spot_img
spot_img

ಕಲಿತ ಶಾಲೆ ಮತ್ತು ಕಲಿಸಿದ ಗುರುಗಳನ್ನು ಎಂದೂ ಮರೆಯಬಾರದು – ನಾಗೇಶ ಹೊನ್ನಳ್ಳಿ

Must Read

- Advertisement -

ಮುನವಳ್ಳಿ: ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಇತ್ತೀಚೆಗೆ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಧಾನ ಗುರುಗಳಾದ ಪಿ.ಪಿ.ಶೀಲವಂತ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸವ್ಯಸಾಚಿ ಗೆಳೆಯರ ಬಳಗದ ಅಧ್ಯಕ್ಷರಾದ ಪಾಂಡುರಂಗ ಹೊನ್ನಳ್ಳಿ ಅವರು ವಹಿಸಿದ್ದರು. ಅತಿಥಿಗಳು ಮತ್ತು ಉಪನ್ಯಾಸಕರಾಗಿ ಸಂಪನ್ಮೂಲ ವ್ಯಕ್ತಿಗಳಾದ ನಾಗೇಶ್ ಹೊನ್ನಳ್ಳಿ ಮಾತನಾಡಿ, “ಕಲಿತ ಶಾಲೆ ಮತ್ತು ಕಲಿಸಿದ ಗುರುಗಳನ್ನು ಎಂದೂ ಮರೆಯಬಾರದು” ಎಂದು ಹೇಳಿ “ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯದ ಜೀವನ ಹೇಗಿರಬೇಕೆಂದು” ಹೇಳಿದರು.

- Advertisement -

ಈ ಸಂದರ್ಭದಲ್ಲಿ 8ನೇ ತರಗತಿಯ ಶಿಕ್ಷಕರಾದ ವಾಯ್.ಟಿ. ತಂಗೋಜಿ ಅವರು ಮಾತನಾಡಿ “ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಿರಲಿ” ಎಂದು ಹರಸಿದರು. ಶಿಕ್ಷಕಿಯರಾದ ಕುಮಾರಿ ಎನ್.ಎನ್.ಕುರಿಯವರು ಮಾತನಾಡಿ, “ವಿದ್ಯಾರ್ಥಿ ಜೀವನದಲ್ಲಿ ಗುರಿ ಮತ್ತು ಗುರು ಬಹಳ ಮುಖ್ಯ” ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಶ್ರೀಮತಿ ಯು.ಎಸ್.ಏಣಗಿಮಠ, ವಾಯ್.ಟಿ.ತಂಗೋಜಿ,ಡಾ. ಎನ್.ಆರ್.ಚಲವಾದಿ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಇಕೋ ಕ್ಲಬ್ ವತಿಯಿಂದ ನಡೆದ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. 8ನೇ ತರಗತಿಯ ಆದರ್ಶ ವಿದ್ಯಾರ್ಥಿ ಎಂದು ಕುಮಾರ್ ಮಲ್ಲಿಕಾರ್ಜುನ ಸುಣಗಾರ ವಿದ್ಯಾರ್ಥಿಯನ್ನು ಆದರ್ಶ ವಿದ್ಯಾರ್ಥಿ ಆಯ್ಕೆ ಮಾಡಿ ಅಭಿನಂದಿಸಲಾಯಿತು.

ಕಾರ್ಯಕ್ರಮದ ನಿರೂಪಣೆಯನ್ನು ದೈಹಿಕ ಶಿಕ್ಷಕ ಬಿ.ಎಚ್.ಖುಂದುನಾಯಕ್ ನಿರೂಪಿಸಿದರು. ಗುರುಮಾತೆ ಪಿ.ಎಸ್ ಕಮತಗಿ ಸ್ವಾಗತಿಸಿದರು ಗುರುಮಾತೆ ಎಸ್.ಸಿ. ಹೊನ್ನಳ್ಳಿ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ-ಶಿಕ್ಷಕಿಯರು ವಿದ್ಯಾರ್ಥಿಗಳು ಹಾಜರಿದ್ದರು.

- Advertisement -
- Advertisement -

Latest News

ಹುಬ್ಬಳ್ಳಿ ಕೊಲೆ ಪ್ರಕರಣ ತನಿಖೆ ಸಿಬಿಐಗೆ ಕೊಡಬೇಕು

ಬೆಂಗಳೂರಿನ ತನ್ನದೆ ಪಕ್ಷದ ಶಾಸಕನ ಮನೆ ಬೆಂಕಿಗೆ ಆಹುತಿಯಾಗುವುದನ್ನು ತಡೆಯದ ಕಾಂಗ್ರೆಸ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ತನ್ನದೆ ಪಕ್ಷದ ನಗರ ಸೇವಕನ ಮಗಳ ಹತ್ಯೆಯನ್ನ...
- Advertisement -

More Articles Like This

- Advertisement -
close
error: Content is protected !!
Join WhatsApp Group