ಸಿಂದಗಿ: 2020-21ರ ಈ ಅವಧಿಯಲ್ಲಿ ಪ್ರಾರಂಭಗೊಳ್ಳುತ್ತಿರುವ ಈ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಮ್ಮ ದೇಶದಲ್ಲಿ ಪ್ರ-ಪ್ರಥಮ ಬಾರಿಗೆ ನಮ್ಮ ಕರ್ನಾಟಕ ರಾಜ್ಯ ಸರಕಾರ ಅನುಷ್ಠಾನಗೊಳಿಸುತ್ತಿರುವ ಏಕ ಮೇವ ರಾಜ್ಯವಾಗಿದೆ. ಎಂದು ಸಹ ಪ್ರಾಧ್ಯಾಪಕ ಬಿ.ಜಿ. ಮಠ ಹೇಳಿದರು.
ತಾಲೂಕ ಪ್ರಸಾರಕ ಮಂಡಳಿ ಸಿಂದಗಿ ಸಿ.ಎಮ್.ಮನಗೂಳಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಶಿಕ್ಷಣ ನೀತಿ 2020ರಂದು ಕಾರ್ಯಾಗಾರದಲ್ಲಿ ಬಿ.ಎ, ಬಿ.ಎಸ್ಸಿ, ಬಿ.ಕಾಂ ಪ್ರಥಮ ಸೆಮಿಸ್ಟರ್ ಗೆ ಪ್ರವೇಶ ಬಯಸಿ ಬಂದ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರಿಗೆ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಕುರಿತು ಉಪನ್ಯಾಸ ನೀಡಿ, ಈ ಶಿಕ್ಷಣ ನೀತಿ ಯುವ ವಿದ್ಯಾರ್ಥಿಗಳಲ್ಲಿ ಕೌಶಲ್ಯಯುಕ್ಯ ವ್ಯಕ್ತಿತ್ವವನ್ನು ಕೌಶಲ್ಯಯುಕ್ತ ನಿರ್ಮಾಣಗೋಳಿಸುವುದರೊಂದಿಗೆ ಸದಾ ಯಶಸ್ಸನ್ನು ಉಂಟು ಮಾಡುತ್ತದೆ ಎಂದರು.
ಪ್ರಾಧ್ಯಾಪಕ ಎಸ್.ಕೆ. ಹೂಗಾರ ಮಾತನಾಡಿ, ಈ ಶಿಕ್ಷಣ ನೀತಿಯಿಂದ ನಮ್ಮ ಜೀವನದ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ. ಎಂದರು.
ನ್ಯಾಕ್ ಸಂಯೋಜಕ ಪ್ರೊ. ಜಿ.ಜಿ.ಕಾಂಬಳೆ ಸ್ವಾಗತಿಸಿ ಪರಿಚಯಿಸಿದರು.
ಈ ಕಾರ್ಯಾಗಾರದಲ್ಲಿ ಸುಮಾರು ನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಅರವತ್ತಕ್ಕಿಂತ ಹೆಚ್ಚು ಪಾಲಕರು, ಮಹಾವಿದ್ಯಾಲಯದ ಡಾ. ಅರವಿಂದ ಮನಗೂಳಿ, ಪ್ರೊ.ಎಂ.ಜಿ. ಬಿರಾದಾರ, ಪ್ರೊ. ಎಸ್.ಕೆ.ಹೂಗಾರ ಡಾ. ಅಂಬರೀಶ ಬಿರಾದಾರ, ಪ್ರೊ. ಎಸ್.ಎಸ್. ಪಾಟೀಲ, ಪ್ರೊ. ಎಸ್.ಎಮ್.ಬಿರಾದಾರ ಡಾ.ಬಿ.ಜಿ. ಪಾಟೀಲ ಪ್ರೊ.ಎಮ್.ಎಲ್. ಪರಮಾನಂದ ಪ್ರೊ. ಜಿ.ಜಿ. ಕತ್ತಿ ಪ್ರೊ. ಎಸ್.ಆರ್.ಸೌಂಶಿಕರ ಹಾಗೂ ಅಂಗ ಸಂಸ್ಥೆಯಾದ ಎಚ್.ಜಿ. ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎ.ಅರ್.ಹೆಗ್ಗಣದೊಡ್ಡಿ ಹಾಗೂ ಪ್ರಾಧ್ಯಾಪಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.