spot_img
spot_img

ಬದುಕಿನ ದಾರಿ ದೀಪ ನನ್ನ ಅಪ್ಪ; ಒಂದು ನೆನಪು

Must Read

ಪುರಾಣೋಕ್ತ ಪ್ರಸಿದ್ದ ಶ್ರೀ ನರಸಿಂಹ ಕ್ಷೇತ್ರವೇ ಕೂಡಲಿಯಿಂದ ಕೇವಲ ಕಿ.ಮಿ. ಸಾಗಿದರೆ ರುದ್ರಾಂಶ ಸಂಭೂತರಾದ ಶ್ರೀ ಶ್ರೀ ಸತ್ಯಧರ್ಮತೀರ್ಥರ ಮೂಲ ಬೃಂದಾವನ ಕ್ಷೇತ್ರ ಶ್ರೀಹೊಳೆಹೊನ್ನೂರು ಕಾಣಸಿಗುತ್ತದೆ. ಕಲ್ಲಾಪುರದ ಮಾಣಿಕ್ಯ ಶ್ರೀನಿವಾಸಚಾರ್ – ಅಂಬಾಬಾಯಿ ಮತ್ತು ರಾಮಚಂದ್ರಾಚಾರ್ ರ ಏಳನೇ ಸುಪುತ್ರ – 21 ನೇ ಜೂನ್ 1943 ರಂದು ಹುಟ್ಟಿದ್ದು ಶ್ರೀ ಸತ್ಯ ಧರ್ಮ ತೀರ್ಥರ ವೃಂದಾವನವಿರುವ ಹೊಳೆ ಹೊನ್ನೂರಿನ ಕೋಟೆ ಬ್ರಾಹ್ಮಣರ ಬೀದಿಯಲ್ಲಿರುವ ಮನೆಯಲ್ಲಿ ಆದರೆ ನನ್ನ ತಂದೆ ಹುಟ್ಟಿ 2 ತಿಂಗಳು ಕಳೆಯುವ ವೇಳೆಗೆ ಅವರ ತಂದೆ ಇಹಲೋಕ ತ್ಯಜಿಸಿದ್ದರು.

ನಮ್ಮ ತಂದೆಯ ತಾಯಿ ಅವರಿಗೆ ಮಗು ಹುಟ್ಟಿದ ಎರಡು ತಿಂಗಳಲ್ಲಿ ಪತಿ ವಿಯೋಗ ಅದರಿಂದ ವಿಚಲಿತ ರಾದ ಅಂಬಾಬಾಯಿ ಅವರು ನನ್ನ ತಂದೆ ಶ್ರೀನಿವಾಸಾಚಾರ್ ಅವರ ಆರೈಕೆ ಮಾಡಲೇ ಇಲ್ಲ ಇದರಿಂದ ತಾಯಿ ವಾತ್ಸಲ್ಯದಿಂದ ವಂಚಿತರಾದ ನನ್ನ ತಂದೆಗೆ ಬಾಲ್ಯ ಕಬ್ಬಿಣದ ಕಡಲೆ ಆಗಿತ್ತು , ಅವರ ಆರೈಕೆಗೆ ಟೊಂಕ ಕಟ್ಟಿ ನಿಂತಿದ್ದು ಅವರ ಅತ್ತಿಗೆ ಇಂದಿರಾಬಾಯಿ , ಅವರ ಅಣ್ಣ ಅನಂತ ತೀರ್ಥಚಾರ್ ಅವರ ಧರ್ಮಪತ್ನಿ !

