spot_img
spot_img

ಹೊಸತನದ ಆಸಕ್ತಿಯೇ ಗಜಲ್ ಬೆಳವಣಿಗೆಗೆ ಕಾರಣ

Must Read

spot_img
- Advertisement -

ಅತ್ತಣ ಕೋಗಿಲೆ ಇತ್ತಣ ಮಾಮರ ಅತ್ತಣ ಪರ್ಷ್ಯಾದ ಗಜಲ್ ಇತ್ತಣ ಕರ್ನಾಟಕದ ಮಾಮರ ಎಂಬ ಹಾಗೆ ಗಜಲ್ ನಡೆದು ಬಂದ ದಾರಿಯಾಯಿತು ಹೊಸತನ್ನು ಹೊಸೆವ ಆಸಕ್ತಿ ಗಜಲ್ ಬೆಳವಣಿಗೆಗೆ ಕಾರಣ ಎಂದು ಮಂಗಳೂರಿನ ಕಣಚೂರು ಹಾಗೂ ಮಂಗಳಾ ಆಸ್ಪತ್ರೆಯ ವೈದ್ಯ ಹಾಗೂ ಬರಹಗಾರ ಡಾ. ಸುರೇಶ ನೆಗಳಗುಳಿಯವರು ದಿ. ೨೫  ರಂದು ಕಲಬುರ್ಗಿಯಲ್ಲಿ ವಿಶ್ವ ವಿದ್ಯಾಲಯ,ಗಜಲ್ ಎಕಾಡೆಮಿಗಳ ಸಹಯೋಗದಲ್ಲಿ ನಡೆದ ಪ್ರಥಮ ಅಂತಾರಾಷ್ಟ್ರೀಯ ಗಜಲ್ ಸಮ್ಮೇಳನದಲ್ಲಿ ಮಾತನಾಡಿದರು.

ಗಜಲ್ ನಡೆದು ಬಂದ ಹಾದಿ ಎಂಬ ಗೋಷ್ಠಿಯ ಚಾಲನೆ ಮಾಡಿದ ಅವರು ಭಾರತದ ಹೆಸರಾಂತ ಗಜಲ್ ಕಾರರ  ಬಗೆಗೆ ಹೇಳುತ್ತಾ ಕರ್ನಾಟಕ ಇಂದು ಅತಿ ಹೆಚ್ವು ಗಜಲ್ ಬರಹಗಾರರನ್ನು ಹೊಂದಿದೆ. ಭಾವನೆಗೆ ನಿಯಮಾವಳಿಗಳ ಮೂಲಕ ಕೊಡುವ ಚೌಕಟ್ಟು ಗಜಲ್ ಗೆ ಮೂಲ ಸ್ತಂಭ ಎಂದವರು ಹೇಳಿದರು.

ಖ್ಯಾತ ಕವಿ ಅಲ್ಲಾಗಿರಿ ರಾಜರ ಅಧ್ಯಕ್ಷತೆಯಲ್ಲಿ ನಡೆದ ಈ ಗೋಷ್ಠಿಯಲ್ಲಿ ಶ್ರೀದೇವಿ ಕೆರೆಮನೆ , ಯಾಕೊಳ್ಳಿ ಹಾಗೂ ಅರುಣಾ ನರೇಂದ್ರ ರವರು ಪ್ರಬುದ್ಧ ಪ್ರಬಂಧ ಮಂಡಿಸಿದರು.
ಸಂಘಟಕ ಮಹೀಪಾಲ ರೆಡ್ಡಿ,ಹೈತೋ,ಗಜಲ್ ಎಕಾಡೆಮಿ ಅಧ್ಯಕ್ಷ ರಂಗಸ್ವಾಮಿ, ರತ್ನ ರಾಯ ಮಲ್ಲ, ಸಿದ್ಧರಾಮ ಹೊನಕಲ್, ಹಾ.ಮ.ಸತೀಶ, ಮತ್ತು ಆಕಾಶವಾಣಿಯ ಸದಾನಂದ ಪೆರ್ಲ, ಡಾ ಹಸೀನಾ ಶಿವಮೊಗ್ಗ , ನೂರ್ ಮಹಮ್ಮದ್, ನಂರುಶಿ ಮತ್ತನೇಕ ಖ್ಯಾತನಾಮರು ಉಪಸ್ಥಿತರಿದ್ದರು.

- Advertisement -

ನೂರು ಕವಿಗಳ ರಚಿತ ಗಜಲ್ ಸಂಕಲನ ಬಿಡುಗಡೆ ಈ ಸಂದರ್ಭದ ವಿಶೇಷತೆಗಳಲ್ಲೊಂದು.
ನಟ ನಿರೂಪಕ ಗಾಯಕ ಶ್ರೀನಿವಾಸ ಪ್ರಭು ಪ್ರಮುಖ ಆಕರ್ಷಣೆಯಾಗಿದ್ದರು.

- Advertisement -
- Advertisement -

Latest News

ಜಾನುವಾರುಗಳಿಗೆ ಉಚಿತ ತಪಾಸಣಾ ಶಿಬಿರ

ಶ್ರೀಮತಿ ಸೋಮವ ಚನ್ನಬಸಪ್ಪ ಅಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೆ ಕೆ ಕೊಪ್ಪ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ವತಿಯಿಂದ ಜಾನುವಾರುಗಳಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group