ಬೀದರ – ಕಾಂಗ್ರೆಸ್ ಒಳ ಜಗಳ ಹಿನ್ನೆಲೆಯಲ್ಲಿ ಸಿದ್ದು ಮತ್ತು ಡಿಕೆಶಿ ನಡುವೆ ವೈಮನಸು ಉಂಟಾಗಿದೆ. ಕಾಂಗ್ರೆಸ್ ಪಕ್ಷ ಪೂರ್ತಿ ಮುಳುಗಿ ಹೋಗುತ್ತದೆ. ಇಬ್ಬರ ನಡುವೆ ಜಗಳ ಮೂರನೆ ನಮಗೆ ಲಾಭವಾಗುತ್ತದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಹೇಳಿದರು.
ಬೀದರನಲ್ಲಿ ಮಾಧ್ಯಮದವರೊಡನೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಅಜೆಂಡಾ ಇಲ್ಲ.. ಏನೇ ಆದರೂ ಪ್ರತಿಭಟನೆ ಮಾಡುತ್ತಾರೆ..ನಮ್ಮ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಇದ್ದರೂ ಕೂಡ ಇಡಿ ಮುಂದೆ ತನಿಖೆಗಾಗಿ ಹಾಜರಾಗಿದ್ದರು.ಆಗ ಬಿಜೆಪಿ ಪ್ರತಿಭಟನೆ ಮಾಡಿಲ್ಲ. ಇಡಿ ನರೇಂದ್ರ ಮೋದಿ ಯವರಿಗೆ ಮೂರು ನಾಲ್ಕು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟು ಬಂದಿದ್ದಾರೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರು ಇಡಿ ಕೇಳಿದ ಪ್ರಶ್ನೆಗೆ ಉತ್ತರ ಕೊಡಲು ಯಾಕೆ ಹೆದರಬೇಕು ಎಂದು ಕೇಳಿದರು.
ದೇಶದಲ್ಲಿ ಕಾಂಗ್ರೆಸ್ ಧೂಳಿಪಟ ಆಗಿದೆ. ಅದಕ್ಕೆ ತಾವ ಬೆಲೆಯೂ ಇಲ್ಲ ಈಗ ಎಂದು ಪ್ರಭು ಚವ್ಹಾಣ ಹೇಳಿದರು.
ವರದಿ: ನಂದಕುಮಾರ ಕರಂಜೆ, ಬೀದರ