spot_img
spot_img

ಭಾವೈಕ್ಯದ ಜಾತ್ರೆಯಲ್ಲಿ ನೋ ಧರ್ಮ ದಂಗಲ್

Must Read

- Advertisement -

ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ 700 ವರ್ಷಗಳ ಐತಿಹಾಸಿಕ ಅಷ್ಟೂರು ಜಾತ್ರೆ ಇಂದು ಹಿಂದೂ – ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದೆ.

ಕರಾವಳಿ ಭಾಗದ ಕೆಲವು ದೇವಸ್ಥಾನಗಳಲ್ಲಿ ಮುಸ್ಲಿಮ್ ವ್ಯಾಪಾರಸ್ಥರಿಗೆ ಹಿಂದೂಪರ ಸಂಘಟನೆಗಳು ನಿರ್ಬಂಧ ವಿಧಿಸಿವೆ. ಮುಸಲ್ಮಾನರು ಹೈಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಒಂದು ದಿನ ಕರ್ನಾಟಕ ಬಂದ್ ಗೆ ಕರೆ ಕೊಟ್ಟ ಹಿನ್ನೆಲೆಯಲ್ಲಿ ಸಂವಿಧಾನ ವಿರೋಧಿಗಳನ್ನು ಹಿಂದೂ ಜಾತ್ರೆಯಿಂದ ಬಹಿಷ್ಕಾರ ಹಾಕುವುದಾಗಿ ಹೇಳಿಕೊಂಡ ಹಿಂದೂ ಕಾರ್ಯಕರ್ತರು ಮುಸ್ಲಿಮ್ ವ್ಯಾಪಾರಸ್ಥರಿಗೆ ಬಹಿಷ್ಕಾರ ಹಾಕಿದ್ದಾರೆ.

ಆದರೆ ಗಡಿ ಜಿಲ್ಲೆ ಬೀದರ್ ನ ಈ ಜಾತ್ರೆಯಲ್ಲಿ ಇಂಥ ಯಾವುದೇ ನಿರ್ಬಂಧ ಹೇರದೆ ವ್ಯಾಪಾರ ಮಾಡುವ ಮೂಲಕ ಸಮಾಜಕ್ಕೆ ಭಾವೈಕ್ಯತೆಯ ಸಂದೇಶ ಸಾರಲಾಗಿದೆ.

- Advertisement -

ಒಂದು ಕಡೆ ರಾಜ್ಯದ ಜಾತ್ರೆ ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ಬ್ರೇಕ್ ಹಾಕಿ ಧರ್ಮ ದಂಗಲ್ ಗೆ ಕಾರಣವಾಗಿರುವ ದೃಶ್ಯಗಳು, ಮತ್ತೊಂದು ಕಡೆ ಈ ಜಾತ್ರೆಯಲ್ಲಿ ಹಿಂದೂ – ಮುಸ್ಲಿಂರೆಲ್ಲ ಸೇರಿ ವ್ಯಾಪಾರ ಮಾಡುತ್ತಾ ನೋ ಧರ್ಮ ದಂಗಲ್ ಎನ್ನುತ್ತಿರುವ ದೃಶ್ಯಗಳು.

ಹೌದು, ಹಿಜಾಬ್ ಪ್ರಕರಣದಲ್ಲಿ ಮುಸಲ್ಮಾನರು ಹೈಕೋರ್ಟ್ ಆದೇಶವನ್ನು ವಿರೋಧಿಸಿ ಒಂದು ದಿನ ವ್ಯಾಪಾರ ವಹಿವಾಟು ಬಂದ್ ಮಾಡಿದರು ಅದೇ ಈಗ ಮುಸ್ಲಿಮರ ವ್ಯಾಪಾರಕ್ಕೆ ಹಿಂದೂ ದೇವಸ್ಥಾನಗಳಲ್ಲಿ ಬ್ರೇಕ್ ಹಾಕುವ ಮೂಲಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಧರ್ಮ ದಂಗಲ್ ಗೆ ಕಾರಣವಾಗಿದೆ.

