ಸಸ್ಯ ಸಂಕುಲವನ್ನು ರಕ್ಷಿಸುವ ಹೊಣೆ ನರೇಗಾದಲ್ಲಿದೆ

Must Read

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಬೈಲಹೊಂಗಲ : ಮಾನವ ಸಂಕುಲ ಬೆಳೆದಷ್ಟು ಕಾಡಿನ ನಾಶದತ್ತ ಮನುಷ್ಯ ದಾಪುಗಾಲಿಡುತ್ತ ಹೊರಟಿದ್ದಾನೆ. ಬೆಟ್ಟ ಗುಡ್ಡಗಳನ್ನು ಕೊರೆದು ಮನುಷ್ಯನ ಬೇಡಿಕೆಗೆ ಕಾಡು ಮತ್ತು ಮಣ್ಣನ್ನು ನಾಶ ಮಾಡುತ್ತಿರುವುದರಿಂದ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವುದನ್ನೆ ಮರೆತು ಜೀವನ ಸಾಗಿಸುತ್ತಿದ್ದಾನೆ, ಆದರೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಭಾಗದ ದುಡಿಯುವ ಅಕುಶಲ ಕಾರ್ಮಿಕರಿಗೆ 100 ದಿನಗಳ ವರೆಗೆ ಕೆಲಸ ನೀಡಿ ಪ್ರತಿ ದಿನಕ್ಕೆ 289/- ರೂಗಳವರೆಗೆ ಕೂಲಿ ಸಹ ನೀಡುವುದರ ಜೊತೆಗೆ ಗ್ರಾಮೀಣ ಶ್ರೇಯೋಭಿವೃದ್ಧಿಯೊಂದಿಗೆ ನಾಡಿನ ರಕ್ಷಣೆಯನ್ನು ಅರಣ್ಯ ಇಲಾಖೆ ಸಹಯೋಗದಲ್ಲಿ ನಡೆಸಿಕೊಂಡು ಬಂದಿರುವುದು ಕಣ್ಮುಂದೆ ಕಾಣುತ್ತಿರುವುದು ಹೆಮ್ಮೆಯ ವಿಷಯ.

ಇದು ಬೆಳಗಾವಿ ಜಿಲ್ಲೆಯಿಂದ 40 ಕಿ.ಮೀ ಮತ್ತು ಬೈಲಹೊಂಗಲ ತಾಲೂಕಿನಿಂದ 23 ಕಿ.ಮೀ ದೂರದಲ್ಲಿರುವ ಗ್ರಾಮ ಪಂಚಾಯತ ಹಣಬರಹಟ್ಟಿ ವ್ಯಾಪ್ತಿಯ ಹಣಬರಟ್ಟಿ ಗ್ರಾಮದಲ್ಲಿರುವ ಕರೆಮ್ಮನ ಗುಡ್ಡ ಎಂದು ರೂಢಿಗತವಾಗಿ ಕರೆಯುವ ಗುಡ್ಡದ ರಿ.ಸ.ನಂ 290 ರ ವಿಸ್ತೀರ್ಣ 5.5 ಹೇಕ್ಟರ ಪ್ರದೇಶದಲ್ಲಿ ಸನ್ 2020-21 ನೇ ಸಾಲಿನಲ್ಲಿ ನರೇಗಾ ಯೋಜನೆಯ ಮುಖಾಂತರ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಸಸಿ ನೆಡುವ ಅಭಿಯಾನವನ್ನು ಹಮ್ಮಿಕೊಂಡಿದ್ದರು.

ಒಟ್ಟು ಅಂದಾಜು ಮೊತ್ತ. 10.00 ಲಕ್ಷಗಳಲ್ಲಿ ಗಳಲ್ಲಿ 1*1*1 ಅಳತೆಯ ಒಟ್ಟು ಸಸಿಗಳು ನೆಟ್ಟಿರುವ ಸಂಖ್ಯೆ 2200, ಗುಂಡಿ ತೊಡಲು ಸೃಜಿಸಿದ ಮಾನವ ದಿನಗಳು 3627, ಸಸಿ ನೆಡಲು ಸೃಜಿಸಿದ ಮಾನವ ದಿನ 671 ಮತ್ತು ಸದರಿ ಸಸಿಗಳ ಹತ್ತಿರ ಅಂದಾಜು 8.78 ಲಕ್ಷಗಳಲ್ಲಿ 4*.05*.05 ಅಳತೆಯಡಿಯ 1036 ಟ್ರಂಚಗಳು (ನೀರು,ಮಣ್ಣು ಮತ್ತು ತೇವಾಂಶನ ಗುಂಡಿ) ಗಳನ್ನು ತೆರೆದು 1371 ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ಗುಡ್ಡಗಾಡು ಪ್ರದೇಶದಲ್ಲಿ ಸಸಿಗಳಿಂದ ಕರೆಮ್ಮನ ಗುಡ್ಡ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.

- Advertisement -

ಹಲವು ಬಗೆಯ ತಳಿಗಳನ್ನು ನೆಟ್ಟಿರುತ್ತಾರೆ ಬಂಗಾಲಿ 100, ತಪಸಿ 300, ಹೊಂಗೆ 254 ಬಸರಿ 600 ಕರೆಬಸರಿ 146 ಅರಳಿ 374 ಶಿರಸಲ 200 ಸೀತಾಫಲ 136 ನೇರಲ 50 ಆಲ 40 ಒಟ್ಟು 3262 ಸಸಿಗಳನು ನೆಟ್ಟಿರುವುದು ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಅರಣ್ಯ ಇಲಾಖೆಯಡಿಯಲ್ಲಿ ಜಿಲ್ಲೆಯಾದ್ಯಂತ ಗ್ರಾಮ ಪಂಚಾಯತ ಮಟ್ಟದಲ್ಲಿ “ಕೋಟಿ ವೃಕ್ಷ ಅಭಿಯಾನ”ವನ್ನು ಹಮ್ಮಿಕೊಂಡಿದ್ದು ಇದು ವಿಶ್ವ ಪರಿಸರ ದಿನಾಚರಣೆ ನಿಮಿತ್ತವಾಗಿ ಈಗಾಗಲೇ ನರೇಗಾ ಯೋಜನೆಯಡಿಯಲ್ಲಿ ಮುಂಗಡ ಗುಂಡಿಗಳನ್ನು ತೆರೆಯಲಾಗಿದ್ದು. ಸದರಿ ದಿನಾಚರಣೆಯೆಂದು ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುಭಾಸ್ ಎಸ್ ಸಂಪಗಾಂವಿ ತಿಳಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...
- Advertisement -

More Articles Like This

- Advertisement -
close
error: Content is protected !!