ಭೂಮಿಯ ಫಲವತ್ತತೆಗಾಗಿ ನಂದಿಕೃಷಿಯ ಪುನುರುತ್ಥಾನ ಇಂದಿನ ಅವಶ್ಯಕತೆಯಾಗಿದ್ದು, ಮುಂದಿನ ಪೀಳಿಗೆಗೆ ಬೇಕಾಗುವ ರಾಸಾಯನಿಕ ಮುಕ್ತ ಆಹಾರ ಧಾನ್ಯ ಬೆಳೆಯಲು ನಂದಿ ಆಧಾರಿತ ಕೃಷಿಯಿಂದ್ರ ಮಾತ್ರ ಸಾಧ್ಯವೆಂಬ ವಾಸ್ತವದ ಹಿನ್ನೆಲೆಯಲ್ಲಿ ನಂದಿಕೃಷಿ ಪುನರುತ್ಥಾನಕ್ಕಾಗಿ ಗದಗ ಜಿಲ್ಲೆಯ ಡೋಣಿ ಸಮೀಪದ ಕಪ್ಪತಗುಡ್ಡದ ಮಡಿಲಲ್ಲಿರುವ ಶ್ರೀ ನಂದಿವೇರಿ ಸಂಸ್ಥಾನ ಮಠದಿಂದ ಆಯೋಜಿಸಲಾಗುತ್ತಿರುವ ನಿರಂತರ ಆಂದೋಲನವು ಗ್ರಾಮ ಗ್ರಾಮಕ್ಕೆ ತಲುಪಿ ರೈತರನ್ನು ಜಾಗೃತಗೊಳಿಸಿ ಪ್ರತಿಯೊಬ್ಬ ರೈತನ ನಂದಿ ಕೊಟ್ಟಿಗೆಯಿಂದ ಉದ್ಭವಗೊಂಡು ಮಹಾ ಆಂದೋನದಲ್ಲಿ ರೂಪಗೊಳಿಸಲು ಇದು ಶುಭಾರಂಭದ ಘಳಿಗೆಯಾಗಿದೆ.
ಕೆಚ್ಚೆದೆಯ ಕಿತ್ತೂರು ಚನ್ನಮ್ಮನ ಕೋಟೆಯಿಂದ ಕಪ್ಪತ ಗುಡ್ಡದ ಮಡಿಲಲ್ಲಿರುವ ಶ್ರೀ ನಂದಿವೇರಿ ಮಠದ ವರೆಗೆ ಚಲಿಸಿ ದಿನಾಂಕ: 28/2025 ರಂದು ಮಂಗಲಗೊಂಡಿತು.
ಅತ್ಯಾಕರ್ಷಕವಾಗಿರುವ ಜೋಡು ನಂದಿಗಳನ್ನು ಸಿದ್ಧಪಡಿಸಿದ್ದು ಮಹಾರಾಷ್ಟ್ರದ ಪುಣೆ ನಗರದಲ್ಲಿ. ಅವುಗಳ ಭಕ್ತಿಸೇವೆ ಮಾಡಿದ್ದು ಗೋಕಾಕ ತಾಲೂಕಿನ ಕೊಣ್ಣುರ ಗ್ರಾಮದಲ್ಲಿ ಗಣೇಶ ಮೂರ್ತಿ ತಯಾರಿಕಾ ಉದ್ದಮೆದಾರ ಸುರೇಶ ಕುಂಬಾರರವರು. ನಂದಿಗಳ ಯಾತ್ರೆಗಾಗಿ ಅವಶ್ಯಕವಾಗಿದ್ದ ಮಂಟಪವನ್ನು ಸಿದ್ಧಪಡಿಸಿದ್ದು ಹಾಗೂ ಸರ್ವಾಲಂಕಾರವನ್ನು ಸಹ ಅದೇ ಕೊಣ್ಣೂರಿನ ಶ್ರೀ ಜಗದೀಶ ತೇಲಿಯವರು.
26/1/2025 ರಂದು ಕೊಣ್ಣೂರಿನಿಂದ ಯಾತ್ರಾ ವಾಹನವನ್ನು ಕಿತ್ತೂರು ತಾಲೂಕಿನ ನಿಚ್ಚಣಿಕಿ ಗ್ರಾಮದವರೆಗೆ ಸುರಕ್ಷಿತವಾಗಿ ಜವಾಬ್ದಾರಿ ಯಿಂದ ತಲುಪಿಸಿರುವುದು ಶಂಕರ ಮಗದುಮ್ ರವರು.
ದಿನಾಂಕ 26/1/2025 ರಂದು ಜರುಗಿದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಭಾಗವಹಿಸಿದ ನೂರಾರು ಜನರು ಜ್ಯೋತಿಯನ್ನು ಸ್ವಾಗತಿಸಿ ಪೂಜೆ ಪುನಸ್ಕಾರ ಸಲ್ಲಿಸಿ ನಿಚ್ಚಣಿಕಿ ಗ್ರಾಮಸ್ಥರು ಕೃತಕೃತಾರ್ಥರಾದರು.
ನಂದಿಭೂಷಿತ ಕಪ್ಪತ ಜ್ಯೋತಿ ಯಾತ್ರೆಯ ಪ್ರಧಾನ ಸಂಚಾಲಕ ಭಾಲಚಂದ್ರ ಜಾಬಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಬೈಲಪ್ಪ ದಳವಾಯಿಯವರು ಗ್ರಾಮಸ್ಥರ ಪರವಾಗಿ ಮಾತನಾಡಿದರು.
ಸಾನಿಧ್ಯ ವಹಿಸಿದ್ಧ ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನ ಮಠದ ಪೂಜ್ಯ ಶ್ರೀ ಮ.ನಿ.ಪ್ರ.ಶಿವಕುಮಾರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ನಿಚ್ಚಣಿಕಿ ಗ್ರಾಮದ ಬೈಲಪ್ಪ ದಳವಾಯಿ, ಹೊಳೆಪ್ಪ ಕಲಾರಕೊಪ್ಪ, ಅಶೋಕ ಹಿತ್ತಲಮನಿ, ಬಿಷ್ಟಪ್ಪ ಶಿಂಧೆ, ರಾಜಶೇಖರ ದಳವಾಯಿ, ಸರಸ್ವತಿ ಪೂಜಾರ ಹಾಗು ನಿಚ್ಚಣಿಕಿ ಗ್ರಾಮದ ಗುರು ಹಿರಿಯರು ಭಾಗವಹಿಸಿದ್ದರು.
ಭಾಲಚಂದ್ರ ಜಾಬಶೆಟ್ಟಿ
ಪ್ರಧಾನ ಸಂಚಾಲಕರು
ನಂದಿಭೂಷಿತ ಕಪ್ಪತ ಜ್ಯೋತಿ ಯಾತ್ರೆ.