spot_img
spot_img

ಅಮಾವಾಸ್ಯೆ ಸತ್ಸಂಗ ವಿಶೇಷ ಉಪನ್ಯಾಸ ಮತ್ತು ಸನ್ಮಾನ ಸಮಾರಂಭ

Must Read

- Advertisement -

ಅರಿವಿನ ಸಂಸ್ಕಾರ ಮತ್ತು ಕಾಯಕದಿಂದ ಸಮಾಜ ಪರಿವರ್ತನೆ ಸಾಧ್ಯ : ಶರಣೆ ವಿದ್ಯಾ ನೀಲಪ್ಪನವರ

ರವಿವಾರ ದಿ.2 ರಂದು ಅಖಿಲ ಭಾರತ ವೀರಶೈವ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಅಮಾವಾಸ್ಯೆ ವಿಶೇಷ ಉಪನ್ಯಾಸ ಮತ್ತು ಸನ್ಮಾನ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಮ. ನಿ. ಪ್ರ.ಗುರುಸಿದ್ಧ ಮಹಾಸ್ವಾಮಿಗಳು 12ನೇ ಶತಮಾನದ ವಚನ ಸಾಹಿತ್ಯದ ವಿಚಾರಧಾರೆಗಳು ಕೇವಲ ಕೇಳದೆ, ಚಿಂತನೆ ಮಾಡಿ ಅವುಗಳನ್ನು ಅನುಸರಿಸಿ ವಿನಯದಿಂದ ಒಳ್ಳೆಯದನ್ನು ಮಾಡಬೇಕಿದೆ. ವಚನ ಸಾಹಿತ್ಯದಿಂದ ವಿವಿಧ ಭಾಷಿಕರು ಮತ್ತು ಧರ್ಮದವರು ಸಹ ಪರಿವರ್ತನೆಯಾಗಬೇಕು ಆ ನಿಟ್ಟಿನಲ್ಲಿ ವಚನಗಳು ವಿವಿಧ ಭಾಷೆಗಳಲ್ಲಿ ಪ್ರಸಾರವಾಗಬೇಕು ಎಂದರು.

- Advertisement -

ಅಧ್ಯಕ್ಷತೆ ವಹಿಸಿದ್ದ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಇನ್ನು ಕಿರಿಯರಿಗೆ ಅವಕಾಶ ಕೊಟ್ಟು ಸಮಾನತೆ ತರುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಉಪನ್ಯಾಸ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ಕಿರಿಯರಿಗೆ ನೀಡುವ ಪದ್ಧತಿ ಅನುಸರಿಸೋಣ ಎಂದರು. ಅಮಾವಾಸ್ಯೆ ಸತ್ಸಂಗದ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದ ಬೈಲಹೊಂಗಲದ ಶರಣೆ ವಿದ್ಯಾ ನೀಲಪ್ಪ ನವರ ‘ ಕಲ್ಯಾಣ ಕ್ರಾಂತಿ ‘ ವಿಷಯ ಕುರಿತು 12ನೇ ಶತಮಾನದಲ್ಲಿ ಆದ ಕ್ರಾಂತಿ ನಿಜಕ್ಕೂ ಅದ್ಭುತ ಕಾಯಕ ತತ್ವವನ್ನು ಅಸ್ತ್ರವಾಗಿ ಮಾಡಿಕೊಂಡು ಮೇಲ್ವರ್ಗ ಮತ್ತು ಕೆಳವರ್ಗ ಎಂಬ ಭೇದ ಭಾವವನ್ನು ಹೊಸಕಿ ಹಾಕಿ ಸಮಾಜದ ಶುದ್ಧೀಕರಣ ಮಾಡುವ ನಿಟ್ಟಿನಲ್ಲಿ ಹೋರಾಡಿದ ಕಾಯಕಜೀವಿ ಬಸವಣ್ಣನವರ ಶ್ರಮ ನಿಜಕ್ಕೂ ಸಾರ್ಥಕವಾಗಬೇಕಾದರೆ ನಾವು ಅಂತರಂಗ, ಬಹಿರಂಗ ಶುದ್ಧಿಯಾಗಿ ಅರಿವಿನ ಸಂಸ್ಕಾರದೊಂದಿಗೆ ಕಾಯಕ ಮಾಡಿದಾಗ ಸಮಾಜವನ್ನು ಪರಿವರ್ತಿಸಬಹುದು. ಕಾಯಕ ತತ್ವದಡಿ ತನು-ಮನ-ಧನದ ಸೇವೆ ನಿಷ್ಠೆಯಿಂದ ಆಗಬೇಕು ಎಂದು 12ನೇ ಶತಮಾನದಲ್ಲಿ ಆದ ಕಲ್ಯಾಣ ಕ್ರಾಂತಿಯ ಕುರಿತು ವಿವರವಾಗಿ ಎಳೆಎಳೆಯಾಗಿ ಕ್ರಾಂತಿಯ ಯಶೋಗಾಥೆಯನ್ನು ಬಿಚ್ಚಿಟ್ಟರು. ಕಾರ್ಯಕ್ರಮದಲ್ಲಿ ಇತ್ತೀಚಿಗೆ ನೂತನವಾಗಿ ವಿಧಾನಪರಿಷತ್ತಿಗೆ ಆಯ್ಕೆಯಾದ ಸಮಾಜದ ಚೆನ್ನರಾಜ್ ಹಟ್ಟಿಹೊಳಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾಗಿ ಮರು ಆಯ್ಕೆಯಾದ ಮಂಗಲಾ ಮೆಟಗುಡ್, ನಾಗನೂರು ರುದ್ರಾಕ್ಷಿಮಠದಿಂದ ‘ಪ್ರಸಾದ ಶ್ರೀ ‘ ಪ್ರಶಸ್ತಿ ಪಡೆದ ಸಾಹಿತಿ, ಶರಣೆ ಗುರುದೇವಿ ಹುಲೆಪ್ಪನವರಮಠ ರವರನ್ನು ಸತ್ಕರಿಸಿ ಸನ್ಮಾನಿಸಲಾಯಿತು.