ನನ್ನ ತಂದೆ ಚಿಕ್ಕವರಿದ್ದಾಗ ಅಮ್ಮ ಎಂಬ ಸಿಡಿಲು ಎರಗಿ ಮೈ ತುಂಬಾ ಗುಳ್ಳೆ , ಚಿಕ್ಕ ಬಾಳೆ ಎಲೆ ಮೇಲೆ ಮಲಗಿಸಿ ಅವರ ಆರೈಕೆ ಮಾಡಿದ್ದರು ಎಂದು ನನ್ನ ತಾಯಿ ನನ್ನ ತಂದೆ ಹೇಳಿದ ಮಾತನ್ನು ಆಗಾಗ ನಮ್ಮ ಬಳಿ ಹೇಳುತ್ತಾ ಇದ್ದರು ,ಒಟ್ಟಿನಲ್ಲಿ ಬದುಕಿನ ಉದ್ದಕ್ಕೂ ಕಷ್ಟದ ದಿನಗಳು ಕಳೆದ ನನ್ನ ತಂದೆ ಮಕ್ಕಳ ಯಶಸ್ಸನ್ನು ಕಂಡು ಅವರ ಮುಖದಲ್ಲಿ ಮಂದಹಾಸ ಬಿರುತ್ತಾ ಅವರ ಬದುಕಿನ ಕಷ್ಟದ ದಿನಗಳನ್ನು ಮರೆಯುವ ಪ್ರಯತ್ನ ಮಾಡುತ್ತಾ ಇದ್ದ ಮಾಣಿಕ್ಯ ಅವರು !!

ಆದರೆ ಹೃದಯದ ಆಳದಲ್ಲಿ ಇರುವ ಪ್ರೀತಿ – ನೆನಪುಗಳ ಮೆರವಣಿಗೆಯಲ್ಲಿ ಪ್ರತಿನಿತ್ಯದ ಬದುಕು ಸಾಗುತ್ತಾ ಇರುತ್ತದೆ , ನಮ್ಮ ತಂದೆಯವರನ್ನು ಕಳೆದುಕೊಂಡು 1 ವರುಷ 11 ತಿಂಗಳು ಎಷ್ಟು ವೇಗವಾಗಿ ಕಳೆದುಹೋಗಿದೆ ಎಂದರೆ ಕಾಲದ ವೇಗದಲ್ಲಿ ಬದುಕು ಕಟ್ಟಿಕೊಳ್ಳಲು ಹೋರಾಟ ಮುಗಿದಿಲ್ಲ ನಾನು ಸಾಧಿಸಿದ್ದು ಮಾತ್ರ ಶೂನ್ಯ.

ಬದುಕಿನ ಎಲ್ಲ ಕ್ಷಣ ಕ್ಷಣವೂ ನನ್ನ ಜೊತೆ ಜೊತೆಗೆ ಬೆನ್ನೆಲುಬಾಗಿ ಇದ್ದ ನನ್ನ ಮುದ್ದಿನ ಅಪ್ಪ 16 ನೇ ಆಗಸ್ಟ್ 2020 ರ ಮಧ್ಯರಾತ್ರಿ 1.40 ರ ಸಮಯ ನನ್ನ ಹಾಗೂ ನನ್ನ ಕುಟುಂಬವನ್ನು ಬಿಟ್ಟು ತೀರ್ಥಹಳ್ಳಿ ಯ ನನ್ನ ಅಣ್ಣ ನಾಗೇಂದ್ರ ಭಟ್ಟರ ಮನೆಯಲ್ಲಿ ಇಹಲೋಕ ತ್ಯಜಿಸಿದರು , ಅಂದು ಶ್ರೀ ಸತ್ಯಧರ್ಮ ತೀರ್ಥರ ಪೂರ್ವರಾಧನೆ , 2020 ಆಗಸ್ಟ್ 17 ರಂದು ಮಧ್ಯಾರಾಧನೆ ಅಂತಹ ಸಂದರ್ಭದಲ್ಲಿ ಲೋಕ ತ್ಯಜಿಸಿದ ನಮ್ಮ ತಂದೆ ತುಂಬಾ ಪುಣ್ಯವಂತರು , ಗುರುಗಳ ಮೇಲೆ ಅಪಾರವಾದ ಭಕ್ತಿ ನನ್ನ ತಂದೆಗೆ.

