ಮೂಡಲಗಿ – ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಬೆಳಗಾವಿಯ ಇಷ್ಟಾ ಅಪಾರ್ಟ್ ಮೆಂಟ್ನಲ್ಲಿ ಮೂಡಲಗಿಯ ಜ್ಞಾನದೀಪ್ತಿ ಫೌಂಡೇಶನ್ ಇವರ ವತಿಯಿಂದ ನಡೆದ ಸಮಾರಂಭದಲ್ಲಿ ಕು.ವೈಷ್ಣವಿ ಶಿಂದಿಹಟ್ಟಿ ಆಂಗ್ಲಭಾಷೆಯಲ್ಲಿ ಬರೆದ My Constitution- My Pride ಪುಸ್ತಕವನ್ನು ಡಾ.ಸಂಜಯ ಶಿಂದಿಹಟ್ಟಿ, ಅಧ್ಯಕ್ಷರು, ಮೂಡಲಗಿ ಕನ್ನಡ ಸಾಹಿತ್ಯ ಪರಿಷತ್ ಇವರು ಕನ್ನಡಕ್ಕೆ ಅನುವಾದಿಸಿದ “ನನ್ನ ಸಂವಿಧಾನ-ನನ್ನ ಹೆಮ್ಮೆ” ಪುಸ್ತಕವನ್ನು ಬೆಳಗಾವಿ ಜಿಲ್ಲಾ ಸಾಹಿತ್ಯ ಪರಿಷತಿನ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಇವರು ಬಿಡುಗಡೆಗೊಳಿಸಿದರು.
ಪ್ರಕಾಶ ಅವಲಕ್ಕಿ , ಅಧ್ಯಕ್ಷರು,ಹುಕ್ಕೇರಿ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ ಇವರು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಮಹತ್ವದ ಕುರಿತು ಮಾತನಾಡಿದರು.
ಕಾಮಿ೯ಕ ಇಲಾಖೆಯ ಉಪ ಆಯುಕ್ತರಾದ ವೆಂಕಟೇಶ ಶಿಂದಿಹಟ್ಟಿ ಮಾತನಾಡಿ, ಭಾರತೀಯ ಸಂವಿಧಾನದ ಮೂಲ ಆಶಯಗಳು ಮತ್ತು ಮೌಲ್ಯಗಳು, ಈ ಪುಸ್ತಕದಲ್ಲಿ ಮಕ್ಕಳ ಹಕ್ಕುಗಳ ಬಗೆಗಿನ ಪ್ರತಿ ಅನುಚ್ಛೇದದ ಅಥ೯,ಅದಕ್ಕೆ ಪೂರಕವಾದ ಸ್ವರಚಿತ ಚಿತ್ರಗಳು, ದೃಶ್ಯದ ಸಂಭಾಷಣೆಗಳು, ಚಟುವಟಿಕೆಗಳ ಮೂಲಕ ಸಂವಿಧಾನ ಅಥೈ೯ಸುವಿಕೆಯ ಅಂಶಗಳು ಪುಸ್ತಕದಲ್ಲಿರುವುದರ ಬಗ್ಗೆ ತಿಳಿಸಿದರು.
ಎಮ್. ವಾಯ್. ಮೆಣಸಿನಕಾಯಿ, ಕಾಯ೯ದಶಿ೯ಗಳು ಬೆಳಗಾವಿ ಕ ಸಾ ಪ ಕಾಯ೯ಕ್ರಮ ನಿವ೯ಹಿಸಿದರು. ಸಮಾರಂಭದಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷರುಗಳು ಉಪಸ್ಥಿತರಿದ್ದರು.