spot_img
spot_img

ಪ್ರಗತಿಪರ ಚಿಂತನೆಯ ಶಿಕ್ಷಕಿ ನಂದಿನಿ ಸನಬಾಳ

Must Read

ಸಪ್ಟೆಂಬರ್ ತಿಂಗಳಲ್ಲಿ ನನ್ನ ಸಂಪಾದಿತ ಕೃತಿ ಅಭಿಪ್ರೇರಣೆ ಬಿಡುಗಡೆ ಧಾರವಾಡ ದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಜರುಗಿತು. ಅದು ಶೈಕ್ಷಣಿಕ ಚಟುವಟಿಕೆಗಳನ್ನು ಒಳಗೊಂಡಿತ್ತು. ನಾಡಿನ ವಿವಿಧ ಭಾಗಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಹಲವಾರು ಶಿಕ್ಷಕ ಶಿಕ್ಷಕಿಯರು ತಮ್ಮ ತರಗತಿ ಕೊಠಡಿಯಲ್ಲಿ ನಿರ್ವಹಿಸುವ ಚಟುವಟಿಕೆಗಳನ್ನು ನನಗೆ ಒದಗಿಸಿದ್ದರು.ಕೃತಿ ಬಿಡುಗಡೆ ದಿನದಂದು ಅವರಿಗೆ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸುವ ಜೊತೆಗೆ ಆ ಕೃತಿಯನ್ನು ನೀಡಿದ್ದೆವು.

ಕಾರ್ಯಕ್ರಮ ಮುಗಿದ ಎರಡು ದಿನಗಳ ನಂತರ ಗುರು ಮಾತೆ ನಂದಿನಿ ಸನಬಾಳ ಕರೆ ಮಾಡಿ ಅವರು ನನಗೆ ಮೇಲ್ ಕಳಿಸಿದ್ದ ಚಟುವಟಿಕೆಗಳನ್ನು ಬಳಸಿಕೊಂಡಿಲ್ಲ ಅಂತ ಹೇಳಿದರು. ಹೌದಾ ಯಾವ ಚಟುವಟಿಕೆಗಳು ಅಂತ ಮತ್ತೆ ನನಗೆ ಕಳಿಸಿ ಅಂತ ಹೇಳಿ ದಾಗ ಅವರು ಕಳಿಸಿದರು. ಅದು ಪಿಡಿಎಫ್ ಪೈಲ್ ಆಗಿರುವುದರಿಂದ ನುಡಿಯಲ್ಲಿ ಕಳಿಸಿದ ಚಟುವಟಿಕೆಗಳನ್ನು ಮಾತ್ರ ಬಳಸಿಕೊಂಡಿರುವೆ. ಅದೇ ಕೃತಿಯನ್ನು ಇನ್ನೂ ಹಲವು ಶಿಕ್ಷಕ ಶಿಕ್ಷಕಿಯರ ಚಟುವಟಿಕೆಗಳನ್ನು ಬಳಸಿಕೊಂಡು ಮತ್ತೆ ಮುದ್ರಣ ಮಾಡುತ್ತಿರುವೆ ಆ ಸಂದರ್ಭದಲ್ಲಿ ಬಳಸಿಕೊಳ್ಳುವ ಕುರಿತು ತಿಳಿಸಿದೆ.

ಅಂದಿನಿಂದ ಅವರು ತಮ್ಮ ದೈನಂದಿನ ತರಗತಿ ನಿರ್ವಹಣೆ ಹಲವು ಚಟುವಟಿಕೆಗಳನ್ನು ನನಗೆ ವ್ಯಾಟ್ಸಪ್ ನಲ್ಲಿ ಕಳಿಸತೊಡಗಿದರು. ತುಂಬಾ ಖುಷಿ ಆಗುತ್ತಿತ್ತು. ಜೊತೆಗೆ ತಮ್ಮ ಸಾಮಾಜಿಕ ಸೇವೆ ಕುರಿತು ಅವರು ಮಾಹಿತಿ ಕಳಿಸುತ್ತಿದ್ದರು.