ಬದುಕಿನ ಉದ್ದಕ್ಕೂ ಕುಟುಂಬದ ಏಳಿಗೆಗಾಗಿ ಟೊಂಕ ಕಟ್ಟಿ ನಿಂತಿದ್ದ ಅವರ ಬಗ್ಗೆ ಹಾಗೂ ಅವರ ಸಾಧನೆ ಬಗ್ಗೆ ಬರೆಯುವ ಮನಸ್ಸು.ನಾನು ನಮ್ಮ ತಂದೆಯ ಪ್ರೀತಿಯ ಮಗ ನನಗೆ ನನ್ನ ತಂದೆ ಅಚ್ಚು ಮೆಚ್ಚು !!

ನನ್ನ ಬದುಕಿನ ಹೋರಾಟದಲ್ಲಿ ನನ್ನ ತಂದೆ ಸದಾ ನನ್ನ ನೆಚ್ಚಿನ ಜೊತೆಗಾರ, ನನ್ನ ಜೀವನದ ಪ್ರತಿ ಕ್ಷಣ ಕ್ಷಣವೂ ಆರ್ಥಿಕವಾಗಿ ಸದಾ ಸಹಾಯ ಮಾಡುತ್ತಾ ನಾನು ಒಳ್ಳೆಯ ಸ್ಥಾನ ದಲ್ಲಿ ಇರಲು ಅವರು ಸುದೀರ್ಘ ಪ್ರಯತ್ನ ಮಾಡಿದ್ದರು ಆದರೆ ನಾನು ಮಾತ್ರ ಅವರ ಕಟ್ಟ ಕಡೆಯ ಬದುಕಿನ ಹಂತದ ವರೆಗೂ ನಾನು ಸಾಧಿಸಿದ್ದು ಮಾತ್ರ ಶೂನ್ಯ.

ಸೈಕಲ್ ಸವಾರಿ:

