spot_img
spot_img

ನಂಬಿಕೆ ಕವನಗಳು

Must Read

- Advertisement -

ನಂಬಿಕೆಯು ವೈಯಕ್ತಿಕ ಅಥವಾ ವೃತ್ತಿಪರವಾಗಿರಲಿ, ಪ್ರತಿಯೊಂದು ಸಂಬಂಧದ ಪ್ರಮುಖ ಅಂಶವಾಗಿದೆ. ಇದು ವ್ಯಕ್ತಿಗಳು ಪರಸ್ಪರ ಸಂಪರ್ಕಿಸಲು ಮತ್ತು ಅವಲಂಬಿಸಲು ಅನುವು ಮಾಡಿಕೊಡುವ ಅಡಿಪಾಯವಾಗಿದ್ದು, ಭದ್ರತೆ ಮತ್ತು ಸೌಕರ್ಯದ ಅರ್ಥವನ್ನು ಸೃಷ್ಟಿಸುತ್ತದೆ.

ಆದಾಗ್ಯೂ, ನಂಬಿಕೆಯು ದುರ್ಬಲವಾಗಿರುತ್ತದೆ ಮತ್ತು ಸುಲಭವಾಗಿ ಮುರಿಯಬಹುದು, ಇದು ಒಳಗೊಂಡಿರುವವರಿಗೆ ಸರಿಪಡಿಸಲಾಗದ ಹಾನಿಯನ್ನು ಉಂಟುಮಾಡುತ್ತದೆ. ಕಾವ್ಯದ ಶಕ್ತಿಯ ಮೂಲಕ, ನಾವು ನಂಬಿಕೆಯ ಹಲವು ಅಂಶಗಳನ್ನು ಅನ್ವೇಷಿಸಬಹುದು, ಸೌಂದರ್ಯ ಮತ್ತು ಶಕ್ತಿಯಿಂದ ಅದು ಕಳೆದುಹೋದಾಗ ನೋವು ಮತ್ತು ಪ್ರಕ್ಷುಬ್ಧತೆಗೆ ತರುತ್ತದೆ.

Also Read: 25+ ಸನ್ಮಾನ ಕವನಗಳು: Poems For Honouring Someone

- Advertisement -

ನಂಬಿಕೆ ಕವನಗಳು

ಮನುಜ ಮತದ ಹೂಬುಟ್ಟಿ

ಮನುಜ ಮತದ ಹೂಬುಟ್ಟಿ
ನಿಮ್ಮ ಮನಬಂಧ ಮುಕ್ತವಾಗಲಿ
ಅಹಂಕಾರದ ಕದ ತಟ್ಟಿ…
ನಿಮ್ಮ ಮನ ಮಿನುಗುತಿರಲಿ
ದುರಾಸೆಯ ಕುದುರೆ ಕಟ್ಟಿ…
ನಿಮ್ಮ ಮನ ಬೆಳಗುತಿರಲಿ
ಪ್ರೀತಿ ಅಂತ:ಕರಣ ಹುಟ್ಟಿ
ನಿಮ್ಮ ಮನ ನಗುತಿರಲಿ
ರಾಗದ್ವೇಷಗಳ ನೆತ್ತಿ ಕುಟ್ಟಿ…
ನಿಮ್ಮ ಮನ ಮೆರೆಯುತಿರಲಿ
ಅಮಾನವೀಯತೆ ದೈತ್ಯನ ಮೆಟ್ಟಿ
ನಿಮ್ಮ ಮನವಾಗದಿರಲಿ
ಸ್ವಾರ್ಥ ತುಂಬಿದ ಕಸದ ತೊಟ್ಟಿ…
ನಿಮ್ಮ ಮನ ಹಸನಾಗಲಿ
ಉದಯವಾಗಿ ಮನುಜಮತದ ಹೂಬುಟ್ಟಿ…


