ಮೂಡಲಗಿ -ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ೪ನೆಯ ಸೆಮಿಸ್ಟರನಲ್ಲಿ ಓದುತ್ತಿರುವ ವಿದ್ಯಾರ್ಥಿನಿ ನಿರ್ಮಲಾ ಸುಭಾಸ ಕೊಡ್ಲಿಕಾರ ೨ನೆಯ ಏಷ್ಯನ್ ಯೋಗಾಸನ ಚಾಂಪಿಯನಷಿಪ್ ದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾಳೆ.
ಜೂನ,೦೭ರಂದು ವಿಯೆಟ್ನಾಂ ದೇಶದ ಹೋಚಿಮಿನ್ಹ್ ಸಿಟಿಯಲ್ಲಿ ಜರುಗಲಿರುವ ೨ನೆಯ ಅಂತಾರಾಷ್ಟ್ರೀಯ ಯೋಗಾಸನ ಚಾಂಪಿಯನಷಿಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವವಳು.
ವಿದ್ಯಾರ್ಥಿನಿಗೆ ಎಮ್ ಇ ಎಸ್ ಅಧ್ಯಕ್ಷರಾದ ವೆಂಕಟೇಶ ಸೋನವಾಲಕರ ೨೫ ಸಾವಿರ ರೂಪಾಯಿ ಸಹಾಯ ಧನ ನೀಡಿದರು.
ಸಂಸ್ಥೆಯ ಉಪಾಧ್ಯಕ್ಷ ರವಿ ಸೋನವಾಲಕರ, ಸುಭಾಸ ಸೋನವಾಲಕರ, ಬಿ.ಎಚ್.ಸೋನವಾಲಕರ, ಶಿವು ಹೊಸೂರ, ಪ್ರಾಚಾರ್ಯ ಜಿ.ವಿ.ನಾಗರಾಜ ಮತ್ತು ಎಮ್.ಕೆ.ಕಂಕಣವಾಡಿ ಉಪಸ್ಥಿತರಿದ್ದರು.