spot_img
spot_img

ಪುಟ್ಟರಾಜ ಕೋಡಿಹಳ್ಳಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ

Must Read

spot_img
- Advertisement -

ಹಾವೇರಿ: ಹಾನಗಲ್ ತಾಲೂಕಿನ ತಿಳವಳ್ಳಿಯ ಪ್ರಗತಿಪರ ರೈತ, ಹಿರಿಯ ಮುಖಂಡರೂ ಆದ ಗಣೇಶಪ್ಪ ಕೋಡಿಹಳ್ಳಿ ಅವರ ಮಗ ಕಲಾವಿದರ ಕಣ್ಮಣಿ ಪುಟ್ಟರಾಜ ಕೋಡಿಹಳ್ಳಿ ಅವರಿಗೆ ಇತ್ತೀಚೆಗೆ ಮೈಸೂರಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮೈಸೂರು ಕನ್ನಡ ಸಾಹಿತ್ಯ ಪರಿಷತ್ತು, ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆ ಹಾಗೂ ಕುಳಿ ಕಾರ್ಮಿಕರ ಸಂಘಟಿತ ಶೋಷಿತರ ಕನ್ನಡ ಪರ ಸಘಟನೆಗಳು ಸಂಯುಕ್ತಾಶ್ರಯದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ಅವಧೂತ ದತ್ತಪೀಠ ಮೈಸೂರಿನಲ್ಲಿ ಇತ್ತೀಚೆಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲಾಯಿತು.

ಶ್ರೀ ಶ್ರೀದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಪರಮಹಂಸ ಪರಿವ್ರಾಜಕಾಚಾರ್ಯ, ಉತ್ತರ ಪೀಠಾಧಿಪತಿ ಅವಧೂತ ದತ್ತಪೀಠ ಮೈಸೂರು ಇವರ ದಿವ್ಯ ಸಾನ್ನಿಧ್ಯದಲ್ಲಿ ಯದುವೀರ ಶ್ರೀಕಂಠದತ್ತ ಒಡೆಯರ್ ಮಹಾರಾಜರು ಕಾರ್ಯಕ್ರಮ ಉದ್ಘಾಟನೆ ಮಾಡಿದರು.

- Advertisement -

ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಯನ್ನು ಪ್ರವೀಣ್ ಕುಮಾರ್ ಆರ್ ಕರಾಡ ಶಿವಮೊಗ್ಗ,  ಪುಟ್ಟರಾಜ ಜಿ ಕೋಡಿಹಳ್ಳಿ ತಿಳವಳ್ಳಿ, ಲಿಂಗರಾಜ ಹಳ್ಳದ ಗೋಂದಿ ಹಾನಗಲ್ಲ, ಡಾ, ಜೆ ಎನ್ ಕರಿಬಸಪ್ಪನವರು ದಾವಣಗೆರೆ , ತಿಳವಳ್ಳಿಯ ಶ್ರೀಮತಿ ಅಪರ್ಣಾ ಸಂದೀಪ್ ವಝೆ ಇವರಿಗೆ ರಾಜ್ಯ ವಿಭೂಷಣ ಪ್ರಶಸ್ತಿ ನೀಡಲಾಯಿತು.

ಕಲಾವಿದರ ಕಣ್ಮಣಿ, ಬಣ್ಣದ ಲೋಕದ ಕನಸುಗಾರ, ರಂಗಭೂಮಿ ಕಲಾವಿದ, ಕಲಾವಿದರ ಪ್ರೋತ್ಸಾಹಕ, ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಕ ಹಾನಗಲ್ಲ ತಾಲೂಕಿನ ತಿಳವಳ್ಳಿ ಗ್ರಾಮದ ಪುಟ್ಟರಾಜ ಅವರು ಕೋಡಿಹಳ್ಳಿ ಪ್ರತಿಷ್ಠಾನದ ಮೂಲಕ ಅನೇಕ ಸಾಹಿತಿ , ರಂಗಭೂಮಿ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಿದ್ದಾರೆ.

