Homeಸುದ್ದಿಗಳುನೇಪಾಳ; ವಿಮಾನ ಅಪಘಾತ ೭೨ ಜನರ ಸಾವು

ನೇಪಾಳ; ವಿಮಾನ ಅಪಘಾತ ೭೨ ಜನರ ಸಾವು

ಕಾಠ್ಮಂಡು – ನೇಪಾಳದ ಕಾಠ್ಮಂಡುವಿನಿಂದ ಪೋಖರಾಗೆ ಹೊರಟಿದ್ದ ವಿಮಾನವೊಂದು ಅಪಘಾತಕ್ಕಿಡಾಗಿದ್ದು ಅದರಲ್ಲಿದ್ದ ನಾಲ್ವರು ಸಿಬ್ಬಂದಿ ಸೇರಿದಂತೆ ಎಲ್ಲ ೭೨ ಜನರ ದುರಂತ ಮರಣಕ್ಕೀಡಾಗಿದ್ದಾರೆ.

ಅಪಘಾತದಲ್ಲಿ ಮಹಾರಾಷ್ಟ್ರದ ಠಾಣೆಯ ಒಂದೆ ಕುಟುಂಬದ ನಾಲ್ವರು ಮೃತರಾಗಿದ್ದಾರೆನ್ನಲಾಗಿದೆ. ಅಶೋಕ ಕಲುಮಾರ್, ಪತ್ನಿ ವೈಭವಿ ಹಾಗೂ ಮಕ್ಕಳಾದ ಧನುಷ್ ರಿತಿಕಾ ಸಾವನ್ನಪ್ಪಿದವರು.

ಪ್ರಸಿದ್ಧ ಸುದ್ದಿ ಸಂಸ್ಥೆ ಎಎನ್ಐ ಈ ಬಗ್ಗೆ ಟ್ವೀಟ್ ಮಾಡಿದ್ದು, ನೇಪಾಳದ ಪೋಖರಾ ನಿಲ್ದಾಣದಲ್ಲಿ ಸಂಭವಿಸಿದ ಅಪಘಾತದಲ್ಲಿ ೫೩ ನೇಪಾಳಿಗರು, ೫ ಭಾರತೀಯರು, ೪ ರಷಿಯನ್ನರು, ಒಬ್ಬ ಐರಿಷ್, ೨ ಕೊರಿಯನ್ನರು, ಅರ್ಜೆಂಟೀನಾ ಹಾಗೂ ಫ್ರಾನ್ಸ್ ನ ಒಬ್ಬೊಬ್ಬರು ಮರಣ ಹೊಂದಿರುವುದಾಗಿ ಏರ್ ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾಗಿ ಹೇಳಿದೆ.

RELATED ARTICLES

Most Popular

error: Content is protected !!
Join WhatsApp Group