ಭಾರವಾದ ಬದುಕು

ಭಾರವಾಗುತ್ತಿದೆ ನಮ್ಮ ಸುಂದರವಾದ ಬದುಕು
ಹತ್ತಿರವಾಗುತ್ತಿದೆ ದು:ಖ ದುಮ್ಮಾನಗಳ ಸರಕು…
ಬದುಕು ಹರಿದರೂ ಮರೆಯಾಗುತ್ತಿಲ್ಲ ಥಳಕು
ಮೂಗು ತೂರಿಸುತ್ತಿದೆ ಸಂಕಷ್ಟದ ಮಿನುಕು…
ಏನಾದರೂ ನೀ ಕಾಣು ಧೈರ್ಯದ ಬೆಳಕು
ಬಿಟ್ಟು ಬಿಡು ನಿನ್ನ ಆಡಂಬರದ ಹುಳುಕು…
ಕೆಟ್ಟ ಕೆಲಸಕ್ಕೆ ನೀ ಕೊಡ್ಬೇಡ ಕುಮ್ಮಕ್ಕು
ಸ್ವಲ್ಪ ಕಮ್ಮಿ ಮಾಡ್ಕೋ ನಿನ್ನ ಆ ಧೀಮಾಕು…
ನೀ ತೊಳೆದುಕೋ ನಿನ್ನ ಮನದ ಕೊಳಕು
ಸೋಲಿನಲ್ಲೂ ಗೆಲುವಿನ ದಾರಿಯ ಹುಡುಕು…
ಯಶಸ್ಸಿನ ಕಲ್ಲಾಸಿಗೆಗೆ ನಿನ್ನ ಮನವ ನೂಕು
ದುರಾಸೆಗೆ ಹೇಳು “ಬೇಡಪ್ಪ ಸಾಕು”…
ಭವಿಷ್ಯದ ಬಾವಿಗೆ ನೀ ಯೋಚಿಸಿ ಇಣುಕು
ಆಗಲೇ ನೋಡು ನಿನ್ನದು ನೆಮ್ಮದಿಯ ಬದುಕು…

Also Read: ತಾಯಿಯ ಬಗ್ಗೆ ಕವನಗಳು in Kannada

- Advertisement -

ಬಾಳು ಬರೀ ಗೋಳಲ್ಲ

ಬಡತನವಿದ್ದರೂ ಕುಗ್ಗದಿರು
ಸಿರಿತನವಿದ್ದರೂ ಹಿಗ್ಗದಿರು
ಏನಾದರೂ ಬದುಕುವ ಛಲವನ್ನು ಬಿಡದಿರು.
ಬಡತನವೆಂದು ಶಾಪವಲ್ಲ
ಸಿರಿತನವೆಂದು ವರವಲ್ಲ
ಜೀವನದಲ್ಲಿ ಯಾವುದು ಶಾಶ್ವತವಲ್ಲ…
ಸೋಲಿಗೆ ಹೆದರಿ ಸಾಯದಿರು
ಗೆಲುವಿಗೆ ತುಂಬಾ ಖುಷಿ ಪಡದಿರು
ಏನಾದರೂ ಹತಾಶಭಾವ ತಳೆಯದಿರು
ಸೋಲೆಂದು ಶಿಕ್ಷೆಯಲ್ಲ
ಗೆಲುವೆಂದು ರಕ್ಷೆಯಲ್ಲ
ಹೋರಾಟದ ಬದುಕಲ್ಲಿ ಯಾವುದು ನಿಶ್ಚಯವಲ್ಲ…
ಸಂಕಷ್ಟ ಬಂದಾಗ ಅಳದಿರು
ಸಂತಸ ಬಂದಾಗ ಬಹಳ ನಗದಿರು
ಏನಾದರೂ ಬದುಕಿನ ಮೇಲೆ ಜಿಗುಪ್ಸೆ ಪಡದಿರು.
ಸಂಕಷ್ಟವೆಂದು ಸವಾಲಲ್ಲ
ಸಂತಸವೆಂದು ಅಚಲವಲ್ಲ
ನಮ್ಮಯ ಈ ಬಾಳು ಬರೀ ಗೋಳಲ್ಲ


