spot_img
spot_img

ಅಂಧರ ಸಹಕಾರ ಸಂಘಗಳಿಗಾಗಿ ನೂತನ ಸಾಫ್ಟವೇರ್ ಅಭಿವೃದ್ಧಿ-ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಂಗರಾವ್ ಕೃಷ್ಣ

Must Read

- Advertisement -

ಮೈಸೂರಿನ ಸಿತಾರಾ ಐಟಿ ಇನೋವೇಷನ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಗರದ ಜೆ.ಎಲ್.ಬಿ ರಸ್ತೆಯ ಖಾಸಗಿ ಹೋಟೇಲ್‌ನಲ್ಲಿ ೨೯.೦೭.೨೦೨೪ ರಂದು ಅಂಧರಿಗಾಗಿ ಏಷ್ಯಾದಲ್ಲಿ ಮೊಟ್ಟ ಮೊದಲ ಬಾರಿಗೆ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗಳಿಗಾಗಿ ಸಾಫ್ಟವೇರ್ ಅಭಿವೃದ್ಧಿಪಡಿಸಿದೆ.

ಕಾರ್ಯಕ್ರಮದಲ್ಲಿ ಸಿತಾರಾ ಸಾಫ್ಟವೇರ್ ಕಂಪನಿಯ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರಾದ ರಂಗರಾವ್ ಕೃಷ್ಣ ರವರು ಮಾತನಾಡಿ ಏಷ್ಯಾದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅಂಧರಿಗಾಗಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗಳಿಗಾಗಿ ಸಾಫ್ಟವೇರ್‌ನ್ನು ಅಭಿವೃದ್ಧಿಪಡಿಸಿ, ಸಹಕಾರ ಸಂಘಗಳು, ಸಾರ್ವಜನಿಕ ವಿತರಣಾ ವ್ಯವಸ್ಥೆ, ಅತಿ ಹೆಚ್ಚು ಗ್ರಾಹಕರನ್ನು ಒಳಗೊಂಡಿರುವ ಇನ್ನಿತರ ಚಟುವಟಿಕೆಗಳನ್ನು ಹೊಂದಿರುವುದರಿಂದ ಲೆಕ್ಕಪತ್ರ ಹಾಗೂ ಪುಸ್ತಕಗಳ ವಹಿವಾಟು ನಡೆಸಲು ಪ್ರಸ್ತುತ ಸಂದರ್ಭದಲ್ಲಿ ಕಷ್ಟಕರವಾಗಿದೆ. ಆದ್ದರಿಂದ ಇದಕ್ಕೆ ಪರಿಹಾರವಾಗಿ ನೂತನವಾಗಿ ಸಿತಾರಾ ಐಟಿ ಇನೋವೇಷನ್ ಕಂಪನಿಯು ಸುಸ್ಥಿರ ಹೊಂದಿರುವ ಅಭಿವೃದ್ಧಿಯನ್ನು ಸಾಫ್ಟವೇರ್‌ನಲ್ಲಿ ಒದಗಿಸಿದೆ. ಅದರಲ್ಲೂ ಅಂಧರ ಸಹಕಾರ ಸಂಘಗಳಿಗೆ ಸಾಫ್ಟವೇರ್‌ನ್ನು ಸಿದ್ಧ ಪಡಿಸುವುದು ಒಂದು ದೊಡ್ಡ ಸವಾಲಾಗಿತ್ತು ಏಕೆಂದರೆ ಅದರ ಬಳಕೆಗೆ ಅನುಗುಣವಾಗಿ ಅಂಧರಿಗೆ ಕಾರ್ಯಗತಗೊಳಿಸಲು ಮೌಖಿಕವಾದ ಸೂಚನೆಗಳನ್ನು ಸಾಫ್ಟವೇರ್‌ನಲ್ಲಿ ತಿಳಿಸಬೇಕಿತ್ತು. ಅದನ್ನು ವಿಶೇಷವಾಗಿ ಧ್ವನಿ ಆಧಾರಿತ ಸೂಚನೆಗಳನ್ನು ಅಳವಡಿಸಿ ಕಂಪ್ಯೂಟರ್‌ನ್ನು ನೋಡದೆ ಇರುವವರಿಗೂ, ಬಳಕೆದಾರರಿಗೂ ಸಹಾಯಕವಾಗಲೆಂದು ಈ “ವೆಬ್ ಬೇಸ್ಟ್” ಎಂಬ ಸಾಫ್ಟವೇರ್‌ನ್ನು ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದರು.

ಇದು ಅಂಧರಿಗೆ ಸಹಕಾರ ಕ್ಷೇತ್ರದಲ್ಲಿ ಪರಿಹಾರ ಕಂಡುಕೊಳ್ಳುವಲ್ಲಿ ಹೆಚ್ಚು ಸಹಕಾರಿಯಾಗುತ್ತದೆ. ಅಲ್ಲದೆ ಧ್ವನಿ ಆಧಾರಿತ ಸಾಫ್ಟವೇರ್‌ನ್ನು ಅಭಿವೃದ್ಧಿಪಡಿಸಿರುವುದು ಕೂಡ ಇದೇ ಏಷ್ಯಾದಲ್ಲಿಯೇ ಮೊಟ್ಟಮೊದಲ ಬಾರಿಗೆ ಎಂದು ತಿಳಿಸಿದರು.

