spot_img
spot_img

ಕನ್ನಡದ ಪದವಿಧರರಿಗೆ ಉದ್ಯೋಗದ ಕೊರತೆಯಿಲ್ಲ – ಪ್ರೊ. ಸಿ. ಎಂ. ತ್ಯಾಗರಾಜ*

Must Read

- Advertisement -

ಬೆಳಗಾವಿ- ಕನ್ನಡದ ಪದವೀಧರರಿಗೆ ಉದ್ಯೋಗದ ಕೊರತೆಯಿಲ್ಲ.ಆದರೆ ಅದಕ್ಕೆ ಪೂರಕವಾಗಿ ಕೌಶಲ್ಯವು ಬೇಕಾಗುತ್ತದೆ. ಇಂತಹ ಕೌಶಲ್ಯಗಳನ್ನು ಪದವಿ ವಿದ್ಯಾರ್ಥಿಗಳಲ್ಲಿ ತುಂಬಬೇಕಾಗುತ್ತದೆ.ಕನ್ನಡದ ಪದವಿ ಪಠ್ಯವು ಇನ್ನು ಮುಂದೆ ಜ್ಞಾನ, ಕೌಶಲ್ಯ ಹಾಗೂ ಉದ್ಯೋಗಶೀಲ ಚಿಂತನೆಗಳನ್ನು ಆಧರಿಸಿರುತ್ತದೆ. ಹಾಗೆಂದು ಸಂಸ್ಕೃತಿ, ಸೃಜನಶೀಲತೆ ಮತ್ತು ಪರಂಪರೆಯ ಮೇಲೆ ಪಠ್ಯಗಳು ರಚನೆಯಾಗಬೇಕಿದೆ. ಭಾಷಾ ವಿದ್ಯಾರ್ಥಿಯು ಸಾಂಸ್ಕೃತಿಕ ರಾಯಭಾರಿಯಾಗಿ ರೂಪುಗೊಳ್ಳಬೇಕಾಗಿದೆ.ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಬರುವ ಶೈಕ್ಷಣಿಕ ವರ್ಷದಿಂದ ಕೌಶಲ್ಯ ಮತ್ತು ಉದ್ಯೋಗಾಧಾರಿತ ಹಲವು ಕೋರ್ಸ್ಗಳನ್ನು ಪದವಿ ವಿದ್ಯಾರ್ಥಿಗಳಿಗಾಗಿ ತೆರೆಯಲಿದೆಯೆಂದು ಕುಲಪತಿಗಳಾ ಪ್ರೊ. ಸಿ. ಎಂ. ತ್ಯಾಗರಾಜ ಅವರು ತಿಳಿಸಿದರು.

ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ, ಮರಾಠ ಮಂಡಳ ಕಲಾ, ವಿಜ್ಞಾನ, ವಾಣಿಜ್ಯ ಹಾಗೂ ಗೃಹ ವಿಜ್ಞಾನ ಮಹಾವಿದ್ಯಾಲಯ ಮತ್ತು ಬೆಳಗಾವಿಯ ಕನ್ನಡ ಭವನ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ಪದವಿ ಕಾಲೇಜಿನ ಕನ್ನಡ ಅಧ್ಯಾಪಕರಿಗೆ ಏರ್ಪಡಿಸಿದ್ದ ಒಂದು ದಿನದ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ೨೦೨೪-೨೫ನೆಯ ಸಾಲಿನಿಂದ ಕೌಶಲ್ಯ ಮತ್ತು ಉದ್ಯೋಗಾಧಾರಿತ ಪಠ್ಯಕ್ರಮವು ಜಾರಿಗೆ ಬರಲಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕುಲಸಚಿವರಾದ ಶ್ರೀಮತಿ ರಾಜಶ್ರೀ ಜೈನಾಪೂರ ಅವರು ಮಾತನಾಡಿ, ಕನ್ನಡ ವಿಷಯದ ಪಠ್ಯಕ್ರಮವು ಹೆಚ್ಚು ಸಂವೇದನಾಶೀಲವಾಗಿದೆ. ಅದರ ಜೊತೆಗೆ ಹೊಸ ತಂತ್ರಜ್ಞಾನವು ಮೈಗೂಡಿದಲ್ಲಿ ವಿದ್ಯಾರ್ಥಿಗಳು ಹೆಚ್ಚು ಪ್ರಜ್ಞಾವಂತರಾಗಲು ಸಹಾಯಕವಾಗುತ್ತದೆ. ಆದುದರಿಂದ ಹೊಸ ತಂತ್ರಜ್ಞಾನವನ್ನು ಪದವಿಯ ಹಂತದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆಕೊಟ್ಟರು.