ನವೆಂಬರ್ ತಿಂಗಳಲ್ಲಿ ನಾನು ನನ್ನ ಸ್ನೇಹಿತರಾದ ಮಹಾದೇವ ಸತ್ತೀಗೇರಿ ಅವರ ಮಗ ಋತ್ವಿಕ್ ಅಭಿನಯದ ‘ಅಮ್ಮಾ ನಾನು ಶಾಲೆಗೆ ಹೋಗುವೆ’ ಕಿರುಚಿತ್ರ ಚಿತ್ರೀಕರಣಕ್ಕಾಗಿ ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಗ್ರಾಮ ಕ್ಕೆ ಹೋಗಿದ್ದೆ. ಅಲ್ಲಿ ಶಿಕ್ಷಕಿ ಯ ಪಾತ್ರದ ಚಿತ್ರೀಕರಣ ನಡೆದಿತ್ತು. ದೂರದ ಗುಲ್ಬರ್ಗ ಜಿಲ್ಲೆಯ ಶಿಕ್ಷಕಿ ಅಲ್ಲಿ ತಮ್ಮ ಪಾತ್ರ ನಿರ್ವಹಿಸುತ್ತಿದ್ದರು.

ಅವರ ಅಭಿನಯ ಗಮನಿಸಿದೆ. ನಂತರ ‘ಪ್ರಭಾತಫೇರಿ’ ದೃಶ್ಯ ನಾನು ಕೂಡ ನಿರ್ದೇಶಕ ರ ಕೋರಿಕೆ ಮೇರೆಗೆ ಪಾಲ್ಗೊಂಡು ಚಿತ್ರೀಕರಣ ಬಿಡುವಾದಾಗ ಗುರು ಮಾತೆ ಮಾತಿಗಿಳಿದರು ಅವರೇ ನಂದಿನಿ ಸನಬಾಳ. ಪೋನ್ ನಲ್ಲಿ ತಮ್ಮ ಚಟುವಟಿಕೆಗಳನ್ನು ಬಳಸಿಕೊಂಡಿಲ್ಲ ಅಂತ ಕರೆ ಮಾಡಿದ್ದ ಶಿಕ್ಷಕಿ. ಹೆಬ್ಬಳ್ಳಿಯ ಲೂಸಿ ಸಾಲ್ಡಾನಾ ಮಾನಸಪುತ್ರ ಎಂದು ಕರೆಯಲ್ಪಡುವ ಎಲ್. ಐ. ಲಕ್ಕಮ್ಮನವರ ಶಿಕ್ಷಕರೇ ಈ ಪರಿಚಯಕ್ಕೆ ಕಾರಣ ಹಾಗೂ ಅವರಲ್ಲಿ ಸೃಜನಶೀಲ ಚಟುವಟಿಕೆಗಳನ್ನು ಗಮನಿಸಿ ನನಗೆ ಅವರು ಮೇಲ್ ಮೂಲಕ ಚಟುವಟಿಕೆಗಳನ್ನು ಕಳಿಸಲು ಹೇಳಿದವರು ಅಂದರೆ ಅತಿಶಯೋಕ್ತಿ ಆಗದು.

ಅವರ ಸೇವೆಯನ್ನು ಗುರುತಿಸಿ ಇತ್ತೀಚೆಗೆ ಸಂಘಟನೆ ಯೊಂದು ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿತು ಆ ಸಂದರ್ಭದಲ್ಲಿ ನನಗೆ ವ್ಯಾಟ್ಸಪ್ ಮೂಲಕ ತಮ್ಮ ಸಂತೋಷ ದ ಕ್ಷಣವನ್ನು ಅಂದ ಹಾಗೆ ಇತ್ತೀಚೆಗೆ ಬಿಡುಗಡೆಯಾದ ನನ್ನ ಸಂಪಾದಿತ ಕೃತಿ ತಿಳಿಸಿದರು. ದಿನನಿತ್ಯ ಒಳ್ಳೆಯ ನಾಣ್ಣುಡಿ ಗಳನ್ನು ನನಗೆ ಕಲಿಸುತ್ತಾ ತಮ್ಮ ತರಗತಿ ನಿರ್ವಹಣೆ ಯ ಪ್ರತಿ ದಿನ ಮಕ್ಕಳ ಜೊತೆ ಚಟುವಟಿಕೆಗಳನ್ನು ಕಳಿಸುತ್ತಿದ್ದರು. ಈ ಅವರ ಹವ್ಯಾಸ ವೃತ್ತಿ ಆಚೆಗೆ ಸಮಾಜಸೇವೆ ಯಲ್ಲಿ ತೊಡಗಿರುವುದನ್ನು ಗಮನಿಸಿ ಅವರಿಗೆ ಅಭಿನಂದನೆ ಸಲ್ಲಿಸಿದೆ.