- Advertisement -

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಪರಮ ಪೂಜ್ಯ ಸೋಮೇಶ್ವರ ಸ್ವಾಮಿಜಿ ರವರು ಜ್ಯೋತಿ ಬೆಳಗಿಸಿ ಮಾತನಾಡಿ ಇಂದು ಸಹಕಾರ ಕ್ಷೇತ್ರ ಸಮಾಜದಲ್ಲಿ ಅತಿ ದೊಡ್ಡ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಅಂಧರು ತಮ್ಮ ಕಾರ್ಯವೈಖರಿಯನ್ನು ನಡೆಸಲು ಧ್ವನಿ ಮುದ್ರಿತ ಸಾಫ್ಟವೇರ್‌ನ್ನು ಅಳವಡಿಸಿರುವುದು ಶ್ಲಾಘನೀಯ ವಿಚಾರ ಎಂದರು.

ನೊಂದವರ ಮನಸ್ಸುಗಳಿಗೆ ಸಹಾಯ, ಸಹಕಾರ ನೀಡುವುದು ನಮ್ಮೆಲ್ಲರ ಕರ್ತವ್ಯವೆಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಕೆ.ಎಸ್.ಇ.ಸಿ ಸೊಸೈಟಿ ಫಾರ್ ಬ್ಲೈಂಡ್‌ನ ಅಧ್ಯಕ್ಷರಾದ ವೀರಕ್ಯಾತಯ್ಯ ರವರು ಮಾತನಾಡಿ ಸಾಫ್ಟವೇರ್ ಬಳಸಬೇಕಾದರೆ ಅದರ ಬಗ್ಗೆ ತಿಳಿವಳಿಕೆ ಜ್ಞಾನ ಅರಿತಿರಬೇಕು. ಶೇ.೭೦ ರಿಂದ ೮೦ ರಷ್ಟು ಸಾಫ್ಟವೇರ್‌ಗಳು ಕೆಲಸ ನಿರ್ವಹಿಸುತ್ತವೆ ಇನ್ನು ಉಳಿದ ಶೇ.೨೦ ರಷ್ಟು ಮನುಷ್ಯ ಮಾತ್ರ ಕೆಲಸ ನಿರ್ವಹಿಸುತ್ತಾನೆ. ನಮ್ಮಂತಹ ಅಂಧರಿಗೆ ಸಾಫ್ಟವೇರ್‌ನಿಂದ ಧ್ವನಿಯನ್ನು ಗ್ರಹಿಸಿ ಅದನ್ನು ಅರ್ಥ ಮಾಡಿಕೊಳ್ಳುವುದು ಅತ್ಯಂತ ಸುಲಭದ ಕೆಲಸ ಎಂದು ತಿಳಿಸಿ ರಾಜ್ಯದಲ್ಲಿ ಇದೇ ಮೊಟ್ಟ ಮೊದಲ ಭಾರಿಗೆ ಸ್ಥಾಪಿತವಾಗಿರುವುದರಿಂದ ಅಂಧರ ಬಾಳಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಸುಮ ಕೃಷ್ಣ, ಅಭಿಷೇಕ್, ರೋ.ಸುನಿಲ್ ಬಾಳಿಗಾ, ಶೃಂಗೇರಿ ಶಾಖಾಮಠದ ಮೈಸೂರಿನ ಧರ್ಮದರ್ಶಿಗಳಾದ ಹೆಚ್.ರಾಮಚಂದ್ರ, ರಾಕೇಶ್ ಕೆ.ಬಿ, ಅರುಣ್ ರವರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ರಂಗರಾವ್ ಕೃಷ್ಣ ರವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಹಾಡಿದರೆ, ಕೀರ್ತಿ ಸಿ.ವಿ ಕಾರ್ಯಕ್ರಮ ನೆರವೇರಿಸಿಕೊಟ್ಟರು.

- Advertisement -
- Advertisement -

Latest News

ಶಿಕ್ಷಕರಾದ ಮೆಟ್ಯಾಲಮಠ ರವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

ಬೆಳಗಾವಿ:-ತಾಲೂಕಿನ ಹಿಂಡಲಗಾ ವಿಜಯನಗರ ದ ಸರಕಾರಿ ಪ್ರಾಥಮಿಕ ಮರಾಠಿ ಶಾಲೆಯ ಕ್ರಿಯಾಶೀಲ ಕನ್ನಡ ಶಿಕ್ಷಕರಾದ ರುದ್ರಯ್ಯ ಈರಯ್ಯ ಮೆಟ್ಯಾಲಮಠ ರವರಿಗೆ ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group