ದೇಶ ಉದ್ಧೇಶಿಸಿ ಮೋದಿ ಭಾಷಣ ; ವಿಶ್ವಾಸದಿಂದ ಮುನ್ನಡೆದರೆ ಎಲ್ಲವೂ ಸಾಧ್ಯವಾಗುತ್ತದೆ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಕಳೆದ ನೂರು ವರ್ಷಗಳಲ್ಲಿ ಬಂದ ಮಹಾಮಾರಿಗಳಲ್ಲಿ ಇದು ಅತ್ಯಂತ ದೊಡ್ಡದು. ಇಂಥ ಮಹಾಮಾರಿಯನ್ನು ಯಾವ ದೇಶವೂ ಕಂಡಿರಲಿಲ್ಲ. ಇದರ ವಿರುದ್ಧ ಎಲ್ಲರೂ ಹೋರಾಡಿದ್ದೇವೆ. ಅದರಲ್ಲಿ ಯಶಸದವಿಯಾಗುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ದೇಶವನ್ನುದ್ದೇಶಿಸಿ ಅರ್ಧ ಗಂಟೆಯ ಭಾಷಣ ಮಾಡಿದ ಅವರು, ಕೊರೋನಾ ವಿರುದ್ಧ ಹೋರಾಡಲು ಕಳೆದ ವರ್ಷದಿಂದ ಹೊಸ ಹೆಜ್ಜೆಗಳನ್ನು ಕಂಡುಹಿಡಿಯಲಾಗಿದೆ. ಈ ದಿನಗಳಲ್ಲಿ ವೈದ್ಯಕೀಯ ಆಮ್ಲಜನಕದ ಬೇಡಿಕೆ ಸಾಕಷ್ಟು ಹೆಚ್ಚಾಗಿದೆ.

ಇದರ ಪೂರೈಕೆಗೆ ಯುದ್ಧೋಪಾದಿಯಲ್ಲಿ ಕೆಲಸ ಮಾಡಲಾಯಿತು. ರೈಲ್ವೇ, ನೌಕಾದಳ ಹಾಗೂ ವಾಯು ದಳಗಳನ್ನು ಆಕ್ಸಿಜನ್ ಪೂರೈಕೆಗಾಗಿ ನಿಯೋಜಿಸಲಾಯಿತು. ಎಲ್ಲಿಂದ ಏನೇ ದೊರಕಿದರೂ ಅದನ್ನು ಪಡೆದುಕೊಂಡು ಬರಲಾಯಿತು. ವಿದೇಶದಿಂದ ಯಾವ ಔಷಧ ಸಿಕ್ಕರೂ ಅದನ್ನು ತರಲಾಯಿತು.

- Advertisement -

ಇದರ ಹೋರಾಟದಲ್ಲಿ ನಮಗೆ ಸ್ವದೇಶಿ ನಿರ್ಮಿತ ಲಸಿಕೆ ತುಂಬ ಉಪಯುಕ್ತವಾಗಿದೆ. ಇಂದು ನಮಗೆ ನಮ್ಮ ದೇಶದ ಲಸಿಕೆ ಇಲ್ಲದಿದ್ದರೆ ಭಾರತದಂಥ ಬೃಹತ್ ದೇಶದ ಪರಿಸ್ಥಿತಿ ಏನಾಗುತ್ತಿತ್ತು ಊಹಿಸಿಕೊಳ್ಳಿ. ವಿದೇಶದಲ್ಲಿ ಲಸಿಕೆ ಪೂರ್ತಿಯಾದರೂ ನಮ್ಮ ದೇಶದಲ್ಲಿ ಇನ್ನೂ ಸಿಗುತ್ತಿರಲಿಲ್ಲ. ಶೇ.ನೂರು ಲಸಿಕಾಕರಣ ಪೂರೈಸಲು ೪೦ ವರ್ಷ ಬೇಕಾಗುತ್ತಿತ್ತು. ಮಿಷನ್ ಇಂದ್ರಧನುಷ್ ಕಾರ್ಯಾಚರಣೆಯಲ್ಲಿ ಲಸಿಕಾಕರಣ ಶೇ. ೬೦ ರಿಂದ ೯೦ ರವರೆಗೆ ಹೆಚ್ಚಾಗಿದೆ ಎಂದು ಮೋದಿ ಹೇಳಿದರು.