ಜೊತೆಗೆ ಅವರ ಪರಿಚಯ ಕೇಳಿದಾಗ ಅವರಲ್ಲಿ ಪ್ರಗತಿಪರ ಚಿಂತನೆಗಳನ್ನು ಕಂಡಾಗ ಇವರ ಕುರಿತು ಕಿರು ಬರಹ ರೂಪಿಸಬೇಕು ಎಂದುಕೊಂಡು ಈ ಬರಹ ರೂಪಿಸಿದೆ.

ಶಾಲೆಯಲ್ಲಿ ಮಕ್ಕಳಿಗೆ ನಿರಂತರ ಪಾಠ ಜೊತೆಗೆ ಸಹಪಠ್ಯ ಗಳ ಆಟ. ಅದರೊಂದಿಗೆ ಕಲಿಕಾ ಚಟುವಟಿಕೆಗಳ ಮೂಲಕ ಬೋಧನೆ ಮಾಡುತ್ತಾ ಬರುತ್ತಿರುವ ಇವರು, ಶೈಕ್ಷಣಿಕವಾಗಿ ಆದರ್ಶ ಸಂಘಟನೆಗಳ ಮೂಲಕ ಅಕ್ಷರದ ಕ್ರಾಂತಿಯನ್ನು ಮಾಡುತ್ತಿದ್ದಾರೆ ಎಂದರೆ ಅತಿಯಶೋಕ್ತಿ ಆಗಲಾರದು.

ಬಿಸಿಲು ನಾಡಿನ ಭರವಸೆಯ ಶಿಕ್ಷಕಿ ನಂದಿನಿ ಸನಬಾಳ್ ರವರು. ಕಳೆದ 19 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ತನ್ನನ್ನು ತಾನೇ ತೊಡಗಿಸಿಕೊಂಡು ಸಾಹಿತ್ಯ ಸಂಸ್ಕೃತಿ ಹಾಗೂ ಸಮಾಜ ಸೇವೆ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ತಮ್ಮ ಅನುಪಮ ಸೇವೆ ಅಭಿನಂದನಾರ್ಹ.

ಬಾಲ್ಯ ಹಾಗೂ ಶಿಕ್ಷಣ:

ಶ್ರೀಮತಿ ನಂದಿನಿ ಸನಬಾಳ್ ಇವರು ಶಿಕ್ಷಕ ದಂಪತಿಗಳ ಪುತ್ರಿಯಾಗಿದ್ದಾರೆ, ತಂದೆ ಪುಟ್ಟರಾಜ್ ಶಂಬುಶಂಕರ ಹಾಗೂ ತಾಯಿ ಶ್ರೀಮತಿ ರಾಜೇಶ್ವರಿ. ಪಿ. ಇವರ ನೆಚ್ಚಿನ ಕುವರಿಯಾಗಿ 2.03.1981ರಂದು ಬೀದರ್ ಜಿಲ್ಲೆಯ ಹುಮನಾಬಾದ ಎಂಬ ಗ್ರಾಮದಲ್ಲಿ ಜನಿಸಿದರು.

