ರೋಷನ್ ಚೆಹ್ರಾ, ಕಲೆ ಪಾಲಕ್ ಮೇ ಜೂಟಾ ಗುಸ್ಯಾ, ತುಂ ಬಿನ್ ಜಾವೂ ಕಹಾ, ಚಾಹೆ ಕೋಯಿ ಮುಝೇ ಜಂಗ್ಲೀ ಕಹೇ, ಓ ದುನಿಯಾ ಕೆ ರಖವಾಲೇ ಹಾಗೂ ಕುಮಾರಿ ಶ್ರೇಷ್ಠ ರವರಿಂದ ಕನ್ನಡ, ಹಿಂದ ಹಾಗೂ ಕೊರಿಯನ್ ಗೀತೆಗಳನ್ನು ನಿಮ್ಮ ಮೆಚ್ಚಿನ ಬ್ಲಾಕ್ ಪಿಂಕ್‌ನಲ್ಲಿ ಹಾಡಲಾಯಿತು.

- Advertisement -
- Advertisement -

Latest News

ಎಸ್ ಎಂ ಕೃಷ್ಣ ನಿಧನಕ್ಕೆ ಕಡಾಡಿ ಸಂತಾಪ

ಮೂಡಲಗಿ:ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ರಾಜ್ಯಪಾಲರೂ ಸೇರಿದಂತೆ ಅನೇಕ ಉನ್ನತ ಹುದ್ದೆಗಳಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ರಾಜ್ಯಕ್ಕೆ ಹಾಗೂ ದೇಶಕ್ಕೆ ತಮ್ಮದೇ ಆದ ಅಪಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group