spot_img
spot_img

“ನಮ್ಮ ಕ್ಲಿನಿಕ್” ಉದ್ಘಾಟಿಸಿದ ಸಿಂದಗಿ ಪುರಸಭೆ ಅಧ್ಯಕ್ಷ ಡಾ. ಶಾಂತವೀರ

Must Read

- Advertisement -

ಜನಸಾಮಾನ್ಯರ ಆರೋಗ್ಯ ಸಂಜಿವಿನಿ “ನಮ್ಮ ಕ್ಲಿನಿಕ್”

ಸಿಂದಗಿ: ಸರಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವ ದಿನಮಾನಗಳಲ್ಲಿ ಕರ್ನಾಟಕ ಸರ್ಕಾರ ನಗರ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಸಲುವಾಗಿ “ನಮ್ಮ ಕ್ಲಿನಿಕ್” ಅನ್ನು ಸ್ಥಾಪಿಸಿದ್ದಾರೆ ಆದ್ದರಿಂದ ಬಡ, ಹಿಂದುಳಿದ ವೃದ್ದರು, ಗರ್ಭಿಣಿಯರು, ಬಾಣಂತಿಯರು ಈ ಕ್ಲಿನಿಕ್ ನಲ್ಲಿ ದೊರೆಯುವ ಸೇವೆಗಳನ್ನು ಪಡೆದುಕೊಳ್ಳಬೇಕು ಎಂದು ಪುರಸಭೆಯ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಹೇಳಿದರು.

ಪಟ್ಟಣದ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಬಜಂತ್ರಿ ಬಡಾವಣೆಯಲ್ಲಿ “ನಮ್ಮ ಕ್ಲಿನಿಕ್” ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

- Advertisement -

ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ. ಸಂಪತ್ ಕುಮಾರ ಗುಣಾರಿ ಮಾತನಾಡಿ, “ನಮ್ಮ ಕ್ಲಿನಿಕ್” ನಲ್ಲಿ ಒಟ್ಟು 12 ಬಗೆಯ ಸೇವೆಗಳು ದೊರೆಯುತ್ತವೆ. ಗರ್ಭಿಣಿ, ಜನನ ಸಮಯದ ಆರೈಕೆ, ನವಜಾತ ಮತ್ತು ಶಿಶುವಿನ ಸಮಗ್ರ ಆರೈಕೆ, ಬಾಲ್ಯ ಮತ್ತು ಹದಿ ಹರೆಯದವರ ಸಮಗ್ರ ಆರೋಗ್ಯ ಸೇವೆಗಳು, ಸಾರ್ವತ್ರಿಕ ಲಸಿಕಾಕರಣ ಸೇವೆ, ಕುಟುಂಬ ಕಲ್ಯಾಣ ಗರ್ಭ ನಿರೋಧಕ ಸೇವೆ, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಅಸಾಂಕ್ರಾಮಿಕ ರೋಗಗಳ ಪರೀಕ್ಷೆ ಮತ್ತು ಚಿಕಿತ್ಸೆ, ಪ್ರಯೋಗಾಲಯ ಪರೀಕ್ಷೆ ಹಾಗೂ ಉಚಿತವಾಗಿ ಔಷಧಗಳು ದೊರೆಯುತ್ತವೆ. ಆದರಿಂದ  ಆರ್ಥಿಕವಾಗಿ ಹಿಂದುಳಿದ ವೃದ್ದರು, ಗರ್ಭಿಣಿ, ಬಾಣಂತಿಯರು ಹಾಗೂ ಮಧುಮೇಹ, ರಕ್ತದೊತ್ತಡದಿಂದ ಬಳಲತಕ್ಕಂತಹವರು ಈ “ನಮ್ಮ ಕ್ಲಿನಿಕ್” ನಲ್ಲಿ ದೊರೆಯುವ ಸೇವೆಗಳ ಸದುಪಯೋಗ ಪಡೆದುಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದರು.

ತಾಲೂಕಾ ಆರೋಗ್ಯ ಅಧಿಕಾರಿ ಡಾ. ಆರ್.ಎಸ್.ಇಂಗಳೆ ಮಾತನಾಡಿ, ನಮ್ಮ ಕ್ಲಿನಿಕ್ ನಲ್ಲಿ ಒಬ್ಬರು ಎಂ.ಬಿ.ಬಿ.ಎಸ್ ವೈದ್ಯರು, ಪ್ರಯೊಗಾಲಯ ತಂತ್ರಜ್ಞ ಅಧಿಕಾರಿಗಳು, ಶುಶ್ರೂಷಕ ಅಧಿಕಾರಿಗಳು ಹಾಗೂ ಒಬ್ಬರು ಡಿ ವರ್ಗದ ಸಿಬ್ಬಂದಿಯವರು ಇರುತ್ತಾರೆ. ಉಚಿತವಾಗಿ ಪ್ರಯೋಗಾಲಯ ಪರೀಕ್ಷೆ, ಉಚಿತ ಔಷದಿಗಳು ದೊರೆಯುತ್ತವೆ. ಆದ್ದರಿಂದ ಆರ್ಥಿಕವಾಗಿ ಹಿಂದುಳಿದ ವೃದ್ಧರು, ಗರ್ಭಿಣಿ, ಬಾಣಂತಿಯರು ಹಾಗೂ ಮಧುಮೇಹ, ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಈ ನಮ್ಮ ಕ್ಲಿನಿಕ್ ನಲ್ಲಿ ಸೇವೆಗಳು ದೊರೆಯುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ. ಶಕುಂತಲಾ ಹಳ್ಳಿ, ಡಾ. ದೀಪ್ತಿ ಪಾಟೀಲ್, ಡಾ. ಬಿ ಎಸ್.ಅರಳಿಚಂಡಿ, ಡಾ. ಸಂಜಯ ರಾಠೋಡ ಹಾಗೂ ಪ್ರಯೊಗಾಲಯ ತಂತ್ರಜ್ಞ ಅಧಿಕಾರಿಗಳಾದ ರಾಜು ನರಗೋದಿ, ಶುಶ್ರೂಷಕ ಅಧಿಕಾರಿಗಳಾದ ರಾಯಣ್ಣ ಸನ್ನಳ್ಳಿ, ಸಂತೋಷ ಕಾಳಶಟ್ಟಿ, ಪ್ರಭು ಜಂಗಿನಮಠ, ಮಹಾಲಿಂಗ ಫಕೀರಪೂರ, ಸಿದ್ದು ಚಾಂದಕವಟೆ, ಸುರೇಶ ಬಬಲೇಶ್ವರ, ವೀರೇಂದ್ರ ಪವಾಡೆ, ಸಾಯಬಣ್ಣಾ ಗಣಜಲಗಿ, ಶಶಿಕುಮಾರ ಹಾಗೂ ಆಶಾ ಕಾರ್ಯಕರ್ತೆಯರು ತಾಯಂದಿರು ಉಪಸ್ಥಿತರಿದ್ದರು.

- Advertisement -

ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಕುಲಕರ್ಣಿ ನಿರೂಪಿಸಿ ವಂದಿಸಿದರು.

- Advertisement -
- Advertisement -

Latest News

ಬೆಳಗಾವಿ – ಮನಗೂರು ವಿಶೇಷ ರೈಲು ಅ.16 ರಿಂದ

ಬೆಳಗಾವಿ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ಬೆಳಗಾವಿ- ಮನಗೂರು ವಿಶೇಷ ಎಕ್ಸ್ಪ್ರೆಸ್ ರೈಲಿನ ಸಂಚಾರವು ಅ-16 ರಿಂದ ಪ್ರಾರಂಭವಾಗಲಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group