ತಮ್ಮ ಮಗಳು ಭವಿಷ್ಯದಲ್ಲಿ ವೈದ್ಯೆ ಆಗಬೇಕು ಎಂದು ಕನಸು ಕಂಡ ನಂದಿನಿ ಅವರ ತಂದೆಯ ಹೆಸರು ಪುಟ್ಟರಾಜ ಶಂಭಶಂಕರ್ ಅವರು ನಾಡಿನ ಸಮಗ್ರ ಅಭಿವೃದ್ಧಿಗಾಗಿ ಮತ್ತು ಸಾಮಾಜಿಕ ಸೇವೆಯಲ್ಲಿ ತಮ್ಮ ಮಗಳನ್ನು ಸಂಪೂರ್ಣವಾಗಿ ತೊಡಗಿಸಬೇಕೆಂಬ ಕನಸನ್ನು ಕಂಡಿದ್ದರು.

ಶ್ರೀಮತಿ ನಂದಿನಿ ಸನಬಾಳ್ ಅವರು ತಮ್ಮ ಪ್ರಾಥಮಿಕ ಶಿಕ್ಷಣ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕು ರಾಜೇಶ್ವರ್ ಗ್ರಾಮದ ಪಾರ್ವತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿದರು. ಚಿಕ್ಕಂದಿನಲ್ಲಿ ಅಕ್ಷರದ ರುಚಿ ಕಂಡ ಇವರು ಪ್ರತಿ ಹಂತದಲ್ಲಿ ಒಬ್ಬ ಕ್ರಿಯಾತ್ಮಕ ವಿದ್ಯಾರ್ಥಿಯಾಗಿ ಜೊತೆಗೆ ಸರ್ವ ಶಿಕ್ಷಕರ ಪ್ರೀತಿಯ ವಿದ್ಯಾರ್ಥಿಯಾಗಿ ಹೊರಹೊಮ್ಮಿದರು.

ಪ್ರೌಢ ಶಿಕ್ಷಣವನ್ನು ಸತ್ಯಾಶ್ರಯ ಸಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ರ ರಾಜೇಶ್ವರ್ ಗ್ರಾಮದಲ್ಲಿ ಪೂರೈಸಿದರು. ಈ ಹಂತದಲ್ಲಿ ವೈಜ್ಞಾನಿಕ ಮನೋಭಾವ ಹೊಂದಿದ ಇವರು ಅಜ್ಞಾನಕ್ಕೆ ವಿಜ್ಞಾನವೇ ಮತ್ತು ಎಂದು ಅರ್ಥೈಸಿಕೊಂಡಿದ್ದರು. ಶ್ರೀಮತಿ ನಂದಿನಿ ಸನಬಾಳ್ ಅವರು ಒಬ್ಬ ಪ್ರಾಥಮಿಕ ಶಿಕ್ಷಕಿ ಆಗಿದ್ದರೂ ಒಬ್ಬ ಅಪ್ಪಟ ಪ್ರಗತಿಪರ ಚಿಂತಕರು ಸ್ವಾಮಿ ವಿವೇಕಾನಂದ ಮದರ್ ತೆರೇಸಾ, ಬಸವಣ್ಣ, ಡಾಕ್ಟರ್ ಬಿ ಆರ್ ಅಂಬೇಡ್ಕರ್, ಅಕ್ಷರದ ಅವ್ವ ಮಾತೆ ಸಾವಿತ್ರಿ ಫುಲೆ ಸೇರಿದಂತೆ ಅನೇಕ ರಾಷ್ಟ್ರ ನಾಯಕರನ್ನು ಮಾದರಿಯಾಗಿ ಇಟ್ಟುಕೊಂಡಿದ್ದಾರೆ.ಅವರ ನುಡಿ ಮುತ್ತುಗಳನ್ನು ಪ್ರತಿ ನಿತ್ಯ ಹಲವಾರು ವಿವಿಧ ರಂಗಗಳಲ್ಲಿ ತೊಡಗಿರುವ ತಮ್ಮ ಪರಿಚಯದ ಮನಸುಗಳಿಗೆ ಕಳಿಸುವುದು ಅವರ ಹವ್ಯಾಸಗಳಲ್ಲೊಂದು.

