- Advertisement -
ಮೂಡಲಗಿ – 110ಕೆವಿ ವಿದ್ಯುತ್ ವಿತರಣಾ ಕೇಂದ್ರ ಮೂಡಲಗಿದಲ್ಲಿ 3 ನೇ ತ್ರೈಮಾಸಿಕ ನಿರ್ವಹಣೆ ಕೆಲಸವನ್ನು ದಿನಾಂಕ 03/12/2024 ಮಂಗಳವಾರ ರಂದು ಕೈಕೊಳ್ಳಲು ಉದ್ದೇಶಿಸಿರುವುದರಿಂದ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಪ್ರಕಟಣೆಯೊಂದರಲ್ಲಿ ಅವರು, 110ಕೆವಿ ಮೂಡಲಗಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಮೂಡಲಗಿ ಮತ್ತು ಗುರ್ಲಾಪೂರ ಪಟ್ಟಣ ಹಾಗೂ ಎಲ್ಲಾ 11ಕೆವಿ ನೀರಾವರಿ ಪಂಪಸೆಟ್ ಮಾರ್ಗಗಳಲ್ಲಿ ಮುಂಜಾನೆ 10:00 ರಿಂದ ಸಂಜೆ 05:00 ಘಂಟೆಯವರೆಗೆ ವಿದ್ಯುತ್ ನಿಲುಗಡೆ ಆಗುವುದರಿಂದ ಗ್ರಾಹಕರಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.ಕಾರಣ ಹೆಸ್ಕಾಂ ಗ್ರಾಹಕರು ಸಹಕರಿಸಬೇಕಾಗಿ ಅವರು ಕೋರಿದ್ದಾರೆ.