ಬೆಳಗಾವಿ – ಈಗಿನ ಆಹಾರ ಬೆಳೆಗಳಿಗೆ ರಾಸಾಯನಿಕ ಸಿಂಪಡಿಸುವುದರಿಂದ ಸತ್ವಗುಣ ಇರುವುದಿಲ್ಲ. ಎಲ್ಲ ಹೈಬ್ರಿಡ್ ಆಗಿದೆ. ನವಣೆ ಕಿಚಡಿ ಮತ್ತು ನವಣಿ ಅನ್ನವನ್ನು ಅಳತೆಗೆ ಸರಿಯಾಗಿ ತಿನ್ನುವವನು ಯಾವ ಶಾರೀರಿಕ ಕಷ್ಟಗಳಿಗೂ ಬಲಿ ಬೀಳುವುದಿಲ್ಲ ಈ ಮಾತು ಸುಳ್ಳಲ್ಲ ಎಂದು ಸರ್ವಜ್ಞನು ಹೇಳಿರುವನು ಎಂದು ಜಮಖಂಡಿಯ ರಾಜಕುಮಾರ ಲಕ್ಷಾನಟ್ಟಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ವತಿಯಿಂದ ದಿನಾಂಕ 30.07.2024 ರಂದು ಆಯುರ್ವೇದ ಕುರಿತು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ರಾಗಿಯನ್ನು ಉಣ್ಣುವವನು ಯಾವ ರೋಗವಿಲ್ಲದೆ ಆರೋಗ್ಯದಿಂದ ಇರುವನು ಒಪ್ಪತ್ತು ಊಟ ಮಾಡುವನು ತ್ಯಾಗಿಯೆನಿಸುವನು ಎರಡು ಹೊತ್ತು ಊಟ ಮಾಡುವವನು ಭೋಗಿಯೆನಿಸುವನು ಹೆಚ್ಚೆಚ್ಚು ಊಟ ಮಾಡುವವನು ನಿಜವಾಗಿಯೂ ರೋಗಿ ಆಗುವನು ಎಂದು ಸರ್ವಜ್ಞನ ವಚನಗಳನ್ನು ನೆನೆಸಿದರು.
ಎಂ ವೈ ಮೆಣಸಿನಕಾಯಿಯವರು ಆಯು ಎಂದರೆ ಆಯಸ್ಸು ವೇದ ಎಂದರೆ ಜ್ಞಾನ ರಸ, ರಕ್ತ ,ಮಾಂಸ ,ಅಸ್ಥಿಮಜ್ಜೆ, ಶುಕ್ರ, ಮತ್ತು ಮೇದಸ್ಸುಗಳೆಂಬ ಏಳು ಧಾತುಗಳಿವೆ. ಯಾವ ವ್ಯಕ್ತಿ ಸಮದೋಷ, ಸಮಾಗ್ನಿ, ಸಮಧಾತು, ಪ್ರಸನ್ನ, ಆತ್ಮ ಮತ್ತು ಮನಸ್ಸುಗಳಿಂದ ಕೂಡಿರುತ್ತಾನೋ ಆತನೆ ಆರೋಗ್ಯವಂತ ಎಂದು ಆಯವೇ೯ದ ಹೇಳುತ್ತದೆ ಎಂದರು.
ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರು ವಹಿಸಿದ್ದರು ಅತಿಥಿಗಳಾಗಿ ಅಣ್ಣಪೂಣ೯ ಖನೋಜ ಆಗಮಿಸಿದ್ದರು ಸ ರಾ ಸುಳಕೂಡೆ, ಎಸ್ ಎಸ್ ಪಾಟೀಲ, ಯ ರು ಪಾಟೀಲ, ಬಾಳಗೌಡ ದೊಡಬಂಗಿ, ಬಸವರಾಜ ಹೂಗಾರ, ಎಂ ಡಿ ಅಲಾಸೆ, ಆರ್. ವಿ. ಬನಶಂಕರಿ ವಿಜಯಲಕ್ಮೀ ಲಕ್ಷಾನಟ್ಟಿ, ಇತರರು ಉಪಸ್ಥಿತರಿದ್ದರು. ವೀರಭದ್ರ ಅಂಗಡಿ, ಸ್ವಾಗತಿಸಿ ವಂದಿಸಿದರು.