ಸಾಹಿತಿ ಮಿತ್ರರಾದ ಸಂತೋಷ್ ಬಿದರಗಡ್ಡೆ, ಎನ್ ಎಸ್ ಮುಶಪ್ಪನವರ ಸಾಂಗತ್ಯದಲ್ಲಿ ಉತ್ತರ ಕರ್ನಾಟಕ ಅಲ್ಲದೆ ನಾಡಿನಾದ್ಯಂತ ವಿಭಿನ್ನ ವಿಶೇಷ ಕಾರ್ಯಕ್ರಮಗಳನ್ನು ಮಾಡಿ ಯುವ ಕವಿ, ಕಲಾವಿದರನ್ನು ಗುರುತಿಸಿದ್ದಾರೆ. ಕರೋನ ಸಂದರ್ಭದಲ್ಲಿ ದಾನಿಗಳಿಂದ ಆಹಾರ ಸಾಮಗ್ರಿ, ವಿವಿಧ ಸಹಾಯ ಸಹಕಾರ ಪಡೆದು ಅರ್ಹ ಫಲಾನುಭವಿಗಳಿಗೆ ನೀಡಿದ್ದಾರೆ. ನೂರಾರು ಕಲಾವಿದರು, ಸಾಹಿತ್ಯ ಸಂಗೀತ ಕಲೆ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡುವ ಮೂಲಕ ಪ್ರೋತ್ಸಾಹ ಕೊಡುತ್ತಾ ಬಂದಿರುವ ಪುಟ್ಟರಾಜ ಕೋಡಿಹಳ್ಳಿ ಅವರಿಗೆ ಮೈಸೂರಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ನೀಡಿ ಗೌರವಿಸಿರುವದು ಸಾರ್ಥಕವಾಗಿದೆ. ಹಾನಗಲ್ಲ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು, ಸಾಹಿತಿಗಳೂ ಆದ ಸಂತೋಷ್ ಬಿದರಗಡ್ಡೆ, ಹಿರಿಯ ಸಾಹಿತಿಗಳಾದ ಎನ್ ಎಸ್ ಮುಶಪ್ಪನವರ, ಕಲ್ವೇಕಲ್ಲಾಪುರ ಹಿರಿಯ ಕಲಾವಿದರಾದ ಮಧುಕುಮಾರ್ ಹರಿಜನ, ಸಂಗೀತ ಕಲಾವಿದ ಆನವಟ್ಟಿ ಪ್ರಭಾಕರ್, ರಾಜೇಂದ್ರ ಟಿ ಎಲ್, ಮಾರುತಿ ಅಸುಂಡಿ, ಸೇರಿದಂತೆ ತಿಳವಳ್ಳಿ ಗ್ರಾಮದ ಕೋಡಿಹಳ್ಳಿ ಮನೆಯನ, ಹಾಗೂ ಗ್ರಾಮದ ಗುರು ಹಿರಿಯರೂ ಅಭಿನಂದಿಸಿದ್ದಾರೆ.

- Advertisement -
- Advertisement -

Latest News

ಶ್ರೀನಿವಾಸ ಶಾಲೆಯ ಆಡಳಿತ ಮಂಡಳಿ ಬದಲಾಗುವುದಿಲ್ಲ – ಅಧ್ಯಕ್ಷ ರಂಗಣ್ಣ ಸೋನವಾಲಕರ

ಮೂಡಲಗಿ - ಶ್ರೀನಿವಾಸ ಶಾಲೆಯನ್ನು ಬೇರೆಯವರಿಗೆ ಮಾರುತ್ತಿದ್ದಾರೆ, ಆಡಳಿತ ಮಂಡಳಿ ಬದಲಾಗುತ್ತದೆ ಎಂಬ ವದಂತಿ ಹರಡಿದ್ದು ಅದು ಸಂಪೂರ್ಣ ಸುಳ್ಳು ಎಂದು ಸ್ಥಳೀಯ ಶ್ರೀನಿವಾಸ ಸ್ಕೂಲ್ಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group