ಬೆಳಗಾವಿ: ನಗರದ ಕೇಂದ್ರ ಗ್ರಂಥಾಲಯದಲ್ಲಿ ಫೆ.28 ರಂದು “ರಾಷ್ಟ್ರೀಯ ವಿಜ್ಞಾನ ದಿನ” ಆಚರಣೆ ಮಾಡಲಾಯಿತು. ಉಪನಿರ್ದೇಶಕರಾದ ರಾಮಯ್ಯ ಅವರ ಮಾರ್ಗದರ್ಶನದಲ್ಲಿ ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯದ ಎಲ್ಲಾ ಸಿಬ್ಬಂದಿ ಮತ್ತು ಓದುಗರು ಸೇರಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಪ್ರತಿ ವರ್ಷ ಫೆ 28 ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ ಮಾಡಲಾಗುತ್ತದೆ. 2025 ರ ಧ್ಯೇಯ ವಾಕ್ಯ ‘ವಿಜ್ಞಾನದಲ್ಲಿ ಯುವ ಸಬಲೀಕರಣ’ ಜೊತೆಗೆ ” ವಿಕಸಿತ ಭಾರತಕ್ಕಾಗಿ ವಿಜ್ಞಾನ ಮತ್ತು ನಾವೀಣ್ಯತೆಯಲ್ಲಿ ಭಾರತೀಯ ಯುವ ಜನರ ಸಬಲೀಕರಣಕ್ಕಾಗಿ.. ಪಣ” ತೊಡುವ ನಿಮಿತ್ತ ಮತ್ತು ಭಾರತ ರತ್ನ, ನೋಬೆಲ್ ಪ್ರಶಸ್ತಿ ವಿಜೇತ ನಮ್ಮ ಮಹಾನ್ ಭೌತ ವಿಜ್ಞಾನಿ ಸಿ ವಿ ರಾಮನ್ ಅವರ ಕೊಡುಗೆಯನ್ನು ಸ್ಮರಿಸಲು ಈ ದಿನ ಆಚರಿಸಲಾಗುತ್ತದೆ.
ಈ ಸಂದರ್ಭದಲ್ಲಿ ಅಧೀಕ್ಷಕರಾದ ಏ ಏ ಕಾಂಬಳೆ, ಎಸ್ ಎಸ್ ಸೀಮಿಮಠ, ಲತಾ ಎಮ್, ಆನಂದ, ಪ್ರಕಾಶ ಇಚಲಕರಂಜಿ, ಸುಮಿತ್ ಕಾವಳೆ,ಅಂಬೇಕರ್, ಸುನಿಲ್, ಸಂಗೀತಾ, ಪದ್ಮಪ್ರಿಯಾ, ಲಕ್ಮಿ,ಈರಣ್ಣ ಮತ್ತಿತರರು ಓದುಗರು, ವಿಧ್ಯಾರ್ಥಿಗಳು,ಹಾಜರಿದ್ದು ವೈಜ್ಞಾನಿಕ ಮನೋಭಾವನೆ ಹಾಗೂ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿ ಕೊಳ್ಳುವ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.