ನಮಗೆ ದೇಶದ ಮಕ್ಕಳು, ಬಡವರ ಚಿಂತೆ ಇತ್ತು ಈಗ ಆ ಚಿಂತೆ ದೂರವಾಗಿದೆ. ಆದರೆ ನಮ್ಮ ನೀತಿ ಸ್ಪಷ್ಟ ಹಾಗೂ ನಿರಂತರ ಪ್ರಯತ್ನಗಳಿಂದಾಗಿ ನಮಗೆ ಯಶಸ್ಸು ಸಿಕ್ಕಿದೆ. ನಮ್ಮ ದೇಶಕ್ಕೆ ಒಂದಲ್ಲ ಎರಡು ಲಸಿಕೆಗಳು ಸಿಕ್ಕಿವೆ. ನಮ್ಮ ವೈದ್ಯರು, ವಿಜ್ಞಾನಿಗಳು ಕಡಿಮೆ ಸಮಯದಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ.

೨೩ ಕೋಟಿ ಲಸಿಕೆಗಳು ತಯಾರಾಗಿವೆ. ಈಗ ನಾವು ಬೇರೆ ಯಾವುದೇ ದೇಶಕ್ಕಿಂತ ಮುಂದಿದ್ದೇವೆ ಎಂದ ಅವರು, ವಿಶ್ವಾಸ ಇದ್ದರೆ ಎಲ್ಲವೂ ಸಾಧ್ಯ ಎಂಬುದನ್ನು ನಾವು ಸಾಧಿಸಿದ್ದೇವೆ ಎಂದರು. ಬರುವ ದಿನಗಳಲ್ಲಿ ಇನ್ನೂ ಹೆಚ್ಚು ಲಸಿಕೆಗಳ ಉತ್ಪಾದನೆ ಆಗಲಿದೆ. ಪೂರೈಕೆಯನ್ನು ಹೆಚ್ಚಿಸಲು ವಿದೇಶಗಳ ಕಂಪನಿಗಳನ್ನೂ ಸಂಪರ್ಕಿಸಲಾಗಿದೆ. ಮುಖ್ಯವಾಗಿ ಚಿಕ್ಕ ಮಕ್ಕಳ ಸಲುವಾಗಿ ಮೂಗಿನಲ್ಲಿ ಸ್ಪ್ರೇ ಮಾಡುವ ಲಸಿಕೆಯನ್ನು ಕಂಡು ಹಿಡಿಯಲಾಗುತ್ತಿದೆ. ಇದು ಸಾಧ್ಯವಾದರೆ ಸೂಜಿ ಇರುವುದಿಲ್ಲ. ಭಾರತಕ್ಕೆ ದೊಡ್ಡ ಯಶಸ್ಸು ಸಾಧ್ಯವಾಗಲಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಮಾಣದಂತೆಯೇ ಲಸಿಕೆಗಳ ತಯಾರಿ ಮಾಡಲಾಗಿದೆ. ಮೊದಲು ಫ್ರಂಟ್ ಲೈನ್ ಕಾರ್ಯಕರ್ತರಿಗೆ ಹಾಗೂ ೬೦ ವರ್ಷ ಮೇಲ್ಪಟ್ಟವರಿಗೆ ಲಸಿಕೆ ಆರಂಭಿಸಲಾಯಿತು. ವಿಚಾರ ಮಾಡಿ, ನಮ್ಮ ವೈದ್ಯರಿಗೆ, ಆರೋಗ್ಯ ಕಾರ್ಯಕರ್ತರಿಗೆ ಮೊದಲು ಲಸಿಕೆ ನೀಡದಿದ್ದರೆ ಇಂದು ಏನಾಗುತ್ತಿತ್ತು ಅಂತ.

ಕೊರೋನಾ ಎರಡನೇ ಅಲೆಯಲ್ಲಿ ಕೆಲಸ ಮಾಡಲು ಯಾವುದೇ ಅಡೆತಡೆ ಬರದಂತೆ ಹಾಗೂ ಅವರಿಗೆ ಯಾವುದೇ ಅಪಾಯವಾಗದಂತೆ ತಡೆಯಲು ಆರೋಗ್ಯ ಕಾರ್ಯಕರ್ತರಿಗೆ ಮೊದಲು ಲಸಿಕೆ ಆರಂಭಿಸಲಾಯಿತು. ಎಲ್ಲರಿಗೂ ಉಚಿತ ಲಸಿಕೆ ನೀಡಲು ಸರ್ಕಾರ ಕಾರ್ಯ ಪ್ರವೃತ್ತವಾಗಿದೆ.