- Advertisement -

ಆದ್ರೆ ಗಡಿ ಬೀದರ್ ತಾಲೂಕಿನ ಅಷ್ಟೂರು ದರ್ಗಾದಲ್ಲಿ ನಡೆಯುತ್ತಿರುವ ಮುಸ್ಲಿಂರು ಬಹುಮನಿ ಸುಲ್ತಾನ್ ಹಾಗೂ ಹಿಂದೂಗಳ ಅಲ್ಲಮಪ್ರಭು ದೇವರು ಎನ್ನುವ ಜಾತ್ರೆಯಲ್ಲಿ ಹಿಂದೂ – ಮುಸ್ಲಿಂ ಧರ್ಮೀಯರು ಒಟ್ಟಿಗೆ ದರ್ಗಾ ದಲ್ಲಿ ಪೂಜೆ ಮಾಡಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ… ಇನ್ನೊಂದು ವಿಶೇಷವೆಂದರೆ ಎಂದಿನಂತೆ ಈ ಬಾರಿಯೂ ಹಿಂದೂ – ಮುಸ್ಲಿಂರು ವ್ಯಾಪಾರ ಮಾಡುವ ಮೂಲಕ ನಾವೆಲ್ಲಾ ಒಂದೇ ಎನ್ನುವ ಸಂದೇಶ ಸಮಾಜಕ್ಕೆ ಸಾರಿದ್ದಾರೆ.


ನಾಲ್ಕು ದಿನ ನಡೆಯುವ ಈ ಐತಿಹಾಸಿಕ ಜಾತ್ರೆಯಲ್ಲಿ ಹಿಂದೂ – ಮುಸ್ಲಿಂ ಬಾಂಧವರು ಬಟ್ಟೆ ಅಂಗಡಿ, ತೆಂಗಿನ ಕಾಯಿ ಅಂಗಡಿ, ಮಕ್ಕಳ ಆಟದ ಸಾಮಾನುಗಳು, ಸಕ್ಕರೆ ಸರ ಅಂಗಡಿ ಸೇರಿದಂತೆ ವಿವಿಧ ರೀತಿಯ ಅಂಗಡಿಗಳನ್ನು ಹಾಕಿಕೊಂಡು ದ್ವೇಷ – ಭಾವವಿಲ್ಲದೆ ವ್ಯಾಪಾರ ಮಾಡುತ್ತಿದ್ದಾರೆ… ತೆಲಂಗಾಣ, ಮಹಾರಾಷ್ಟ್ರ, ಅಂತರ ಜಿಲ್ಲೆ ಹಾಗೂ ಜಿಲ್ಲೆಯ ಹತ್ತಾರು ಹಳ್ಳಿಗಳಿಂದ ಲಕ್ಷಾಂತರ ಜನರು ಈ ಐತಿಹಾಸಿಕ ಜಾತ್ರೆಗೆ ಬರುತ್ತಾರೆ… ಜೊತೆಗೆ ಇಲ್ಲಿ ನಡೆಯುವ ವಿಶೇಷ ಕುಸ್ತಿ ಪಂದ್ಯ ನೋಡಲು ಕುಸ್ತಿ ಪಟುಗಳು ಸೇರಿದಂತೆ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಣ್ಣು ತುಂಬಿಕೊಳ್ಳುತ್ತಾರೆ… ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಹಿಜಾಬ್ ಹಾಗೂ ವ್ಯಾಪಾರಕ್ಕೆ ಬ್ರೇಕ್ ಹಾಕುವ ಮೂಲಕ ಧರ್ಮ ದಂಗಲ್ಗೆ ಕಾರಣವಾಗಿದೆ.ಆದ್ರೆ ಸಾಮಾಜಿಕ ಸಮಾನತೆಗಾಗಿ ಹೋರಾಟ ಮಾಡಿದ್ದ ವಿಶ್ವಗುರು ಬಸವಣ್ಣನ ಕರ್ಮಭೂಮಿಯಲ್ಲಿ ಮಾತ್ರ ಯಾವುದೇ ಧರ್ಮ ದಂಗಲ್ ಗೆ ಎರಡೂ ಕೋಮುಗಳ ಜನರು ಆಸ್ಪದ ಕೊಟ್ಟಿಲ್ಲ.
ಎಲ್ಲಾರು ಸ್ವಯಂ ಆಗಿ ಮಳಿಗಳನ್ನು ಹಂಚಿಕೊಂಡು ವ್ಯಾಪಾರ ಮಾಡುವ ಮೂಲಕ ನಾವೆಲ್ಲಾ ಒಂದೇ ಎನ್ನುವ ಸಾಮಾಜಿಕ ಸಂದೇಶ ಸಾರಿದ್ದಾರೆ…

