ಮೂಡಲಗಿ : ಪತ್ರಿಕಾ ವಿತರಕರ ದಿನ ಆಚರಣ
ಮೂಡಲಗಿ -ಸೆ. ೪ ರಂದು ಇಲ್ಲಿನ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಹಾಗೂ ಲಯನ್ಸ್ ಕ್ಲಬ್ ಪರಿವಾರ ಮೂಡಲಗಿ ಇವರ ಸಹಯೋಗದಲ್ಲಿ ಪತ್ರಿಕಾ ವಿತರಕರ ದಿನಾಚರಣೆಯನ್ನು ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೃಷ್ಣಾ ಗಿರೆನ್ನವರ ವಹಿಸಿದ್ದರು.
ಪತ್ರಕರ್ತ ಬಾಲಶೇಖರ ಬಂದಿ ಪ್ರಾಸ್ತಾವಿಕವಾಗಿ ಮಾತನಾಡಿ, ಒಂದು ಪತ್ರಿಕೆಗೆ ಸಂಪಾದಕರು, ಪ್ರಕಾಶಕರು, ಲೇಖಕರು, ವರದಿಗಾರರು ಎಲ್ಲರೂ ಇರುತ್ತಾರೆ ಆದರೆ ಅದು ಓದುಗರನ್ನು ಮುಟ್ಟಿಸಿದಾಗ ಮಾತ್ರ ಸಾರ್ಥಕತೆ ಪಡೆದುಕೊಳ್ಳುತ್ತದೆ. ಅದಕ್ಕೆ ಕಾರಣರಾಗುವವರು ವಿತರಕರು. ಜನರಿಗೆ ತಲುಪುವಲ್ಲಿ ವಿತರಕರ ಪಾತ್ರ ಬಹಳ ದೊಡ್ಡದು ಎಂದು ಹೇಳಿದರು.
ನಿಮಗೆ ಸಾಕಷ್ಟು ಸಮಸ್ಯೆಗಳಿವೆ. ಕೊರೋನಾ ಸಮಯದಲ್ಲಿಯೂ ಕೂಡ ಜೀವದ ಹಂಗು ತೊರೆದು ಪತ್ರಿಕೆಗಳನ್ನು ಹಂಚಿದ್ದೀರಿ, ಈಗಲೂ ಕೂಡ ಸಾಕಷ್ಟು ಅಡೆತಡೆಗಳು, ಅಪಾಯಗಳನ್ನು ಎದುರಿಸಿ ಪತ್ರಿಕೆಗಳನ್ನು ಹಂಚುವ ಕೆಲಸವನ್ನು ಮಾಡುತ್ತೀರಿ ನಿಮ್ಮ ಸೇವೆಯನ್ನು ಎಷ್ಟು ಕೊಂಡಾಡಿದರೂ ಸಾಲದು. ವಿತರಕರ ಸಮಸ್ಯೆಗಳು ಪರಿಹಾರವಾಗಬೇಕಾದರೆ ಸರ್ಕಾರ ಇತ್ತ ಗಮನಹರಿಸಬೇಕು. ಆದ್ದರಿಂದ ವಿತರಕರ ದಿನ ಆಚರಣೆ ಮಾಡುವ ಮೂಲಕ ನಾವು ಸರ್ಕಾರದ ಗಮನ ಸೆಳೆಯುತ್ತೇವೆ ಎಂದರು
ಲಯನ್ಸ್ ಕ್ಲಬ್ ಅಧ್ಯಕ್ಷ ಸಂಜಯ ಮೊಖಾಶಿ ಮಾತನಾಡಿದರು, ಪತ್ರಕರ್ತರಾದ ಉಮೇಶ ಬೆಳಕೂಡ, ಚಂದ್ರಶೇಖರ ಪತ್ತಾರ ಮಾತನಾಡಿದರು.
ಮನೆಮನೆಗೆ ಸಮಯಕ್ಕೆ ಸರಿಯಾಗಿ ಪತ್ರಿಕೆಯನ್ನು ತಲುಪಿಸುವ ಪತ್ರಿಕಾ ವಿತರಕರಿಗೆ ಕಾಣಿಕೆಗಳನ್ನು ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಾ ಗಿರೆನ್ನವರ, ಪತ್ರಕರ್ತರಾದ ಅಲ್ತಾಫ ಹವಾಲ್ದಾರ, ಶಿವಬಸು ಗಾಡವಿ, ಸುಭಾಸ ಕಡಾಡಿ, ಲಿಂಗಪ್ಪ ಗಾಡವಿ, ಮಲ್ಲು ಬೋಳನವರ ಉಪಸ್ಥಿತರಿದ್ದರು.