ಬೆಳಗಾವಿ: ನಗರದ ಪೃಥ್ವಿ ಪೌಂಡೇಶನ್ ವತಿಯಿಂದ ಕವಿ ನಾಗೇಶ್ ಜೆ. ನಾಯಕ ಅವರ ಗಜಲ್ ಸಂಕಲನ ‘ಆತ್ಮ ಧ್ಯಾನದ ಬುತ್ತಿ’ ಬಿಡುಗಡೆ ಹಾಗೂ ಅನುಪಮ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ದಿ. 23 ರಂದು ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೃಥ್ವಿ ಫೌಂಡೇಶನ್ ಅಧ್ಯಕ್ಷೆ ಡಾ. ಹೇಮಾವತಿ ಸೊನೊಳ್ಳಿ ವಹಿಸಿಕೊಳ್ಳಲಿದ್ದು, ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಡಾ. ಪಿ.ಜೆ. ಕೆಂಪಣ್ಣವರ ಕೃತಿ ಬಿಡುಗಡೆ ಮಾಡಿ ಮಾತನಾಡಲಿದ್ದಾರೆ. ಕೃತಿ ಪರಿಚಯವನ್ನು ಮಹಾಂತೇಶ ನಗರ ರಹವಾಸಿ ಸಂಘದ ಬಿ.ಎಡ್. ಕಾಲೇಜಿನ ಪ್ರಾಂಶುಪಾಲರಾದ ಡಾ. ನಿರ್ಮಲಾ ಬಟ್ಟಲ ಮಾಡಲಿದ್ದು, ಇದೇ ಸಂದರ್ಭದಲ್ಲಿ ಶಾಂತಾ ಮಸೂತಿ, ಸುಧಾ ಪಾಟೀಲ, ಶೈಲಜಾ ಕುಲಕರ್ಣಿ ಅವರಿಗೆ ಅನುಪಮ ಸೇವಾ ರತ್ನ ಪ್ರಶಸ್ತಿ ಪ್ರದಾನ ನಡೆಯಲಿದೆ. ಆಶಾ ಯಮಕನಮರಡಿ ಕಾರ್ಯಕ್ರಮ ನಿರೂಪಿಸಲಿದ್ದಾರೆ. ಹಾಗೂ ಜನಪದ ಗೀತೆಗಳ ಗಾಯನ ಕೂಡ ನಡೆಯಲಿದೆ ಎಂದು ಪೃಥ್ವಿ ಫೌಂಡೇಶನ್ ಉಪಾಧ್ಯಕ್ಷೆ ಮಹಾದೇವಿ ಹಿರೇಮಠ ತಿಳಿಸಿದ್ದಾರೆ.