- Advertisement -
ಮೂಡಲಗಿ: 110 ಕೆವಿ ವಿದ್ಯುತ್ ವಿತರಣಾ ಕೇಂದ್ರ ಮೂಡಲಗಿ ಹಾಗೂ ನಾಗನೂರ, ತಿಗಡಿ ಉಪ ಕೇಂದ್ರಗಳಲ್ಲಿ ಎರಡನೇ ತ್ರೈಮಾಸಿಕ ನಿರ್ವಹಣೆಯ ಕಾರ್ಯ ಕೈಗೊಳ್ಳಲು ಉದ್ದೇಶಿಸಿರುವ ಕಾರಣ ಶುಕ್ರವಾರ ಆ. 23 ರಂದು ಮುಂಜಾನೆ 10 ರಿಂದ ಸಂಜೆ 5 ಗಂಟೆಯವರೆಗೆ ಮೂಡಲಗಿ ಪಟ್ಟಣ, ಗುರ್ಲಾಪೂರ, ಈರಣ್ಣ ನಗರ, ನಾಗನೂರ ಹಾಗೂ ತಿಗಡಿ ಕೇಂದ್ರದ ಹೊನಕುಪ್ಪಿ, ಖಂಡ್ರಟ್ಟಿ ಎನ್ ಜೆ ವೈ ಮೇಲೆ ಬರುವ ಎಲ್ಲ ಗ್ರಾಮಗಳಲ್ಲಿ ಮತ್ತು 11 ಕೆವಿ ನೀರಾವರಿ ಪಂಪ್ ಸೆಟ್ ಮಾರ್ಗಗಳ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಕಾರಣ ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಎಂ ಎಸ್ ನಾಗನ್ನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.