spot_img
spot_img

ಕಣಚೂರು ಆಯುರ್ವೇದ ಆಸ್ಪತ್ರೆ – ಆಯುರ್ವೇದ ದಿನಾಚರಣೆ

Must Read

spot_img
- Advertisement -

ಕಣಚೂರು – ವಿಶ್ವ ಆಯುರ್ವೇದ ದಿನಾಚರಣೆಯ ಶುಭಾವಸರದಲ್ಲಿ ನಾಟೆಕಲ್ಲಿನ ಕಣಚೂರು ಆಯುರ್ವೇದ ಆಸ್ಪತ್ರೆಯಲ್ಲಿ ಆಯರ್ವೇದ ದಿನಾಚರಣೆಯನ್ನು ವಿಶಿಷ್ಟವಾಗಿ ಸಂಸ್ಥೆಯ ಚೇರ್ಮನ್ ಡಾ. ಹಾಜಿ ಕಣಚೂರು ಮೋನಜ ಅವರ ಆಶಯದಂತೆ ಯಶಸ್ವಿಯಾಗಿ ಆಚರಿಸಲಾಯಿತು.

ಸದ್ರಿ ಸಂಸ್ಥೆಯ ಪಿ.ಯು ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯುರ್ವೇದ ಮಹತ್ವ ಸಾರುವ ಚಿತ್ರಕಲಾ ಸ್ಪರ್ಧೆ ಹಾಗೂ ಆಯುರ್ವೇದ ವಿಷಯದ ಭಾಷಣ ಸ್ಪರ್ಧೆಗಳನ್ನು ಇದೇ ವೇಳೆ ನಡೆಸಲಾಯಿತು.

ಮಹಿಳಾ ಸಬಲೀಕರಣದ ಘೋಷ ವಾಕ್ಯ ಹೊಂದಿರುವ ಒಂಭತ್ತನೇ ಆಯುರ್ವೇದ ದಿನಾಚರಣೆಯ ಉದ್ಘಾಟನೆಯನ್ನು ಸಂಸ್ಥೆಯ ನಿರ್ದೇಶಕ ಅಬ್ದುಲ್ ರೆಹಮಾನ್ ದೀಪ ಬೆಳಗಿ ಉದ್ಘಾಟಿಸಿ ಆಯುರ್ವೇದ ಚಿಕಿತ್ಸೆಯ ಮಹತ್ವ ಹಾಗೂ ಕಣಚೂರು ಸಂಸ್ಥೆಯ ದೂರದರ್ಶಿತ್ವವನ್ನು ವಿವರವಾಗಿ ವಿಶ್ಲೇಷಿಸಿ ಶುಭ ಹಾರೈಸಿದರು.

- Advertisement -

ರಾಹಿಲಾರವರ ಧಾರ್ಮಿಕ ಪ್ರಾರ್ಥನೆ ಹಾಗೂ ಡಾ ಸೌಮ್ಯಾರಿಂದ ಧನ್ವಂತರೀ ಪ್ರಾರ್ಥನೆ, ವೈದ್ಯಕೀಯ ಅಧೀಕ್ಷಕ ಡಾ ಕಾರ್ತಿಕೇಯ ಪ್ರಸಾದ್ ಸ್ವಾಗತ , ವೈದ್ಯಕೀಯ ನಿರ್ದೇಶಕ ಡಾ ಸುರೇಶ ನೆಗಳಗುಳಿಯವರ ಧನ್ಯವಾದ ಸಮರ್ಪಣೆ ಮತ್ತು ಸ್ವರಚಿತ ಆಯುರ್ವೇದ ಗೀತೆ ವಾಚನದೊಂದಿಗೆ ಸಮಾರಂಭ ಕೊನೆಗೊಂಡಿತು.

ಡಾ ಮರಿಯಾ ರವರು ಹಾಗೂ ಡಾ ಸೌಮ್ಯಾರವರು ನಿರೂಪಣೆಯಲ್ಲಿ ಸಹಕರಿಸಿದ್ದರು

ಡಾ ಸುರೇಶ ನೆಗಳಗುಳಿ
ಮಂಗಳೂರು
9448226674

- Advertisement -
- Advertisement -

Latest News

ಫೆ. 8ರಂದು ಸಿಲಿಕಾನ್ ಸಿಟಿಯಲ್ಲಿ ಕುಂದಾಪುರದ ಯಶಸ್ವಿ ಕಲಾ ವೃಂದ (ಕೊಮೆ, ತೆಕ್ಕಟ್ಟೆ) ಸಂಸ್ಥೆ ಗೆ 25 ರ ಸಂಭ್ರಮ !

ಫೆಬ್ರವರಿ, 8 ರಂದು ರಾಜ್ಯ ರಾಜಧಾನಿಯಲ್ಲಿ ಯಶಸ್ವೀ ಕಲೋಲ್ಲಾಸ  ಕರಾವಳಿ ಭಾಗದ ಪ್ರತಿಷ್ಠಿತ ಸಂಸ್ಥೆ ಬೆಳ್ಳಿ ಹಬ್ಬದ ಸಡಗರವನ್ನು ೧೦೮ನೇ ಕಾರ್ಯಕ್ರಮವನ್ನು ರಾಜಧಾನಿಯ ರವೀಂದ್ರ ಕಲಾಕ್ಷೇತ್ರದಲ್ಲಿ ಫೆಬ್ರವರಿ...
- Advertisement -

More Articles Like This

- Advertisement -
close
error: Content is protected !!
Join WhatsApp Group