“ಮುರಡಿ ಗ್ರಾಮದಲ್ಲಿ ಸಂತಶಿಶುನಾಳ ಶರೀಫರ ಶಿವಯೋಗಿಗಗಳ ಪುರಾಣ ಪ್ರವಚನ

Must Read

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...

ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ಮುಖಂಡರ ಮತಯಾಚನೆ

ಸಿಂದಗಿ: ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ನಾಯಕರು ಯರಗಲ್, ಗಬಸಾವಳಗಿ, ಮೋರಟಗಿ, ಬಗಲೂರ ಗ್ರಾಮ...

ರಾಜಕೀಯ ದ್ವೇಷ; ಮಾಜಿ ಪಟ್ಟಣ ಪಂಚಾಯಿತಿಯ ಸದಸ್ಯನ ಭೀಕರ ಹತ್ಯೆ

ಸಿಂದಗಿ: ನೂತನ ತಾಲೂಕು ಆಲಮೇಲ ಪಟ್ಟಣದ ಗಣೇಶ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ರಾತ್ರಿ 1.30 ಗಂಟೆಯ ಸುಮಾರಿಗೆ ಮಾಜಿ ಪಟ್ಟಣ ಪಂಚಾಯತಿ...

ಸಿಂದಗಿ : ಸಂತ ಶಿಶುನಾಳ ಶರೀಫರು ತತ್ವಪದಗಳ ರೂವಾರಿ, ಜೀವನದಲ್ಲಿ ನಡೆಯುವ ಘಟನೆಗಳು ಮಾನವರಿಗೆ ತಮ್ಮ ಜೀವನದಲ್ಲಿ ಮಾಡುವ ತಪ್ಪುಗಳನ್ನು, ಯೋಚಿಸುವ ರೀತಿಯನ್ನು ಯಾವುದೋ ಒಂದು ಸನ್ನಿವೇಶಕ್ಕೆ ಹೋಲಿಸಿ ಅವರು ತತ್ವ ಪದಗಳು ಹಾಡಿನ ಮೂಲಕ ಅವರು ವಿವರಿಸುತ್ತಿದ್ದರು. ತತ್ವ ಪದಗಳು ಹಾಡನ್ನು ನೇರವಾಗಿ ಅದರ ಅರ್ಥದಲ್ಲಿ ಕೇಳಿದರೆ ವಿಚಿತ್ರವೆನಿಸುವುದು ಆದರೆ ಅದರ ತಿರುಳು ಅರಿತು ಜೀವನಕ್ಕೆ ಹೋಲಿಸಿದರೆ ಅದರ ಅರ್ಥ ಹೊರ ಹೊಮ್ಮುವುದು ಎಂದು ಬಸವಕಲ್ಯಾಣ ಪ್ರವಚನಕಾರರಾದ ಮಾತೋಶ್ರೀ ನಾಗಮಣಿ ಅಮ್ಮನವರು ಹೇಳಿದರು.

ತಾಲೂಕಿನ ಮುರಡಿ ಗ್ರಾಮದ ಶ್ರೀ ಗುರು ಘಂಟಾಕರ್ಣ ಶಿವಯೋಗಿಗಳ 19 ನೆಯ ಜಾತ್ರಾ ಮಹೋತ್ಸವದ ಅಂಗವಾಗಿ ಸಂತ ಶಿಶುನಾಳ ಶರೀಫ ಶಿವಯೋಗಳ ಪುರಾಣ ಪ್ರವಚನದಲ್ಲಿ ಅವರು ಮಾತನಾಡಿ, ಜಾತಿಯಲ್ಲಿ ಅವರು ಮುಸ್ಲಿಮರಾಗಿದ್ದರೂ ಅವರ ಗುರುಗಳು ಬ್ರಾಹ್ಮಣ ಸಮಾಜದ ಗೋವಿಂದ ಭಟ್ಟರು ಆಗದ್ದರು .ಅವರ ಗುರು-ಶಿಷ್ಯ ಸಂಬಂಧ ಉತ್ತರ ಕರ್ನಾಟಕದಲ್ಲಿ ಅವರ ವಿಚಾರಧಾರೆಗಳು ಮನೆಮಾತಾಗಿದ್ದವು.

