ಮೂಡಲಗಿ:-ತಾಲೂಕಿನ ಗುರ್ಲಾಪೂರದಲ್ಲಿ ಇತ್ತೀಚೆಗೆ ಗ್ರಾಮದ ಸರ್ಕಾರಿ ಶಾಸಕರ ಮಾದರಿ ಶಾಲೆಯಲ್ಲಿ ರಾಷ್ಟ್ರೀಯ
ವಿಜ್ಞಾನ ಶಾಲೆಯ ದಿನಾಚರಣೆಯನ್ನು ಆಚರಿಸಲಾಯಿತು.
ಸರ್ಕಾರಿ ಸುತ್ತೋಲೆ ಪ್ರಕಾರ ಪ್ರತಿಜ್ಞಾ
ವಿಧಿ ಸ್ವೀಕಾರವನ್ನು ಶಾಲೆಯ ಪದವೀಧರ ಮುಖ್ಯೋಪಾಧ್ಯಾಯರಾದ ಜಿ. ಆರ್.
ಪತ್ತಾರವರು ಮಕ್ಕಳಿಗೆ ಭೋದನೆ ಮಾಡಿದರು.
ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಎಲ್. ಪಿ.
ನೇಮಗೌಡರ ವಿಜ್ಞಾನಿ ಸಿ. ವಿ. ರಾಮನ್ ಅವರ
ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಶಾಲೆಯ ಶಿಕ್ಷಕರಾದ ಬಿ. ವಾಯ್. ಮೋಮಿನರವರು ಸಿ. ವಿ.
ರಾಮನ್ ಅವರು ವಿಜ್ಞಾನ ಕ್ಷೇತ್ರದಲ್ಲಿ ಜಗತ್ತಿಗೆ ಬೆಳಕನ್ನು ನೀಡುವುದರ ಜೊತೆಗೆ ಭಾರತದ ಹೆಸರು ಜಗತ್ತಿನ ಅತ್ಯಂತ
ಶ್ರೀಮಂತ ನನ್ನಾಗಿ ಮಾಡಿದರು.ಅದು ಅಲ್ಲದೆ ಮಕ್ಕಳೊಂದಿಗೆ ಅವರಿಗೆ ಇರುವ ಒಡನಾಟ ಹಾಗೂ ಅವರು ಮಾಡಿರುವ ಸಾಧನೆಗಳ ಬಗ್ಗೆ ತಿಳಿಸಿದರು.
ಶಿಕ್ಷಕರಾದ ಬಿ .ಬಿ. ಸಸಾಲಟ್ಟಿ ಮಾತನಾಡಿ, ಚಂದ್ರಶೇಖರ ವೆಂಕಟರಾಮನ್ ಅವರ ಪೂರ್ಣ ಹೆಸರು,ಸಿ.ವಿ.ರಾಮನ್ ಎಂದೇ ಪ್ರಖ್ಯಾತಿ ಹೊಂದಿದರು.ಬೆಳಕಿನ ಅಧ್ಯಯನ ಮಾಡಿ ಹೆಸರಾಂತ ವಿಜ್ಞಾನಿಯಾದರು ಎಂದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರುಗಳಾದ ಎಸ್. ಬಿ.ದರೂರ
ಎಲ್. ಆರ್ ಸಾಲಿಮಠ, ಎ. ಡಿ. ಪಡಗಾನೂರ, ಕವಿತಾ ಕಟಗಿ,
ಜ್ಯೋತಿ ಕಲ್ಯಾಣಿ, ವಿದ್ಯಾಶ್ರಿ ನೇಮಗೌಡರ, ಶೋಭಾ
ಪಾಲಬಾಂವಿ ಮತ್ತು ಅಡುಗೆ ಸಿಬ್ಬಂದಿಯವರು
ಉಪಸ್ಥಿತರಿದ್ದರು.