ಸಿಂದಗಿ: ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು ಪ್ರಚೋದನಕಾರಿ, ಕೋಮುವಾದಿ ಮಾತುಗಳನ್ನಾಡಿ ಮುಸ್ಲೀಂರ ಭಾವನೆಗಳನ್ನು ಕೆರಳಿಸುತ್ತಿದ್ದಾರೆ. ಅದಕ್ಕೆ ಕಿವಿಗೊಡದೇ ಮುಸ್ಲೀಂರು ರಸ್ತೆಗೆ ಇಳಿದು ಪ್ರತಿಭಟನೆಗೆ ನಡೆಸಿದರೆ ನ್ಯಾಯ ಸಿಗದು ನ್ಯಾಯಾಲಯದಲ್ಲಿ ಸಿಗುವ ನ್ಯಾಯಕ್ಕಾಗಿ ಶಾಂತಿಯುತವಾಗಿ ಹೊರಾಟ ನಡೆಸಿ ಎಂದು ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ ಮುಸ್ಲೀಂ ಮುಖಂಡರಿಗೆ ಸಲಹೆ ನೀಡಿದರು.
ಪಟ್ಟಣದ ಅಂಜುಮನ್ ಎ ಇಸ್ಲಾಂ ಶಿಕ್ಷಣ ಸಂಸ್ಥೆಯ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯ ನೂಪುರ ಶರ್ಮಾ, ನವೀನ ಜಿಂದಾಲ್ ಅವರು ಮಹ್ಮದ ಪೈಗಂಬರ ಕುರಿತು ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ಖಂಡನಾರ್ಹ ಆದರೆ ಭಾರತ ಸರಕಾರ ಸಬೂಬು ನೀಡಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಅವರಿಗೆ ಪೊಲೀಸ ಭದ್ರತೆ ನೀಡಿದ್ದು ನಾಚಿಕೆಗೇಡಿತನವಾಗಿದೆ ಇದರ ವಿರುದ್ದ ಕೆಲ ಸಂಘಟನೆಗಳು ಪ್ರತಿಭಟನೆಗಳು ನಡೆಯುತ್ತಿವೆ ಅದು ಒಳ್ಳೆಯ ಬೆಳವಣಿಗೆಯಲ್ಲ ನ್ಯಾಯಯುತ ಹೋರಾಟಗಳು ನ್ಯಾಯಾಲಯಗಳಲ್ಲಿ ನಡೆಸಿದರೆ ಉತ್ತಮ ಎಂದು ಹೇಳಿದ ಅವರು ಜೆ.ಎನ್.ಯು ಸಂಘಟನೆಯ ಉಮರವುಲ್ಲಾ ಅವರನ್ನು ಬಂಧಿಖಾನೆಗೆ ಒಳಪಡಿಸಿದ ರೀತಿಯಲ್ಲಿ ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋಧ ಮುತಾಲಿಕ್, ಕೆ.ಎಸ್.ಈಶ್ವರಪ್ಪ ಸೇರಿದಂತೆ ಕೆಲವು ಬಿಜೆಪಿ ನಾಯಕರು ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ ಆದರೆ ಅವರಿಗೇಕೆ ಆ ರೀತಿಯ ಶಿಕ್ಷೆ ಇಲ್ಲ ಕೂಡಲೇ ಅವರನ್ನು ಬಂದಿಖಾನೆಯಲ್ಲಿಟ್ಟು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ಸಂಘ ಪರಿವಾರದ ಮುಖಂಡ ಬಾಗವತ ಅವರು ಕೆಲ ದಿನಗಳ ಹಿಂದೆ ಮುಸ್ಲೀಂರು ಇಲ್ಲಿಯವರೇ ಆದರೆ ಇಸ್ಲಾಂ ಮಾತ್ರ ಬೇರೆ ಕಡೆಯಿಂದ ಬಂದಿದೆ ಎಂದು ಹೇಳಿಕೆ ನೀಡಿದ್ದು ಇಲ್ಲಿ ಸ್ಮರಿಸಬಹುದು ಎಂದರು.
ಈ ಸಂದರ್ಭದಲ್ಲಿ ಅಂಜುಮನ್ ಸಂಸ್ಥೆಯ ನಿರ್ದೇಶಕ ಮಹಿಬೂಬ ಹಸರಗುಂಡಗಿ ಇದ್ದರು.