ಪದವಿಪೂರ್ವ ಶಿಕ್ಷಣವನ್ನು ಬೀದರ ಜಿಲ್ಲೆಯ ಹುಮನಾಬಾದನ ಶ್ರೀ ವೀರಭದ್ರೇಶ್ವರ ಪದವಿಪೂರ್ವ ಶಿಕ್ಷಣ ಸಂಸ್ಥೆಯಲ್ಲಿ ಮುಗಿಸಿದರು.

ಶಿಕ್ಷಕರ ಶೈಕ್ಷಣಿಕ ತರಬೇತಿಯನ್ನು ಕಲಬುರ್ಗಿ ನಗರದ ಸರಕಾರಿ ಶಿಕ್ಷಕಿಯರ ತರಬೇತಿ ಕೇಂದ್ರದಲ್ಲಿ ಯಶಸ್ವಿಯಾಗಿ ಪಡೆಯುವ ಮೂಲಕ. ಮುಂದೆ ಶಿವಮೊಗ್ಗದ ಕುವೆಂಪು ಮುಕ್ತ ವಿಶ್ವವಿದ್ಯಾಲಯದಿಂದ ತಮ್ಮ ಪದವಿಯನ್ನು ಪಡೆದರು. ಇಷ್ಟು ಮಾತ್ರವಲ್ಲದೆ ಮನೆಯಲ್ಲಿ ಮಕ್ಕಳಿಗೆ ಪಾಠ ಮಾಡುವುದನ್ನು ರೂಢಿಸಿಕೊಂಡರು. ಅಂದರೆ ಮುಂದೆ ನೌಕರಿ ಬದುಕು ಆರಂಭವಾದರೆ ಅದು ತಮಗೆ ರೂಢಿಯಾಗಿ ಉಳಿಯಲಿ ಎಂಬುದು ಅವರ ಇಚ್ಛೆಯಾಗಿತ್ತು. ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ಇವರಿಗೆ ನೌಕರಿ ಭಾಗ್ಯ ಕೂಡ ಒಲಿದು ಬಂದಿತು.

ಶಿಕ್ಷಕ ವೃತ್ತಿ:

2003ರಲ್ಲಿ ತಮ್ಮ ಪವಿತ್ರವಾದ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದವರು ಕಲಬುರಗಿ ತಾಲೂಕಿನ ಪಾಳಾ ಎನ್ನುವ ಗ್ರಾಮದಲ್ಲಿ. ಒಂದೇ ಶಾಲೆಯಲ್ಲಿ ಸತತ 19 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಪಾಳಾ ಗ್ರಾಮದ ಪ್ರತಿಯೊಬ್ಬ ಪಾಲಕರ ಮನೆ ಮಾತಾಗಿರುವ ಶಿಕ್ಷಕಿ ಶ್ರೀಮತಿ ನಂದಿನಿ ಸನ್ ಬಾಲ್ ರವರ ಮಕ್ಕಳ ನಿರಂತರ ಕಲಿಕೆಗೆ ಪೂರಕವಾದ ಬೋಧನೆಗಳನ್ನು ಮಾಡುತ್ತಾ ಬರುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

ಕೌಟುಂಬಿಕ ಜೀವನ:

