spot_img
spot_img

ನಿಕ್ರೋಮ್ ಸಂಶೋಧಕ ಆಲ್ಬರ್ಟ್ ಮಾರ್ಷ್

Must Read

- Advertisement -

ಎಲೆಕ್ಟ್ರಿಕ್ ಕಾಯಿಲ್ ಸ್ಟೌವ್ ನಲ್ಲಿ ಸಾಮಾನ್ಯವಾಗಿ ನಿಕ್ರೋಮ್ ಎಂಬ ಮಿಶ್ರಲೋಹದ ತಂತಿಯನ್ನು ಬಳಸುತ್ತಾರೆ. ವಿದ್ಯುತ್ ನಿಂದ ಬಿಸಿ ಮಾಡುವ ಹೇರ್ ಡೈಯರ್, ವಾಟರ್ ಹೀಟರ್, ಇಸ್ತ್ರಿ ಪೆಟ್ಟಿಗೆ, ಸಾಲ್ಡರಿಂಗ್ ಯಂತ್ರ, ಆಹಾರ ಬಿಸಿ ಮಾಡುವ ಬಹುತೇಕ ಯಂತ್ರಗಳಲ್ಲಿ ನಿಕ್ರೋಮ್ ಇರುತ್ತದೆ. ಇದು ಶೇ 80 ಭಾಗ ನಿಕ್ಕಲ್ ಮತ್ತು ಶೇ 20 ಭಾಗ ಕ್ರೋಮಿಯಂನಿಂದ ಮಾಡಲ್ಪಟ್ಟಿರುತ್ತದೆ.

ನಿಕ್ರೋಮ್ ಎಂಬ ಈ ಅದ್ಭುತ ಮಿಶ್ರಲೋಹವನ್ನು ಕಂಡುಹಿಡಿದವರು ಅಮೇರಿಕಾದ ಆಲ್ಬರ್ಟ್ ಮಾರ್ಷ್. ಇವರು 16 ಆಗಸ್ಟ್ 1877 ರಲ್ಲಿ ಜನಿಸಿದರು.

ಬಿಎಸ್ಸಿ ಕೆಮಿಕಲ್ ಇಂಜಿನಿಯರಿಂಗ್ ವಿಧ್ಯಾರ್ಥಿಯಾಗಿದ್ದ ಆಲ್ಬರ್ಟ್ ಮಾರ್ಷ್ ವಿದ್ಯುತ್ ಸಂಗ್ರಹಿಸುವ ಬ್ಯಾಟರಿಗಳ ಬಗ್ಗೆ ಅಧ್ಯಯನ ಮಾಡುವಾಗ ನಿಕ್ಕಲ್ ಮತ್ತು ಕ್ರೋಮಿಯಂ ಮಿಶ್ರ ಲೋಹಗಳ ಗುಣಗಳ ಬಗ್ಗೆ ಆಕರ್ಷಿತರಾದರು. ಇದೇ ಕಾರಣಕ್ಕಾಗಿ 1904 ರಲ್ಲಿ ಉದ್ಯಮಿ ವಿಲಿಯಂ ಹೋಸ್ಕಿನ್ಸ್ ಮಾಲೀಕತ್ವದ ಕಂಪನಿಯಲ್ಲಿ ಕಡಿಮೆ ಸಂಬಳದ ಕೆಲಸವೊಂದಕ್ಕೆ ಸೇರಿಕೊಂಡು ಬಿಡುವಿನ ವೇಳೆಯಲ್ಲಿ ತಮ್ಮ ಸಂಶೋಧನೆ ಮುಂದುವರೆಸಿದರು.

- Advertisement -

ಮರುವರ್ಷವೇ ಅಂದರೆ 1905 ರಲ್ಲಿ ಆಗಿನ ಕಾಲಕ್ಕೆ ಸಾಮಾನ್ಯ ತಂತಿಗಿಂತ 300 ಪಟ್ಟು ಹೆಚ್ಚಿನ ಶಾಖ ತಡೆದುಕೊಳ್ಳುವ ನಿಕ್ಕಲ್ ಮತ್ತು ಕ್ರೋಮಿಯಂ ಮಿಶ್ರಲೋಹದ ತಂತಿಯನ್ನು ತಯಾರಿಸಿದರು. ಆಗ ಇದನ್ನು ಕ್ರೊಮೇಲ್ ಎಂದು ಕರೆಯಲ್ಪಟ್ಟರೂ ಕೆಲ ವರ್ಷಗಳ ನಂತರ ಇದು ನಿಕ್ರೋಮ್ ಎಂದು ಬದಲಾಯಿಸಲ್ಪಟ್ಟಿತು.