- Advertisement -

ಕುಲಸಚಿವರು ಮೌಲ್ಯಮಾಪನರಾದ ಪ್ರೊ.ರವೀಂದ್ರನಾಥ ಕದಂ ಅವರು ಪಠ್ಯಗಳು ಸಮಕಾಲೀನ ಸಮಸ್ಯೆಗಳನ್ನು ಅರ್ಥೈಸಿಕೊಳ್ಳಲು ನೆರವಾಗಬೇಕೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ.ಎಸ್. ಎಂ. ಗಂಗಾಧರಯ್ಯ ಅವರು ಮುಂಬರುವ ದಿನಗಳ ಜಾಗತಿಕ ವಿದ್ಯಮಾನಗಳಿಗೆ ಕನ್ನಡದ ಮನಸ್ಸುಗಳು ತೆರೆದುಕೊಳ್ಳಬೇಕು. ಹೊಸ ತಂತ್ರಜ್ಞಾನ, ಅನ್ವೇಷಣೆಗಳನ್ನು ಪಠ್ಯಗಳಲ್ಲಿ ಅಳವಡಿಸಿಕೊಳ್ಳಬೇಕು.

ಸಂಪನ್ಮೂಲ ವ್ಯಕ್ತಿಗಳಾದ ಪ್ರೊ.ನಾರಾಯಣಸ್ವಾಮಿ ಅವರು ಸಮಕಾಲೀನ ಸಂದರ್ಭದ ಪಠ್ಯಕ್ರಮವನ್ನು ತಯಾರಿಸುವಲ್ಲಿ ಪ್ರಾಚೀನ ಮತ್ತು ಆಧುನಿಕ ವಿಷಯಗಳ ಪಠ್ಯಗಳ ಪಾತ್ರಗಳನ್ನು ಕುರಿತು ತಿಳಿಸಿದರು.ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಗಳಾದ ಪ್ರೊ.ಕೆ. ಸಿ. ಶಿವಾರೆಡ್ಡಿ ಅವರು ಜೀವನ ಕೌಶಲ್ಯಗಳನ್ನು ನಾವು ಕಳೆದುಕೊಂಡಿದ್ದೆವು. ಈಗ ಪಠ್ಯಕ್ರಮದ ಮೂಲಕ ಅವೇ ಜೀವನ ಕೌಶಲ್ಯಗಳು ಪಠ್ಯದ ವಿಷಯಗಳಾಗಿ ಹೊರಹೊಮ್ಮುತ್ತಿರುವುದು ಸಂತೋಷದ ಸಂಗತಿ ಎಂದರು.

- Advertisement -

ಈ ಸಂದರ್ಭದಲ್ಲಿಕನ್ನಡ ಪದವಿ ಮೌಲ್ಯಮಾಪನದ ಅಧ್ಯಕ್ಷರಾದ ಡಾ.ಎಸ್. ಐ. ಬಿರಾದಾರ, ಅಧ್ಯಾಪಕರ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ.ಸುರೇಶ ಹನಗಂಡಿ, ಕನ್ನಡ ಅಭ್ಯಾಸ ಮಂಡಳಿಯ ಸದಸ್ಯರಾದ ಡಾ.ಎಚ್. ಬಿ. ಕೋಲ್ಕಾರ ಹಾಗೂ ಡಾ. ಹನಮಂತಪ್ಪ ಹಾಲೊಳ್ಳಿ, ಕನ್ನಡ ಭವನದ ಸಂಚಾಲಕರಾದ ಶ್ರೀ. ಯ.ರು. ಪಾಟೀಲ, ಮರಾಠ ಮಂಡಳ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಚ್.ಜೆ. ಮೊಳೆರಾಖಿ ಹಾಗೂ ಸಂಯೋಜಿತ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರು ಉಪಸ್ಥಿತರಿದ್ದರು.

ಡಾ. ಆನಂದ ಜಕ್ಕಣ್ಣವರ ಕಾರ್ಯಕ್ರಮ ನಿರೂಪಿಸಿದರು.ಶಿವಾನಂದ ವಾಲಿಕಾರ ವಂದನೆಗಳನ್ನು ಸಲ್ಲಿಸಿದರು.ಅಧ್ಯಾಪಕರುಗಳು ಸಂವಾದದಲ್ಲಿ ಭಾಗಿಯಾಗಿದ್ದರು.

- Advertisement -
- Advertisement -

Latest News

ಕವನ : ಹೀಗೇ ಒಮ್ಮೆ

ಹೀಗೇ ಒಮ್ಮೆ ____________ ಹೀಗೇ ಒಮ್ಮೆ ನಾನು ನೀನು ಅದೇ ಮರದ ನೆರಳಲಿ ಕುಳಿತು ಮಾತಾಡಬೇಕಿದೆ ನೆನಪಿಸಿಕೊಳ್ಳಬೇಕಿದೆ ಮತ್ತೆ ಹಳೆಯ ಕ್ಷಣಗಳ ಹಂಚಿಕೊಂಡ ಕಥೆ ಕವನ ಮಾತು ಚರ್ಚೆ ಸಂವಾದ ನಗೆ ಪ್ರೀತಿಯ ಸವಿಯ ಸವಿಯಬೇಕಿದೆ. ಆಗ ನಮ್ಮಿಬ್ಬರ ಮಧ್ಯೆ ಮೆರೆದ ಆದರ್ಶಗಳ ಮೆಲುಕು ಹಾಕಬೇಕಿದೆ ಅಂದು ಮಳೆಯಲ್ಲಿ ತಪ್ಪನೆ...
- Advertisement -

More Articles Like This

- Advertisement -
close
error: Content is protected !!
Join WhatsApp Group