– ಸುಲ್ತಾನ್ ಖಲಿಲ್ ಸಾಬ್ (ದರ್ಗಾದ ಮುಸ್ಲಿಂ ಗುರುಗಳು)
– ಮಹ್ಮದ್ ಜಾಫರ್ ಷಾ (ಮುಸ್ಲಿಂ ವ್ಯಾಪಾರಿ)


ರಾಜ್ಯದಲ್ಲಿ ವಿವಿಧ ಕಾರಣಗಳನ್ನು ಇಟ್ಟುಕೊಂಡು ಹಿಂದೂ – ಮುಸ್ಲಿಂ ಕೋಮಿನವರಲ್ಲಿ ವಾರ್ ನಡೆಯುತ್ತಿರುವಾಗ ಗಡಿ ಜಿಲ್ಲೆ ಬೀದರ್ ನ ಜಾತ್ರೆಯಲ್ಲಿ ಭಾವೈಕ್ಯತೆಯ ಸಂದೇಶ ಸಾರುತ್ತಿರುವುದು ಸಂತೋಷದ ಸಂಗತಿಯಾಗಿದೆ… ಐತಿಹಾಸಿ ಅಷ್ಟೂರು ಜಾತ್ರೆಯಲ್ಲಿ ಹಿಂದೂ – ಮುಸ್ಲಿಂ ಬಾಂಧವರು ವ್ಯಾಪಾರ ಮಾಡುವ ಮೂಲಕ ಧರ್ಮ ದಂಗಲ್ಗೆ ಟಾಂಗ್ ಕೊಟ್ಟಿದ್ದು ವಿಶೇಷವೇ ಸರಿ… ಇನ್ನಾದ್ರು ಎಲ್ಲಾ ಧರ್ಮೀಯರು ವಿನಾಕಾರಣ ಕೋಮು ಭಾವನೆಗಳನ್ನು ಬಿಟ್ಟು ಸಹಬಾಳ್ವೆಯಿಂದ ಬಾಳಿ ಏಕತೆಯನ್ನು ಮೆರೆಯಲಿ ಎನ್ನುವುದು ನಮ್ಮ ಆಶಯವಾಗಿದೆ.

-ದತ್ತು (ಹಿಂದೂ ವ್ಯಾಪಾರಸ್ಥ)

- Advertisement -
- Advertisement -

Latest News

ಬೆಳಗಾವಿ – ಮನಗೂರು ವಿಶೇಷ ರೈಲು ಅ.16 ರಿಂದ

ಬೆಳಗಾವಿ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ಬೆಳಗಾವಿ- ಮನಗೂರು ವಿಶೇಷ ಎಕ್ಸ್ಪ್ರೆಸ್ ರೈಲಿನ ಸಂಚಾರವು ಅ-16 ರಿಂದ ಪ್ರಾರಂಭವಾಗಲಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group