ನನ್ನ ಅಪ್ಪ ಪ್ರತಿ ನಿತ್ಯ ಜೀವನದಲ್ಲಿ 50 ರಿಂದ 60 ಕಿ.ಮೀ ಸೈಕಲ್ ಸವಾರಿ ಮಾಡಿ ಹಳ್ಳಿ – ಹಳ್ಳಿಗೆ ಭೇಟಿ ನೀಡಿ ಜನರ ಆರೋಗ್ಯ ದ ಬಗ್ಗೆ ವಿಚಾರಿಸಿ ಆರೋಗ್ಯ ಇಲಾಖೆ ಯಲ್ಲಿ ಸೇವೆ ಸಲ್ಲಿಸಿದ ಮಹಾನ್ ಚೇತನ, ಪ್ರತಿಯೊಬ್ಬರಿಗೂ ಅಪ್ಪ ದೊಡ್ಡ ಸಾಧಕ !! ಹಾಗೆಯೇ ನನ್ನ ಬಾಳಿನಲ್ಲಿಯೂ ಸಹ , ಆದರೆ ಆರೋಗ್ಯ ಇಲಾಖೆ ಯಲ್ಲಿ ನನ್ನ ತಂದೆ ಸೇವೆ ಸಲ್ಲಿಸಿ ಅನೇಕ ಜನರ ಬದುಕಿಗೆ ಲವಲವಿಕೆ ತಂದು ಕೊಟ್ಟ ಸರಳ ಸಜ್ಜನ ! ಜ್ಯೂನಿಯರ್ ಹೆಲ್ತ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು , ಶಿವಮೊಗ್ಗದ ಹೊಳೆ ಹೊನ್ನೂರಿನಲ್ಲಿ ವೃತ್ತಿ ಬದುಕು ಆರಂಭ ಮಾಡಿದ್ದ ಅವರು ಶಿರಾಳ ಕೊಪ್ಪ ,ತೀರ್ಥಹಳ್ಳಿ , ಹೊನ್ನಾಳಿ , ತೀರ್ಥಹಳ್ಳಿ , ಭಾರತೀಪುರ, ಕನ್ನಂಗಿ , ದೇವಂಗಿ ಮಲೆನಾಡಿನ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ವೃತ್ತಿ ಬದುಕು ನಡೆಸಿದ ಇವರು ಹೊಳೆ ಹೊನ್ನೂರಿನಲ್ಲಿ ಅವರ ವೃತ್ತಿ ಬದುಕಿನ ನಿವೃತ್ತಿ ಹೊಂದಿದ್ದರು. ಯಾರಿಗೂ ಕೇಡು ಬಯಸದ ಮಹಾನ್ ಚೇತನ.ನಾನು ಪ್ರಾಯಶಃ 8 ನೇ ತರಗತಿ ಇರಬಹುದು ಆಗ ನನ್ನ ತಂದೆಗೆ ಕೆಲಸದ ಸಮಯದಲ್ಲಿ ದೇವಂಗಿ ಬಳಿ ಜೀಪ್ ಅಪಘಾತ ಸಂಭವಿಸಿ ನನ್ನ ತಂದೆ ಸುಮಾರು ತಿಂಗಳ ಕಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ,ಅಲ್ಲಿಂದ ಆರಂಭವಾದ ನೋವಿನ ಬದುಕು ಅವರ ಕೊನೆಯ ಉಸಿರು ಇರುವವರೆಗೆ ಬರಿ ನೋವು ಹೋರಾಟ , ಸತತ ಆರೋಗ್ಯದಲ್ಲಿ ಏರು – ಪೇರು. ಕಲ್ಲಾಪುರ ವಂಶದ ಕುಡಿ. ಅನೇಕ ಸಾಧಕರು , ಲೇಖಕರು , ಮಹಾನ್ ಚೇತನಗಳನ್ನು ನೀಡಿದ ಕುಟುಂಬ ಕಲ್ಲಾಪುರದ ಕುಟುಂಬ – ಬಯಲು ಸೀಮೆಯ ಧಾರವಾಡ ಮತ್ತು ಹಾವೇರಿಯ ಬಳಿ ಇದೆ ಕಲ್ಲಾಪುರ ಗ್ರಾಮ !!

ದೈವ ಭಕ್ತ:

ಮಲೆನಾಡಿನ ತೀರ್ಥಹಳ್ಳಿಯ ಬಾಳೇಬೈಲುನಲ್ಲಿ ಅನೇಕ ವರುಷಗಳು ವಾಸ ಮಾಡಿ ಬಾಳೆಬೈಲಿನ ಶ್ರೀ ವೆಂಕಟರಮಣ ಸ್ವಾಮಿಗೆ ಪೂಜೆ ಸಲ್ಲಿಸಿದ್ದ ಇವರು ದೈವ ಭಕ್ತರು ಸಹ ಹಾಗೂ ಹೊಳೆಹೊನ್ನೂರು ನಲ್ಲಿ ನೆಲೆಸಿರುವ ಸತ್ಯ ಧರ್ಮ ತೀರ್ಥರ ಪರಮ ಭಕ್ತರು.ಸದಾ ಒಂದಿಲ್ಲೊಂದು ರೀತಿಯಲ್ಲಿ ನಮ್ಮ ಏಳಿಗೆಗಾಗಿ ಶ್ರಮಿಸಿದ ನನ್ನ ಅಪ್ಪ , ಸದಾ ಚಟುವಟಿಕೆ ,ಕ್ರಿಯಾಶೀಲ ವ್ಯಕ್ತಿ ಸೈಕಲ್ ತುಳಿದೇ ನಮ್ಮ ಬದುಕಿಗೆ ಭದ್ರ ಬುನಾದಿ ಹಾಕಿದ ನನ್ನ ಅಪ್ಪ ನನ್ನ ಬದುಕಿನ ಆಶಾ ಗೋಪುರ – ಇವರ ಧರ್ಮ ಪತ್ನಿ ಶ್ರೀಮತಿ ಪಂಕಜ ಹಾಗೂ ಹಿರಿಯ ಪುತ್ರಿ ಪ್ರತಿಭಾ ,ಹಿರಿಯ ಪುತ್ರ ನಾಗೇಂದ್ರ ಮತ್ತು ಕಿರಿಯ ಪುತ್ರ ಕವಿ ,ಹವ್ಯಾಸಿ ಬರಹಗಾರರ ತೀರ್ಥಹಳ್ಳಿ ಅನಂತ ಕಲ್ಲಾಪುರ ( ಅನು ಬಾಳೇಬೈಲು ) ಹಾಗೂ ಅಳಿಯ ಮೋಹನ್ , ಸೊಸೆಯಿಂದಿರಾದ ಶ್ರೀಮತಿ ರೂಪಾಶ್ರೀ ಮತ್ತು ಶ್ರೀಮತಿ ನಳಿನಿ ಹಾಗೂ ಮೊಮ್ಮಕಳಾದ ಪೂಜಾ , ಅನಿರುದ್ಧ, ಆದ್ಯಾ ಹಾಗೂ ತಾರಿಣಿ (ತಾರ) ಇವರನ್ನು ಆಗಲಿ ಇಹ ಲೋಕ ತ್ಯಜಿಸಿದ ಆ ಮಹಾನ್ ಚೇತನ ಇನ್ನು ಬರಿ ನೆನಪು ಮಾತ್ರ.

ಹರಿಕಾಥಾಮೃತಸಾರದ ಪಠಣ ಮಾಡುತ್ತಿದ್ದ ಶ್ರೀಮತಿ ಪಂಕಜ ಶ್ರೀನಿವಾಸ ಕಲ್ಲಾಪುರ ಇನ್ನೂ ಬರಿ ನೆನಪು ಮಾತ್ರ -ಮಲೆನಾಡಿನ ಅಳಗಂಭಟ್ ಅವರ ಮನೆತನದಲ್ಲಿ ವೆಂಕಟರಮಣಚಾರ್ ಮತ್ತು ರತ್ನಮ್ಮ ರವರ ಸುಪುತ್ರಿಯಾಗಿ 19.01.1952 ರಲ್ಲಿ ಜನಸಿ ಕಲ್ಲಾಪುರ ಮನೆತನೆದ ಕಿರಿಯ ಸೊಸೆ ಆಗಿದ್ದ ಶ್ರೀಮತಿ(ರುಕ್ಮಿಣಿ) ಪಂಕಜ ಶ್ರೀನಿವಾಸ ಕಲ್ಲಾಪುರ ಅವರು 14 ಜೂನ್ 2022 ರ ಮಂಗಳವಾರ ತೀರ್ಥಹಳ್ಳಿಯಲ್ಲಿ ಶ್ರೀ ಹರಿಯ ಪಾದ ಸೇರಿದರು.

ಬದುಕಿನ ಉದ್ದಕ್ಕೂ ಸಂಸಾರದ ಏಳಿಗೆಗಾಗಿ ಪತಿಯ ಜೊತೆ ಹೆಗಲಿಗೆ ಹೆಗಲು ಕೊಟ್ಟು ಶ್ರಮದ ಬದುಕು ಸಾಗಿಸಿದ ಶ್ರಮ ಜೀವಿ, ಮನೆಯಲ್ಲಿ ಗೃಹಣಿ ಆಗಿ ಸಂಸಾರ ದ ನೌಕೆ ಸಾಗಿಸಲು ಬತ್ತಿ ಕಟ್ಟು ಮಾಡುವುದು , ಹೂವು ಕಟ್ಟುವುದು ,ಹಾಗೂ ಅಂಚೆ ಇಲಾಖೆ ಯ ಆರ್.ಡಿ ಏಜೆಂಟ್ ಆಗಿ ಹಲವು ಬಗೆಯ ಕೆಲಸ ಮಾಡಿದ ಮಹಾನ್ ಚೇತನ ನನ್ನ ತಾಯಿ.