ಆಲ್ಬರ್ಟ್ ರ ಈ ಸಂಶೋಧನೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಕಾರ್ಯಗಳಿಗೆ ನೆರವಾಯಿತು. ಮಾನವನ ಉಪಯೋಗಕ್ಕೆ ಬರುವ ವಸ್ತುಗಳ ದೃಷ್ಟಿಯಿಂದ ನೋಡಿದಾಗ ನಿಕ್ರೋಮ್ ಆಧುನಿಕ ಜಗತ್ತಿನ ಅದ್ಭುತಗಳಲ್ಲಿ ಒಂದು ಎನ್ನಬಹುದು. ನಿಕ್ರೋಮ್ ಕಂಡು ಹಿಡಿದ ನಂತರ ಆಲ್ಬರ್ಟ್ ಕೆಲಸ ಮಾಡುತ್ತಿದ್ದ ಹೊಸ್ಕಿನ್ಸ್ ಕಂಪನಿಯ ಅದೃಷ್ಟ ಖುಲಾಯಿಸಿತು. 1906 ರಲ್ಲಿ ತಾನು ಸಂಶೋಧಿಸಿದ ಮಿಶ್ರಲೋಹಕ್ಕೆ ಪೇಟೆಂಟ್ ಪಡೆದ ಆಲ್ಬರ್ಟ್, ಹೋಸ್ಕಿನ್ಸ್ ಕಂಪನಿಯ ಮೂಲಕ ಆರಂಭಿಕವಾಗಿ ಹಲವಾರು ಉಪಕರಣಗಳ ತಯಾರಿಕೆಗೂ ಕಾರಣರಾದರು. ತಾವು ಪತ್ತೆ ಹಚ್ಚಿದ ವಸ್ತು ಹಠಾತ್ತನೆ ದೊಡ್ಡ ಮಟ್ಟದ ಯಶಸ್ಸು ಗಳಿಸಿ ಜಾಗತಿಕವಾಗಿ ಸುದ್ಧಿಯಾಗಿ ಹಣ, ಹೆಸರು, ಪ್ರಶಸ್ತಿಗಳನ್ನು ತಂದುಕೊಟ್ಟರೂ ಕೊನೆಯವರೆಗೂ ನಿರಂತರವಾಗಿ ಸಂಶೋಧನೆಯನ್ನು ಮುಂದುವರೆಸಿದರು.

ಹೀಗಾಗಿ ಇವರನ್ನು “ವಿದ್ಯುತ್ ನಿಂದ ಬಿಸಿಯಾಗುವ ಉಪಕರಣಗಳ ಕೈಗಾರಿಕೆಯ ಪಿತಾಮಹ” ಎನ್ನುವುದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ.

- Advertisement -

ಒಮ್ಮೆ ಎಲೆಕ್ಟ್ರಿಕ್ ಸ್ಟೌವ್ ನ ನಿಕ್ರೋಮ್ ತಂತಿ ಕಟ್ ಆಯಿತು, ಆಗ ಕಬ್ಬಿಣದ ತಂತಿಯನ್ನು ಜೋಡಿಸಿ ವಿದ್ಯುತ್ ಹಾಯಿಸಿದಾಗ ಲೋಹಕ್ಕೂ, ನಿಕ್ರೋಮ್ ಮಿಶ್ರಲೋಹಕ್ಕೂ ಇರುವ ವ್ಯತ್ಯಾಸದ ಪ್ರತ್ಯಕ್ಷ ದರ್ಶನವಾಯಿತು. ಆ ಮೂಲಕ ಈ ಆಲ್ಬರ್ಟ್ ಮಾರ್ಷ್ ಎಂಬ ಮಹನೀಯನ ಬಗ್ಗೆ ತಿಳಿಯಲು ಸಾಧ್ಯವಾಯಿತು.

ನೂರಾರು ವರ್ಷಗಳ ಹಿಂದೆ ಈ ಲೋಹಶಾಸ್ತ್ರಜ್ಞ ಆಲ್ಬರ್ಟ್ ಮಾರ್ಷ್ ತಯಾರಿಸಿದ ಮಿಶ್ರಲೋಹ ಇಂದಿಗೂ ನಮ್ಮೆಲ್ಲರ ಜೀವನದಲ್ಲಿ ದಿನನಿತ್ಯವೂ ಒಂದಲ್ಲ ಒಂದು ರೂಪದಲ್ಲಿ ನೆರವು ನೀಡುತ್ತಿದೆ.

ಡಾ. ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಬೆಳಗಾವಿ – ಮನಗೂರು ವಿಶೇಷ ರೈಲು ಅ.16 ರಿಂದ

ಬೆಳಗಾವಿ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ಬೆಳಗಾವಿ- ಮನಗೂರು ವಿಶೇಷ ಎಕ್ಸ್ಪ್ರೆಸ್ ರೈಲಿನ ಸಂಚಾರವು ಅ-16 ರಿಂದ ಪ್ರಾರಂಭವಾಗಲಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group