- Advertisement -

ಸನ್ಮಾನ ಸ್ವೀಕರಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್, ಶರಣರು ಜೀವನದ ಹಂಗು ತೊರೆದು ನಮ್ಮ ಜೀವನದ ಮರ್ಮ ಹೊಂದಿರುವ ವಚನಸಾಹಿತ್ಯವನ್ನು ರಚಿಸಿ ಉಳಿಸಿದ್ದಾರೆ ನಮ್ಮೆಲ್ಲರ ಜೀವನವನ್ನು ಬೆಳಗಲು ಬಳಕೆಯಾಗಬೇಕು. ಸಾಹಿತ್ಯ ನಾಡು-ನುಡಿ- ಬೆಳೆಯಲು ಶ್ರಮಿಸೋಣ ಎಂದರು.

ಕಾರ್ಯಕ್ರಮದಲ್ಲಿ ಹಿರಿಯರಾದ ಡಾ. ಹೆಚ್.ಬಿ. ರಾಜಶೇಖರ, ರಮೇಶ ಕಳಸಣ್ಣವರ, ಸಿ.ಎಸ್. ಬೆಂಬಳಗಿ,ಪಾರ್ವತಿ ರಾಜಶೇಖರ, ಅಹಲ್ಯಾದೇವಿ ಪಾಟೀಲ, ನಿರ್ಮಲಾ ಬಟ್ಟಲ,ಲಕ್ಷ್ಮಿ ತಲ್ಲೂರ,ಪ್ರೇಮಾ ಪಾನಶೆಟ್ಟಿ, ಜಗದೀಶ್ ಅಮಾಶಿ, ಎಂ ವೈ. ಮೆಣಸಿನಕಾಯಿ,ಶಿವಾನಂದ ತಲ್ಲೂರ,ರಮೇಶ ನೀಲಪ್ಪನವರ, ವೀರಭದ್ರ ಕಾಪಸಿ, ರವೀಂದ್ರ ಬೆಲ್ಲದ, ಚಂದ್ರಕಾಂತ ಪಾಟೀಲ ಸೇರಿದಂತೆ ಅನೇಕ ಹಿರಿಯರು, ಶರಣ ಶರಣೆಯರು ಭಾಗಿಯಾಗಿದ್ದರು. ಕಾರ್ಯಕ್ರಮ ನಿಮಿತ್ತ ಶರಣೆ ಜಯಶೀಲಾ ಬ್ಯಾಕೋಡ ಪ್ರಸಾದ ಸೇವೆ ಹಮ್ಮಿಕೊಂಡಿದ್ದರು. ಆರಂಭದಲ್ಲಿ ವಿಜಯಾ ಹಿರೇಮಠ ಪ್ರಾರ್ಥಿಸಿದರು. ಹೀರಾ ಚೌಗುಲೆ ವಚನ ಚಿಂತನೆ ನಡೆಸಿಕೊಟ್ಟರು. ಗೀತಾ ಬೆನಚಿನಮರಡಿ ಸ್ವಾಗತಿಸಿದರು. ಶರಣೆ ಆಶಾ ಯಮಕನಮರಡಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು ಕೊನೆಯಲ್ಲಿ ವೀರಭದ್ರ ಅಂಗಡಿ ವಂದಿಸಿದರು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group