ಶ್ರೀಮತಿ ನಂದಿನಿ ಸನಾಬಾಲ್ ಅವರದ್ದು ಆದರ್ಶ ಕುಟುಂಬ…. ಜೊತೆಗೆ ಸಂತಸದ ಸಂಸಾರ ಇವರು 2002 ರಲ್ಲಿ ಆದರ್ಶ ಪ್ರಾಯವಾಗಿರುವ ಮತ್ತು ಚಿಂತನಶೀಲರಾಗಿರುವ ಸುರೇಂದ್ರ ಸನಬಾಳ್ ಅವರನ್ನು ಕೈ ಹಿಡಿದಿದ್ದಾರೆ, ಇವರ ಪತಿಯ ಪ್ರೋತ್ಸಾಹ ಕೂಡ ಇವರಿಗೆ ದೊರೆಯುವ ಮೂಲಕ ತಮ್ಮ ಉತ್ತಮ ಹವ್ಯಾಸ ಮುಂದುವರೆದಿದೆ ಎಂದು ಹೆಮ್ಮೆ ಯಿಂದ ಹೇಳುವ ಶ್ರೀಮತಿ ನಂದಿನಿ ಸನಬಾಳ್ ದಂಪತಿಗಳು ಎರಡು ಹೆಣ್ಣು ಮತ್ತು ಒಂದು ಗಂಡು ಮಗುವಿಗೆ ಜನ್ಮ ನೀಡಿರುವರು. ಸನಬಾಳ್ ದಂಪತಿಗಳು ಚಿಕ್ಕ ಸಂಸಾರದೊಂದಿಗೆ ಸಂತಸದ ಸಮಯವನ್ನು ಸದ್ವಿನಿಯೋಗದಿಂದ ಕಳೆಯುತ್ತಾ ಬರುತ್ತಿದ್ದಾರೆ. ಕುಮಾರಿ ಶ್ರದ್ಧಾ ಮತ್ತು ಕನಿಷ್ಕ ಮತ್ತು ಕುಮಾರ ರೀಯಾಂಶ ಸನ್ಬಾಳ್ ಎಂಬ ಮುದ್ದು ಮಕ್ಕಳ ಜೊತೆ ಸದಾ ಶೈಕ್ಷಣಿಕವಾಗಿ ಬಂದಿಲ್ಲ ಒಂದು ಕಾರ್ಯನಿರ್ವಸುತ ಬರುತ್ತಿರುವ ಈ ದಂಪತಿಗಳು ತಮ್ಮಗಳ ಮಕ್ಕಳ ಭವಿಷ್ಯಕ್ಕಾಗಿ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಸುರೇಂದ್ರ ಸನಬಾಳ್ ಅವರು ಕಲ್ಬುರ್ಗಿ ನಗರ ಸರಕಾರಿ ಆಸ್ಪತ್ರೆ ವೈದ್ಯಕೀಯ ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ ಸಂದರ್ಭದಲ್ಲಿ ಪತಿಯೊಂದಿಗೆ ಕೈಜೋಡಿಸಿ ಕೆಲಸ ಮಾಡಿದ್ದಾರೆ. ಕರೋನಾ ಸಂದರ್ಭದಲ್ಲಿ ಬಡವರಿಗೆ ಸಂದರ್ಭದಲ್ಲಿ ಅಲ್ಪಸಲ್ಪ ಧನ ಸಹಾಯ ಮಾಡಿದ್ದಾರೆ.

ವಿವಿಧ ಸಂಘಟನೆಗಳಲ್ಲಿ ಕ್ರಿಯಾಶೀಲ ಶಿಕ್ಷಕಿ:

ನಮ್ಮ ಕಾರ್ಯ ಪ್ರಾಮಾಣಿಕವಾಗಿ ಮಾಡುತ್ತಾ ಸಾಗಿದರೆ ಅದಕ್ಕೆ ದೇವರು ಪ್ರತಿಫಲ ನೀಡುತ್ತಾನೆ ಎಂಬುದಕ್ಕೆ ನಂದಿನಿ ಸನಬಾಳ್ ನಿದರ್ಶನ. ಇವರು ಶಿಕ್ಷಣ ಇಲಾಖೆಯ ಶಿಕ್ಷಕರ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಅನೇಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇವರು ಮಾತೆ ಸಾವಿತ್ರಿಬಾಯಿ ಶಿಕ್ಷಕಿಯರ ಸಂಘ ರಾಜ ಘಟಕ ಧಾರವಾಡ ಜಿಲ್ಲಾ ಕಲಬುರಗಿ ಹಾಗೂ ಕಲಬುರಗಿ ದಕ್ಷಿಣದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಕಲಬುರಗಿ ಜಿಲ್ಲಾ ಪಿ ಎಸ್ ಟಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವರು.

