ಮೂಡಲಗಿ:-ಪಟ್ಟಣದ ವೀರಭದ್ರ ವೈವಿಧ್ಯಮಯ ಕಲೆಯಲ್ಲಿ ಪುರವಂತಿಕೆಯು ಬೆಳೆದುಕೊಂಡು ಬಂದಿರುವುದು. ವಿಜಯನಗರ ಶಾಸನವೊಂದರ ಪ್ರಕಾರ ವೀರಭದ್ರ ಎಂಟು ಕೈಗಳನ್ನು ಹೊಂದಿದ್ದು,ಎಲ್ಲ ಕೈಗಳಲ್ಲು ವಿವಿಧ ಆಯುಧಗಳಿವೆ. ಕರ್ನಾಟಕದ ವೀರಶೈವ ಸಮುದಾಯದ ಆರಾಧ್ಯ ದೈವ ವೀರಭದ್ರ.ಗುಗ್ಗಳ ಸೇವೆ ಮಾಡುವವರು/ನಡೆಸಿಕೊಡುವವರು ವೀರಗಾಸೆ, ಪುರವಂತರ ಕುಣಿತ ಇದು ಒಂದು ಜಾನಪದ ಶೈಲಿಯ, ಧಾರ್ಮಿಕ ಆಚರಣೆ.ಕಾವಿ ದೋತರ,ತಲೆಗೆ ಕಾವಿ ರುಮಾಲು (ಪೇಟ), ಬೆಳ್ಳಿಯ ನಾಗರ ತೋಳಬಂದಿ,ಕಿವಿಯಲ್ಲಿ ರುದ್ರಾಕ್ಷಿ ,ಮುಂಗೈಯಲ್ಲಿ ರುದ್ರಾಕ್ಷಿ, ಕೊರಳಿಗೆ ರುದ್ರಾಕ್ಷಿ ಮಾಲೆ,ಹಣೆಗೆ ವಿಭೂತಿ, ಸೊಂಟಕ್ಕೆ ಬಣ್ಣದ ಬಟ್ಟೆ ಹಾಗೂ ಗಂಟೆ,ಎದೆಯ ಮೇಲೆ ರುದ್ರನ ಪ್ರತಿಮೆ/ಮುಖ,, ಬಲಗೈಯಲ್ಲಿ ಕತ್ತಿ,ಕಾಲಿನಲ್ಲಿ ಝಣಝಣಿಸುವ ಗೆಜ್ಜೆ,ಮೊಣಕಾಲಿಗೆ ಗಗ್ಗರ,ದಪ್ಪವಾದ ಮೀಸೆ,ಸಾಕ್ಷಾತ ವೀರಭದ್ರನ ಪುನರವತಾರ ಎಂಬಂತೆ ಆವೇಶ ಕಾಣುವ ಮೂಲಕ ಕತೆಯನ್ನು ನಿರೂಪಿಸುವ ಪುರವಂತರು. ಎಡಗೈಯಲ್ಲಿ ನಿಂಬೆಹಣ್ಣು-ಶಸ್ತ್ರ ಹಿಡಿದು ಅಹಹಾ..ವೀರಾ…ಅಹಹಾ…ಕರುಣಾ ಸಮುದ್ರ…ಶ್ರೀ ವೀರಭದ್ರ ಕತಕ್ಕಡೆ..ಎಂದು ಹೇಳುತ್ತಾ ಹಿಂದೆ,ಮುಂದೆ ಹೆಜ್ಜೆ ಹಾಕುವರು.
ಪುರವಂತಿಕೆ ಕರ್ನಾಟಕದ ಒಂದು ಜನಪದ ಕಲೆ.ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಕಂಡು ಬರುವ ಪುರವಂತರು ಶೈವ ಸಂಪ್ರದಾಯದ ವೀರರಸ ಪ್ರಧಾನವಾದ ಧಾರ್ಮಿಕ ಕುಣಿತ ಸುಮಾರು ಅರವತ್ತು ವರ್ಷ ಹಿಂದಿನಿಂದ ಈ ಪುರವಂತರು ತಮ್ಮ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಂಡು ಬಂದಿರುವರು.