ಬದುಕಿನ ಉದ್ದಕ್ಕೂ ಭಗವಂತನ ಸೇವೆ ಮಾಡುತ್ತಾ ಭಜನಾ ಮಂಡಳಿ ಯಲ್ಲಿ ಸದಸ್ಯೆ ಆಗಿ ಅನೇಕ ಬಾರಿ ಅನೇಕ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಬದರಿಯಾತ್ರೆ ಗೆ ಪತಿ ಶ್ರೀನಿವಾಸ ಕಲ್ಲಾಪುರ ಅವರ ಜೊತೆ ಹೋಗಿ ಬಂದು …..ಉತ್ತಾರಾದಿಮಠ ದ 18 ವೃಂದಾವನ ಗಳನ್ನು ದರ್ಶನ ಮಾಡಿದ ಆಧ್ಯಾತ್ಮಿಕ ಸಾಧಕಿ , ಎಸ್.ಎಸ್.ಎಲ್.ಸಿ ವರೆಗೆ ವಿದ್ಯಾಭ್ಯಾಸ ಮಾಡಿ ಹಿಂದಿ ಭಾಷೆಯಲ್ಲಿ ಉನ್ನತ ಶಿಕ್ಷಣ ಪಡೆದಿರುತ್ತಾರೆ.

ಚಾತುರ್ಮಾಸ್ಯದ ರಂಗೋಲಿ…

ದಶವಾತರ ರಂಗೋಲಿ ಹಾಕಿ ಮತ್ತು ಚಾತುರ್ಮಾಸ್ಯ ಪೂರ್ಣ ತುಪ್ಪದ ದೀಪ ಹಚ್ಚಿ ಹಾಲು ಸಕ್ಕರೆ ನೈವೇದ್ಯ ಮಾಡುತ್ತಾ ಇದ್ದರು ನನ್ನ ತಾಯಿ ಶ್ರೀಮತಿ ಪಂಕಜ ಶ್ರೀನಿವಾಸ ಕಲ್ಲಾಪುರ.

ಮಣೆಯ ಮೇಲೆ ಗೋಕುಲ ಅಂತ ಸುತ್ತಲೂ 4 ಗೀರು ಹಾಕಿ ಅದರಲ್ಲಿ ಶ್ರೀಕಾರ, ಶಂಖ,ಚಕ್ರ ಗದ, ಪದ್ಮ, ರಾಮನ ತೊಟ್ಟಿಲು, ಸೀತೆ ಸೆರಗು, ಕೊಳಲು,ತಂತಿ ಬೇಲಿ, ಚತು ರ್ಭುಜ ನಾರಾಯಣ,ಕೂರ್ಮ , ಹೀಗೆ ಹಲವಾರು ಬಗೆಯ ರಂಗೋಲಿ ನಮ್ಮ ಮನೆಯ ಮುಂಭಾಗದಲ್ಲಿ ಇರುವ ಕೋಣೆ ಯಲ್ಲಿ ಹಾಕಿ ವೃತ ಆಚರಿಸಿ ಹತ್ತಿ ಯಿಂದ ಬತ್ತಿ ಮಾಡಿ ದಾನ ನೀಡುತ್ತಾ ಚಾತುರ್ಮಾಸ್ಯದ ವೃತ ಆಚರಣೆ ಮಾಡುತ್ತಾ ಇದ್ದರು ಹಾಗೂ ಲಕ್ಷ – ಲಕ್ಷ ಬತ್ತಿ ದಾನ ಮತ್ತು ಲಕ್ಷ – ಲಕ್ಷ ಹೂವುಗಳನ್ನು ಚಾತುರ್ಮಾಸ್ಯದಲ್ಲಿ ದೇವರಿಗೆ ಏರಿಸಿ , ಇನ್ನು ಅನೇಕ ಬಗೆಯ ದಾನ ಮಾಡುತ್ತಾ ವೃತಾಚರಣೆ ಮಾಡುತ್ತಾ ಇದ್ದರು.