ಅದೇ ರೀತಿ ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘ ರಾಜ್ಯ ಘಟಕ ಕಲಬುರ್ಗಿ ಜಿಲ್ಲಾ ಘಟಕ ಕಲಬುರ್ಗಿ(skups) ಹಾಗೂ ಕಲಬುರ್ಗಿ ತಾಲೂಕು, ದಕ್ಷಿಣದ ಅಧ್ಯಕ್ಷರಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಅನೇಕ ಸೇವೆಗಳನ್ನು ಮಾಡುತ್ತಿದ್ದಾರೆ. ಇವರು ವಿವಿಧ ಇಲಾಖೆಯವರನ್ನು ಗುರುತಿಸಿ ಅವರ ಕಾರ್ಯ ಸಾಧನೆಯನ್ನು ಕಂಡು, ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ನೌಕರರ ನ ಗುರುತಿಸಿ, ಸಂಘಟನೆ ಪರವಾಗಿ ಪ್ರಶಸ್ತಿಗಳನ್ನು ಕೂಡ ನೀಡುತ್ತಿದ್ದಾರೆ.

ಶಿಕ್ಷಣ ಶಿಸ್ತು ಸಂಘಟನೆ ಹೋರಾಟ ಮತ್ತು ಪ್ರಶಸ್ತಿ ಈ ಆದರ್ಶಗಳನ್ನು ಒಳಗೊಂಡು ಸಂಘಟನೆಯ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣ, ಹೆಣ್ಣು ಮಕ್ಕಳಿಗಾಗಿ ಸಮಾನ ಅವಕಾಶ, ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ, ಹೆಣ್ಣು ಮಕ್ಕಳು ಶಿಕ್ಷಣಕ್ಕಾಗಿ ತಮ್ಮ ಸೇವೆಯನ್ನು ಮುಡುಪಾಗಿಟ್ಟಿದ್ದಾರೆ. ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘಟನೆಯಲ್ಲಿ ಅಂಗನವಾಡಿಯಿಂದ ಪದವಿ ಶಿಕ್ಷಣದವರೆಗೂ ಬೋಧನಾ ವರ್ಗದವರು ಇರುವುದರಿಂದ, ಎಲ್ಲಾ ಹಂತದಲ್ಲಿಯೂ ಮಕ್ಕಳಿಗೆ ಇವರ ಸಂಘಟನೆ ಪರವಾಗಿ ಹೊಸ ಹೊಸ ಕಾರ್ಯ ಚಟುವಟಿಕೆಗಳನ್ನು ಹಾಕಿಕೊಂಡಿದ್ದಾರೆ, ಎಸ್ ಎಸ್ ಎಲ್ ಸಿ ಮಕ್ಕಳ ಉತ್ತಮ ಫಲಿತಾಂಶ ಫಲಿತಾಂಶಕ್ಕಾಗಿ ಕಳೆದ ವರ್ಷ skups ಸಂಘಟನೆ ಆನ್ಲೈನ್ ನಲ್ಲಿ ಲೈವ್ ಕಾರ್ಯಕ್ರಮ ಕೂಡ ಕೊಟ್ಟಿದ್ದಾರೆ.

ಪಡೆದ ಗೌರವಗಳು:

ಇವರ ಸೇವೆಯನ್ನು ಗುರುತಿಸಿ ಸಣ್ಣೂರ್ ಕ್ಲಸ್ಟರ್ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ,ನಂತರ ಕರ್ನಾಟಕ ಸರ್ಕಾರ ನೀಡುವ ಕಲಬುರ್ಗಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ,ಇತ್ತೀಚೆಗೆ ಲೂಸಿ ಸಾಲ್ದಾನ್ ದತ್ತಿ ಸೇವಾ ಸಂಸ್ಥೆ ಧಾರವಾಡ ನೀಡಿದ ಶಿಕ್ಷಕರತ್ನ ರಾಜ ಪ್ರಶಸ್ತಿ, ನಾಡಿನ ಸಮಾಚಾರ ಗೋಕಾಕ್ ಇವರು ಕನ್ನಡ ವಿಭೂಷಣ ರಾಜ ಪ್ರಶಸ್ತಿ ಹಾಗೂ ಕಲಬುರ್ಗಿಯ ಜೈ ಕನ್ನಡಿಗರ ಸೇನೆ ಇವರಿಂದ ರಾಜೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಅನೇಕ ಗೌರವ ಪ್ರಶಸ್ತಿಗಳನ್ನು ಪಡೆದಿರುವರು.

