- Advertisement -
ಸಿಂದಗಿ: ತಾಲೂಕಿನ ಭಂಕಲಗಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಾಲಾ ಮೇಲುಸ್ತುವಾರಿ ಸಮಿತಿ (ಎಸ್.ಡಿ.ಎಮ್.ಸಿ)ಗೆ ಅಧ್ಯಕ್ಷರನ್ನಾಗಿ ನಾಗಪ್ಪ ಬಾಬು ತಳವಾರ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಶೇಕಮ್ಮ .ನಿಂ. ಕುಂಬಾರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಭಂಕಲಗಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಎಸ್. ಕುರನಳ್ಳಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ಪೋಷಕರ ಸಭೆಯಲ್ಲಿ ಶಾಲಾ ಸಿಬ್ಬಂದಿ ಸೇರಿದಂತೆ ಗ್ರಾಮದ ಮುಖಂಡರಾದ ದಯಾನಂದ ಮಳಗಿ, ಶಂಕರ ತಳವಾರ, ಕಾಸು ಪಡದಳ್ಳಿ, ಜಟ್ಟೆಪ್ಪ ಪಡದಳ್ಳಿ, ಚನ್ನಪ್ಪಗೌಡ ಪಾಟೀಲ, ರವಿ ಪಾಳೇದ, ಜಟ್ಟೆಪ್ಪ ಹರಿಜನ, ನಾಗಪ್ಪ ಬಂಡವಡ್ಡರ, ದತ್ತಪ್ಪ ಸುಂಗಠಾಣ, ಶಿವಶಂಕರ ಸುಂಗಠಾಣ, ರಾಜು ಸುಂಗಠಾಣ, ಪರಶುರಾಮ ಉಪ್ಪಾರ, ರುದ್ರಯ್ಯ ಹಿರೇಮಠ, ಶಿವಾನಂದ ಜಿವಣಗಿ, ಭಾಗಪ್ಪ ಕನ್ನೊಳ್ಳಿ ಸೇರಿದಂತೆ ಇನ್ನೂ ಅನೇಕ ಉಪಸ್ಥಿತರಿದ್ದರು.