ಸಾಧನೆಯ ಗಾಳಿಪಟ

ವಿಶ್ವಭೂಪಟದಲ್ಲಿ ನಿನ್ನ ಹೆಸರು ಕಾಣಲಿ
ಅದನ್ನು ಸಾಧಿಸುವ ಹಟ ನಿನ್ನದಾಗಲಿ…
ನಿಶ್ಚಲ ಹೃದಯವೇ ನಿನಗೆ ಬಲವಾಗಲಿ
ನಿಷ್ಕಪಟ ಪರಿಶ್ರಮವೇ ನಿನ್ನ ದೈವವಾಗಲಿ…
ನಿನ್ನ ಮೇಲೆ ನಿನಗೆ ನಂಬಿಕೆ ಇರಲಿ
ಆ ನಂಬಿಕೆ ದುಷ್ಟ ಅಹಂಕಾರವಾಗದಿರಲಿ…
ನೀ ಕಂಡ ಸೋಲುಗಳೇ ನಿನಗೆ ಪಾಠವಾಗಲಿ
ನಿನ್ನ ನಾಳೆಯ ಗೆಲುವಿಗೆ ಸ್ಪೂರ್ತಿ ತುಂಬಲಿ…
ನಿನ್ನ ಕೀರ್ತಿ ಕೇಳಿ ನಿನ್ನ ತುಟಿಗಳು ನಿನ್ನೆದೆಗೆ
ನಾಟುವಂತೆ ನಗು ಬೀರಲಿ…
ಅನ್ಯರಿಗೆ ನೆರವಾಗುವ ಗುಣ ನಿನ್ನಲ್ಲಿರಲಿ
ಇದೇ ನಿನ್ನ ಸಾಧನೆಯ ಗಾಳಿಪಟವಾಗಲಿ


Also Read: Kuvempu Poems in Kannada- ಕುವೆಂಪು ಕನ್ನಡ ಕವನಗಳು

Conclusion:

ನಂಬಿಕೆಯು ನಮ್ಮ ಜೀವನದ ಸಂಕೀರ್ಣ ಮತ್ತು ಅಗತ್ಯ ಅಂಶವಾಗಿದೆ. ಇದು ನಾವು ನಿರಂತರವಾಗಿ ನಿರ್ವಹಿಸಲು ಕೆಲಸ ಮಾಡಬೇಕು ಮತ್ತು ಕಳೆದುಹೋದಾಗ, ಅದನ್ನು ಮರಳಿ ಪಡೆಯಲು ಸವಾಲಾಗಬಹುದು. ಕಾವ್ಯದ ಶಕ್ತಿಯ ಮೂಲಕ, ನಾವು ವಿಶ್ವಾಸದ ಸೂಕ್ಷ್ಮ ವ್ಯತ್ಯಾಸಗಳನ್ನು ಪರಿಶೀಲಿಸಬಹುದು, ಸಂತೋಷ ಮತ್ತು ಪ್ರೀತಿಯಿಂದ ಅದು ಉಂಟುಮಾಡುವ ಹೃದಯ ನೋವು ಮತ್ತು ದ್ರೋಹಕ್ಕೆ. ಅಂತಿಮವಾಗಿ, ನಂಬಿಕೆಯು ಇತರರೊಂದಿಗಿನ ನಮ್ಮ ಸಂಬಂಧಗಳು ಅಮೂಲ್ಯವಾದುದು ಮತ್ತು ನಾವು ಅವರನ್ನು ಪಾಲಿಸಬೇಕು, ಯಾವಾಗಲೂ ಪ್ರಾಮಾಣಿಕ, ನಿಷ್ಠಾವಂತ ಮತ್ತು ವಿಶ್ವಾಸಾರ್ಹರಾಗಿರಲು ಪ್ರಯತ್ನಿಸಬೇಕು ಎಂಬುದನ್ನು ನೆನಪಿಸುತ್ತದೆ.

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group