ಕಿರುಚಿತ್ರ ದಲ್ಲಿ ಅಭಿನಯ:

ಇವರು ಅಮ್ಮ ನಾನು ಶಾಲೆಗೆ ಹೋಗುವೆ ಕನ್ನಡ ಕಿರುಚಿತ್ರದಲ್ಲಿ ಅಭಿನಯಿಸಿ ಎಲ್ಲರೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಚಿತ್ರ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ ಹಾಗೂ 2023 ಜನವರಿಯಲ್ಲಿ ಬ್ಯಾಂಕಾಕ್ ನಲ್ಲಿ ನಡೆಯುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಕಿರುಚಿತ್ರ ಪ್ರದರ್ಶನಗೊಳ್ಳಲಿದೆ.

ಪ್ರಗತಿಪರ ಚಿಂತಕಿ:

ಗ್ರಾಮೀಣ ಶಾಲೆಯ ಮಕ್ಕಳ ಸೇವೆಗಾಗಿ ತಮ್ಮನ್ನು ತಾವು ತೊಡಗಿಸಿ ಕೊಂಡು, ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನಂದಿನಿ ಸನಾಬಾಳ್ ಬಡ ಮಕ್ಕಳ ಸೇವೆ ಹಾಗೂ ಅವರ ಶಿಕ್ಷಣ ಕ್ಕೆ ಪ್ರೋತ್ಸಾಹ ನೀಡಬೇಕು ಎನ್ನುವ ಕನಸು ಅಭಿನಂದನಾರ್ಹ.ತಮಗೆ ಶಿಕ್ಷಣ ನೀಡಿದ ಗುರುಗಳ ಕುರಿತು ಇವರು ಬರಹಗಳನ್ನು ಬರೆದಿರುವರು.

ಆ ಬರಹಗಳನ್ನು ನನಗೆ ಕಳಿಸಿದ್ದಾರೆ.ಇವುಗಳನ್ನು ಒಂದು ಪುಸ್ತಕ ಮಾಡಿ ಎಂದು ಸಲಹೆ ನೀಡಿರುವೆನು. ಮುಂಬರುವ ದಿನದಲ್ಲಿ ಶೈಕ್ಷಣಿಕ ಚಿಂತನೆ ಯ ಕೃತಿ ಇವರ ಲೇಖನದಲ್ಲಿ ಮೂಡಿ ಬರಲಿ ಇವರ ಮುಂದಿನ ಭವಿಷ್ಯ ಮತ್ತು ಶೈಕ್ಷಣಿಕ ಸೇವೆ ನಿರಂತರವಾಗಿ ಪ್ರಜ್ವಲಿಸಲಿ ಹಾಗೂ ಶುಭವಾಗಲಿ ಎಂದು ಹಾರೈಸುತ್ತೇನೆ.


ವೈ. ಬಿ. ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿ
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್. ಮುನವಳ್ಳಿ 591117
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
9449518400.8971117442

- Advertisement -
- Advertisement -

Latest News

ಉಂಡು ಮಲಗಿದ ಮೇಲೂ ಗಂಡ ಹೆಂಡಿರ ಜಗಳ !

ಸಂಸಾರದ ಬಂಡಿ ಸರಾಗವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎನ್ನುವ ಎರಡು ಗಾಲಿಗಳು ಸಮಸಮವಾಗಿ ಚಲಿಸಬೇಕು. ಎರಡೂ ಗಾಲಿಗಳಿಗೆ ಪ್ರಾಧಾನ್ಯತೆಯಿದೆ. ಒಂದು ಹೆಚ್ಚು ಒಂದು ಕಡಿಮೆ ಇಲ್ಲ....
- Advertisement -

More Articles Like This

- Advertisement -
close
error: Content is protected !!