ಮೂಡಲಗಿ: ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಾಮದೇವ ಶಿಂಪಿ, ಭಾವಸಾರ ಕ್ಷತ್ರಿಯ ಸಮಾಜದ ಸಾಧಕರಿಗೆ ಪ್ರೋತ್ಸಾಹಿಸಿ ವಿಠ್ಠಲ ಶ್ರೀ ಪ್ರಶಸ್ತಿ ನೀಡಿ ಗೌರವಿಸಲು ಅರ್ಹ ಸಾಧಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘ ಪ್ರಧಾನ ಕಾರ್ಯದರ್ಶಿ ಮಂಜುನಾಥ ರೇಳೆಕರ ತಿಳಿಸಿದ್ದಾರೆ.
ನಾಮದೇವ ಶಿಂಪಿ ಮತ್ತು ಭಾವಸಾರ ಕ್ಷತ್ರಿಯ ಸಮಾಜದವರು ಟೇಲರಿಂಗ್, ಕ್ರೀಡೆ, ವಿಜ್ಞಾನ, ನಾಟಕ, ಸಿನಿಮಾ, ಸಂಗೀತ, ಗಾಯನ, ಮಾಧ್ಯಮ, ಕೃಷಿ, ಫ್ಯಾಷನ್ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವವರು ಸಾಧನೆ ಮಾಡಿದ ದಾಖಲೆಗಳ ಝರಾಕ್ಸ್ , ಪಾಸ ಪೋರ್ಟ್ ಅಳತೆಯ 2 ಪೋಟೋ ಜೊತೆಯಲ್ಲಿ ದಿ.30/11/2022 ರೊಳಗೆ ಮಂಜುನಾಥ. ಜೆ. ರೇಳೆಕರ ಮನೆ. ನಂ :- 573 ಗಾಂಧಿ ಚೌಕ ಅಂಚೆ :- ಮೂಡಲಗಿ – 591312 ತಾ :- ಮೂಡಲಗಿ, ಜಿಲ್ಲೆ :- ಬೆಳಗಾವಿ ಇವರಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ 8867372134,7022095868.