ಮೂಡಲಗಿಯಲ್ಲಿ ಗುರುಸಿದ್ದಪ್ಪ ಅಂಗಡಿ,ಶಿವಬಸು ಮಗದುಮ್ಮ, ವಿರೂಪಾಕ್ಷಪ್ಪ ವಾಲಿ, ಮಹಾಲಿಂಗಪ್ಪ ಬೆಳಕೂಡ, ಶ್ರೀಶೈಲ ಒಂಟಗೂಡಿ,ವೀರಭದ್ರ ಅಂಗಡಿ ಇನ್ನು ಅನೇಕರು ಪುರವಂತರಾದ ಮೊದಲಿಗರು.
ಕಲ್ಲಪ್ಪ ಅಂಗಡಿ,ಈರಯ್ಯ ಹಿರೇಮಠ, ಮಲ್ಲಪ್ಪ ಗುದಗಪ್ಪನ್ನವರ,ಶಿವರಾಯಪ್ಪ ನಿಂಗನೂರ,ಮಹಾದೇವ ಆಲಗುಂಡಿಯವರು ಇಂದಿನ ಪುರವಂತರು. ಇಂದು ಪುರವಂತರನ್ನಾಗಿ ಹೊಸಬರಿಗೆ ಬೆಳೆಸುವ ಜವಾಬ್ದಾರಿ ಸಹ ಇದೆ. ಈ ಕಲೆಗೆ ಇತಿಹಾಸ ಕೂಡಾ ಇದೆ.ಧಾರ್ಮಿಕವಾಗಿ ಬೆಳೆದುಕೊಂಡು ಬಂದಿರುವ ಈ ವೀರಗಾಸೆ ಕುಣಿತ ಮರೆಯಾಗದಂತೆ ನಾವು ಹೊಸಬರನ್ನು ಹುಟ್ಟಹಾಕಬೇಕಾಗಿದೆ. ಮೊಬೈಲ್ ಯುಗದಲ್ಲಿ ಮುಜುಗರ ಆಗುವ ಕುಣಿತ ಬಿಟ್ಟು ಯುವಜನಾಂಗಕ್ಕೆ ಈ ಸೇವೆ ಮುಂದುವರೆಸಿಕೊಂಡು ಹೋಗಬೇಕಾದ ಜವಾಬ್ದಾರಿಯಿದೆ ಎಂದು ಕಲ್ಲಪ್ಪ ಅಂಗಡಿ ಕಳವಳ ವ್ಯಕ್ತಪಡಿಸಿದ್ದಾರೆ.
ಪುರವಂತರ ವೇಷ ನೋಡಲು ಸ್ವಲ್ಪ ಯಕ್ಷಗಾನದ ಹಾಗೆ ಕಾಣುತ್ತದೆ. ಯಕ್ಷಗಾನ ಮೊದಲು ಧಾರ್ಮಿಕ, ಶುಭ ಕಾರ್ಯಕ್ರಮಕ್ಕೆ ಮೀಸಲಾಗಿತ್ತು,ದಿನಗಳು ಉರುಳಿದಹಾಗೆ ಅಟ್ಟ ಹತ್ತಿ ಪ್ರಸಿದ್ದಿ ಪಡೆಯಿತು. ಪುರವಂತರು ಸಾಧ್ಯವಾದರೆ ಬದಲಾವಣೆ ಮೂಲಕ ಅಟ್ಟ ಹತ್ತ ಬಹುದು?,ಬದಲಾಣೆ ಮಾಡಿಕೊಂಡರೆ ಮಾತ್ರ.
ಇತಿಹಾಸ ನೆನಪು ಮಾಡುವ ಸನ್ನಿವೇಶ ರೂಪಿಸಿಕೊಂಡು ಅಟ್ಟ ಹತ್ತಿರುವುದು ಯಕ್ಷಗಾನ.ಅದೇ ರೀತಿಯಾಗಿ ಪುರವಂತರು ಕತೆ ಬದಲಾವಣೆ ಮಾಡಿಕೊಂಡರೆ ಅಟ್ಟ ಹತ್ತಬಹುದು. ಪುರವಂತರ ಕಲೆ ಉಳಿಯಲಿ ಎಂಬುದು ವೀರಭದ್ರನ ಭಕ್ತರ ಆಸೆ.