ಶ್ರೀಮತಿ ಪಂಕಜಮ್ಮಶ್ರೀನಿವಾಸಚಾರ – ಪಂಕಜಮ್ಮನವರು ಶ್ರೀ ಕೃಷ್ಣ ಮಠದ ವಾರ್ಷಿಕನಿರ್ವಹಣೆಗೆ ಸಹಕಾರಿಸುತಿದ್ದು ಹಾಗು ಶ್ರೀ ಹರಿಕಾಥಾಮೃತಸಾರದ ಲಕ್ಷ ಪಾರಾಯಣದಲ್ಲಿ ಭಾಗವಹಿಸಿದ್ದು ಪ್ರತಿಭಾರಿಯು 5000 ದಿಂದ 10000 ರ ವರೆಗೆ ಪಾರಾಯಣ ದ ಲೆಕ್ಕ ಕೊಡುತಿದ್ದರು ಸದಾ ಪರಮಾತ್ಮನ ಅನುಸಂಧಾನ ಮಾಡಿದ ಸಾತ್ವಿಕ ಜೀವಿ ಅವರ ಚಟುವಟಿಕೆ ಮುಖ ಭಾವ ನಮೆಲರಿಗೂ ನೆನಪಿನಲ್ಲಿ ಇರುವಂಥವರು ತಾವು ಮಾಡಿದ್ದೆಲ್ಲ ಪರಮಾತ್ಮನಿಗೆ ಅರ್ಪಿಸಿರುವ ನಿಗರ್ವಿ ಯಾವಾಗಲು ತಮ್ಮಬಳಿ ಹರಿಕತಾಮೃತಸಾರದ ಪಠಣ ಮಾಡುತಿದ್ದರು ನಾವು ನಮ್ಮ ಲಕ್ಷ ಪಾರಾಯಣ ದ ಗುಂಪಿನಿಂದ ಒಬರನ್ನು ಕಳೆದುಕೊಂಡಿದ್ದು ಬಹಳ ನಷ್ಟವಾಗಿದೆ ಹೀಗೆ ತುಂಬು ಸಾತ್ವಿಕ ಜೀವಿಯಾದ ಪಂಕಜಮ್ಮ ನವರಿಗೆ ಪರಮಾತ್ಮ ಅವರಿಗೆ ಬೇಕಾದ ಸಾಯುಜ್ಯಾ ಸಿಗಲಿ ಎಂದು ಪ್ರಾರ್ಥಿಸುವ-

ಶ್ರೀ ಕೃಷ್ಣ ಮಠ. ಶ್ರೀ ಪೂರ್ಣಪ್ರಜ್ಞ ಭಜನಾಮಂಡಳಿ, ಅಧ್ಯಕ್ಷರು, ಕೆ ಲ್ ಉಪಾಧ್ಯಯ. ಶ್ರೀಮತಿ ವಾಣಿಉಪಾಧ್ಯಾಯ.


ಬರಹ: ತೀರ್ಥಹಳ್ಳಿ ಅನಂತ, ಕಲ್ಲಾಪುರ

- Advertisement -
- Advertisement -

Latest News

ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಸಿಂದಗಿ: ಪಟ್ಟಣದ ಭೀಮಾಶಂಕರ ಮಠದಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಮಾಡಲಾಯಿತು. ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಕೊಗಟನೂರ ಪೂಜ್ಯಶ್ರೀ...
- Advertisement -

More Articles Like This

- Advertisement -
close
error: Content is protected !!