ಅವರ ತತ್ವಪದಗಳ ಕೊನೆಯಲ್ಲಿ ಸಾಮಾನ್ಯವಾಗಿ ಶಿಶುನಾಳಾಧೀಶ ಹಾಗೂ ಗುರು ಗೋವಿಂದರ ಉಲ್ಲೇಖವಿರುತ್ತದೆ. ನವಲಗುಂದದ ನಾಗಲಿಂಗ ಸ್ವಾಮಿಗಳು ಅವರ ಪರಮ ಸ್ನೇಹಿತರು ಹಾಗೂ ಹುಬ್ಬಳ್ಳಿಯ ಸಿದ್ಧಾರೂಢರೂ ಅವರ ಸಮಕಾಲೀನರು.ಶರೀಫರು ಒಂದು ಒಗಟಿನ ಪದ, ಒಡಪಿನ ಅಥವಾ ಬೆಡಗಿನ ಹಾಡು: ಕೋಡಗನ್ನ ಕೋಳಿ ನುಂಗಿತ್ತಾ’ ಎನ್ನುವ ಪದದಲ್ಲಿ; ಕೋಡಗ ಎಂದರೆ ಮಂಗ-ಮರ್ಕಟ; ಚಂಚಲ ಮನಸ್ಸು. ಕೋಳಿ ಬೆಳಗಿನ ಸೂಚನೆ. ಕೋಳಿ ಕೂಗಿದರೆ ಸೂರ್ಯೋದಯ; ಬೆಳಗಾಗುವುದು ಎಂದರೆ ಜ್ಞಾನೋದಯ. ಅದು ಆದಾಗ ಚಂಚಲ ಮನಸ್ಸು ಅದರಲ್ಲಿ ಕರಗಿಹೋಗುವುದು- ಇದು ಕೋಳಿ ಕೋಡಗನನ್ನು ನುಂಗುವುದು. ವೇದಾಂತದಲ್ಲಿ ಮನಸ್ಸನ್ನು ಮರ್ಕಟಕ್ಕೆ ಹಾಗು ಜ್ಞಾನೋದಯವನ್ನು ಸೂರ್ಯೋದಯಕ್ಕೆ ಹೋಲಿಸುವರು- ಇಲ್ಲಿ ಸೂರ್ಯೋದಯ ಸೂಚಿಸುವ ಕೋಳಿಗೆ ಹೋಲಿಸಿದೆ ; ಜ್ಞಾನೋದಯವಾದಾಗ ಮನಸ್ಸು ಲಯವಾಗಿ ಹೋಗುವುದು. ಅದು ಕೋಳಿ ಕೋಡಗನನ್ನು ನುಂಗಿದಂತೆ. ಇಲ್ಲಿ ಆ ಪ್ರತಿಮೆ ಉಪಯೋಗಿಸಿ ಹಾಡಿದ್ದಾರೆ. (ಸಂಸಾರವೆಂಬ ವೃಕ್ಷಕ್ಕೆ ವಿಷಯಗಳು ಟೊಂಗೆಗಳಿದ್ದಂತೆ. ಮನಸ್ಸೆಂಬ ಮಂಗವು ಸಂಸಾರದಲ್ಲಿ ವಿಷಯದಿಂದ ವಿಷಯಕ್ಕೆ ಹಾರುತ್ತ ಸುಖಪಡುತ್ತದೆ) ಮುಂದಿನ ಪದ್ಯಗಳೆಲ್ಲಾ ಹೀಗೆ ಚಂಚಲತೆಯನ್ನು ಅಚಲ-ಅವ್ಯಯ ಪರಬ್ರಹ್ಮ ತತ್ವವು ಅರಿವಾದಾಗ ಚಂಚಲತೆ ನಿಲ್ಲುವುದೆಂದು ಅನೇಕ ರೂಪಕದೊಡನೆ ಹಾಡಿದ್ದಾರೆ. ಕೊನೆಯ ಸಾಲು ಗುರು ಗೋವಿಂದರ ಕರುಣೆ ಶರೀಫರ ಅತ್ಮವನ್ನು – ನಾನೆಂಬ ಭಾವವನ್ನು ನುಂಗಿ -ಇಲ್ಲದಂತೆ ಮಾಡಿ ಜ್ಞಾನವನ್ನು ಜನ ಸಾಮಾನ್ಯರಿಗೆ ತಿಳಿಯ ರೂಪದಲ್ಲಿ ಅವರು ವಿಷಯ ಮನದಂಗಳಕ್ಕೆ ದೊರಕಿಸಿದ್ದಾರೆ.ಅವರ ತತ್ವ ಆದರ್ಶ ಜೀವನದಲ್ಲಿ ಅಳವಡಿಸಿ ಕಂಡು ಸಮಾಜದಲ್ಲಿ ಒಂದಾಗಿ ಬಾಳಬೇಕು ಎಂದರು.

ಕಾರ್ಯಕ್ರಮದಲ್ಲಿ ದೂರದರ್ಶನ ಕಲಾವಿದರಾದ ಸಂಗೀತ ಶಿಕ್ಷಕ ಬಸವರಾಜ ಭಂಟನೂರ ಸಂಗೀತ ಸೇವೆ ನೆರವೇರಿಸಿದರು.
ಚಂದ್ರಕಾಂತ ಹೂಗಾರ ಅವರು ತಬಲ ನುಡಿಸಿದರು..
ಈ ಕಾರ್ಯಕ್ರಮಕ್ಕೆ ನಾಡಿನ ಪೂಜ್ಯರು, ಗಣ್ಯ ಮಾನ್ಯರು ಮತ್ತು ಮುರಡಿ ಶ್ರೀ ಗುರುಗಳು ಸಕಲ ಸದ್ಭಕ್ತರು ಭಾಗವಹಿಸಿದ್ದರು.


ವರದಿ: ಪಂಡಿತ್ ಯಂಪೂರೆ, ಸಿಂದಗಿ

- Advertisement -
- Advertisement -

Latest News

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...
- Advertisement -

More Articles Like This

- Advertisement -
close
error: Content is protected !!