೧ ನೇ ಮೇ ತಿಂಗಳಿಂದ ಪ್ರತ್ಯೇಕ ರಾಜ್ಯಗಳಿಗೆ ಕೊರೋನಾ ಶೇ. ೨೫ ರಷ್ಟು ನಿಭಾಯಿಸುವ ಜವಾಬ್ದಾರಿ ನೀಡಲಾಗಿದೆ. ಜೂನ್ ೨೧ ರಂದು ಯೋಗದಿನ ಇದೆ ಇದರ ಒಳಗೇ ಭಾರತದ ೧೮ ವರ್ಷ ಒಳಗಿನ ಯುವಕರಿಗೆ ಲಸಿಕೆ ದೊರೆಯುವಂತೆ ಕ್ರಮಕೈಗೊಳ್ಳಲಾಗುವುದು. ಹಾಗೆಯೇ ಎಲ್ಲರಿಗೂ ಭಾರತ ಸರ್ಕಾರದ ಅಭಿಯಾನದಂತೆ ಉಚಿತ ಲಸಿಕೆ ನೀಡಲಾಗುವುದು. ಯಾರಾದರೂ ಖಾಸಗಿ ಆಸ್ಪತ್ರೆಗಳಿಂದ ಲಸಿಕೆ ಪಡೆಯವವರಿದ್ದರೆ

ಅಂಥವರಿಗೆ ಲಸಿಕೆಗೆ ರೂ. ೧೫೦ ಗಳನ್ನು ಪಡೆಯಲಾಗುವುದು ಎಂದು ಮೋದಿ ಹೇಳಿದರು.

ಕೊರೋನಾ ಹೋರಾಟದಲ್ಲಿ ೧೩೦ ಕೋಟಿ ಜನರು ಹಗಲು ರಾತ್ರಿ ಭಾಗಿಯಾಗಿದ್ದಾರೆ ಇನ್ನು ಮುಂದಾದರೂ ನಾವು ಒಂದಾಗಿ ನಡೆಯಬೇಕು. ಈಗಲೂ ಬೇರೆ ದೇಶಗಳಿಗಿಂತಲೂ ನಾವು ಲಸಿಕೆಯಲ್ಲಿ ಮುಂದಿದ್ದೇವೆ.
ಈ ಪವಿತ್ರ ಕಾರ್ಯದಲ್ಲಿ ವಾದವಿವಾದ ಅಥವಾ ರಾಜಕೀಯ ಜಟಾಪಟಿ ಮಾಡುವುದು ಉಚಿತವಲ್ಲ. ಇದು ಎಲ್ಲ ರಾಜ್ಯಗಳ, ಎಲ್ಲ ನಾಗರಿಕರ ಜವಾಬ್ದಾರಿಯಾಗಿದೆ.

ಹೋದವರ್ಷ ಲಾಕ್ ಡೌನ್ ಆರಂಭವಾದಾಗ ಪ್ರಧಾನ ಮಂತ್ರಿ ಗರೀಬ ಕಲ್ಯಾಣ ಯೋಜನೆಯಲ್ಲಿ ಎಂಟು ತಿಂಗಳು ೮೦ ಕೋಟಿ ಜನರಿಗೆ ಉಚಿತ ರೇಷನ್ ನೀಡಲಾಗಿತ್ತು ಅದನ್ನೇ ಈ ವರ್ಷ ದೀಪಾವಳಿ ತನಕ ವಿಸ್ತರಿಸಲಾಗಿವುದು ಎಂದು ಹೇಳಿದ ಅವರು, ಲಸಿಕೆ ವಿಷಯದಲ್ಲಿ ಸುಳ್ಳುಗಳ ನ್ನು ಹರಡುತ್ತಿರುವವರಿಗೂ ಲಸಿಕೆಯನ್ನು ನೀಡಲಾಗುವುದು. ಇಂಥ ಜನರಿಂದ ಎಚ್ಚರವಾಗಿರಬೇಕು ಇವರು ಮುಗ್ಧರ ಜೀವನದೊಂದಿಗೆ ಚಲ್ಲಾಟವಾಡುತ್ತಿದ್ದಾರೆ.

ನಾವು ಎಚ್ಚರವಾಗಿಯೂ ಇರಬೇಕು ಕೊರೋನಾ ನಿಯಮಗಳ ಪಾಲನೆಯನ್ನೂ ಮಾಡಬೇಕು ಎಂದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!